ಬೆಂಗಳೂರು: ಕಾಂಗ್ರೆಸ್ ಸರ್ಕಾರ ಅಧಿಕಾರ ನಡೆಸುತ್ತಾ ಇದೆ. ಬಿಜೆಪಿ ಈ ಬಾರಿಯ ಚುನಾವಣೆಯಲ್ಲಿ ಹೀನಾಯವಾಗಿ ಸೋತಿದೆ. ಇದರ ಪರಮಾರ್ಶೆಯನ್ನು ಕೂಡ ಈಗಾಗಲೇ ಬಿಜೆಪಿ ಮಾಡಿಕೊಂಡಿದೆ. ಆದರೂ ಇದೀಗ ಮತ್ತೆ ಆಕ್ಟೀವ್ ಆಗಲು ಸಿದ್ಧತೆ ನಡೆಸಿದೆ. ಇಂದು ಬಿಜೆಪಿ ಕಚೇರಿಯಲ್ಲಿ ಸಭೆಗಳು ನಡೆಯಲಿವೆ. ಈ ಸಭೆಯಲ್ಲಿ ಒಂದಷ್ಟು ಪ್ರಮುಖ ವಿಚಾರಗಳು ತೀರ್ಮಾನವಾಗಲಿವೆ.
ಸಂಘಟನೆ, ಸೋಲಿನ ಪರಾಮರ್ಶೆ, ಸರ್ಕಾರದ ವಿರುದ್ಧ ಹೋರಾಟಕ್ಕೆ ಸಜ್ಜಾಗುವುದರ ಬಗ್ಗೆಯೂ ಬಗ್ಗೆಯೂ ಚರ್ಚೆ ನಡೆಸಲಿದ್ದಾರೆ. ಬಿಜೆಪಿಯಲ್ಲಿ ಇನ್ನು ಕೂಡ ವಿಪಕ್ಷ ನಾಯಕನ ಆಯ್ಕೆಯಾಗಿಲ್ಲ. ಹೀಗಾಗಿ ಇಂದು ಮಲ್ಲೇಶ್ವರಂ ಕಚೇರಿಯಲ್ಲಿ ಬ್ಯಾಕ್ ಟು ಬ್ಯಾಕ್ ಸಭೆಗಳು ನಡೆಯಲಿವೆ.
ಬೆಳಗ್ಗಿನ ಸಭೆಯಲ್ಲಿನೂತನವಾಗಿ ಆಯ್ಕೆಯಾದ ಶಾಸಕರ ಸಭೆ ನಡೆಸಲಾಗುತ್ತದೆ. ಹಾಲಿ ಬಿಜೆಪಿಯ 66 ಶಾಸಕರಿಂದ ನೂತನ ನಾಯಕನ ಆಯ್ಕೆ ಮಾಡಲಾಗುತ್ತದೆ. ಆಯ್ಕೆ ಪ್ರಕ್ರಿಯೆ ನಡೆದರು ಅದು ಫೈನಲ್ ಆಗಿ ಹೈಕಮಾಂಡ್ ನಿಂದ ನಾಯಕನ ಆಯ್ಕೆಯಾಗುತ್ತೆ. ಇನ್ನು ಮಧ್ಯಾಹ್ನ 3 ಗಂಟೆಗೆ ಚುನಾವಣೆಯಲ್ಲಿ ಹಿನ್ನಡೆ ಅನುಭವಿಸಿ ಪರಾಭವಗೊಂಡ ಅಭ್ಯರ್ಥಿಗಳ ಸಭೆ ನಡೆಸಲಾಗುತ್ತದೆ.