ಸದ್ಯ ಸೂಪರ್ ಸ್ಟಾರ್ ರಜನೀಕಾಂತ್ ಜೈಲರ್ ಸಕ್ಸಸ್ ಖುಷಿಯಲ್ಲಿದ್ದಾರೆ. ಇದರ ಬೆನ್ನಲ್ಲೇ ರಜನೀಕಾಂತ್ ರಾಜ್ಯಪಾಲರಾಗ್ತಾರೆ ಎಂಬ ಸುದ್ದಿಯೂ ಜೋರಾಗಿದೆ. ತೆಲಂಗಾಣದ ರಾಜ್ಯಪಾಲರನ್ನಾಗಿ ಮಾಡಲು ಬಿಜೆಪಿ ಪ್ಲ್ಯಾನ್ ರೂಪಿಸಿದೆ ಎನ್ನಲಾಗ್ತಾ ಇದೆ. ರಜನೀಕಾಂತ್ ಕೂಡ ಈ ಹಿಂದೆ ತಮಿಳುನಾಡು ರಾಜಕೀಯಕ್ಕೆ ಬರುವುದಾಗಿ ಹೇಳಿದ್ದರು. ಆ ಬಳಿಕ ಅನಾರೋಗ್ಯಕ್ಕೆ ತುತ್ತಾದ ಕಾರಣ ರಾಜಕೀಯದ ವಿಚಾರವನ್ನು ಮುಂದೂಡಲಾಗಿತ್ತು. ಇದೀಗ ಅವರು ರಾಜಕೀಯಕ್ಕೆ ಬರುವ ವಿಚಾರ ಮತ್ತೆ ಮುನ್ನೆಲೆಗೆ ಬಂದಿದೆ.
ರಜನೀಕಾಂತ್ ಅವರಿಗೆ ರಾಜ್ಯಪಾಲರ ಹುದ್ದೆಯ ಆಫರ್ ನೀಡಲಾಗಿದೆ ಎನ್ನಲಾಗಿದೆ. ಆದರೆ ಈ ಸಂಬಂಧ ಇನ್ನು ಯಾವುದೇ ಅಧಿಕೃತ ಮಾಹಿತಿ ರಜನೀಕಾಂತ್ ಅವರ ಕಡೆಯಿಂದಾಗಲಿ ಅಥವಾ ಬಿಜೆಪಿ ಕಡೆಯಿಂದಾಗಲಿ ಬಂದಿಲ್ಲ. ಇತ್ತಿಚೆಗೆ ಹಿಮಾಲಯಕ್ಕೆ ಹೋಗಿದ್ದ ರಜನೀಕಾಂತ್ ಬರುವಾಗ ಉತ್ತರ ಪ್ರದೇಶದ ಸಿಎಂ ಸೇರಿದಂತೆ ಹಲವು ರಾಜಕೀಯ ಗಣ್ಯರನ್ನು ಭೇಟಿಯಾಗಿ ಬಂದಿದ್ದರು.
ಇನ್ನು ತೆಲಂಗಾಣದಲ್ಲಿ ರಾಜ್ಯಪಾಲರು ಹಾಗೂ ಸಿಎಂ ನಡುವೆ ಹಗ್ಗಜಗ್ಗಾಟ ನಡೆಯುತ್ತಿದೆ. ಇದು ಅಲ್ಲಿನ ರಾಜಕೀಯ ಬೆಳವಣಿಗೆಯ ಮೇಲೆ ಪರಿಣಾಮ ಬೀರಲಿದೆ. ಇದರನಡುವೆ ರಜನೀಕಾಂತ್ ಅವರ ರಾಜ್ಯಪಾಲರಾಗುವ ವಿಚಾರ ಸದ್ದು ಮಾಡಿದ್ದು, ಆ ಕಿತ್ತಾಟ ನಿಲ್ಲಿಸಲು ಬಿಜೆಪಿ ಏನಾದರೂ ಈ ಪ್ಲ್ಯಾನ್ ಮಾಡಿದೆಯಾ ಎಂಬ ಪ್ರಶ್ನೆಗಳನ್ನು ಹುಟ್ಟು ಹಾಕಿದೆ.
ರಜನೀಕಾಂತ್ ಮತ್ತು ಶಿವಣ್ಣ ಅಭಿನಯದ ಜೈಲರ್ ಕ್ರೇಜ್ ಇನ್ನು ಹಾಗೇ ಇದೆ. ರಿಲೀಸ್ ಆದ ಕೆಲವೇ ದಿನಗಳಲ್ಲಿ ಒಳ್ಳೆ ರೆಸ್ಪಾನ್ಸ್ ಪಡೆದುಕೊಂಡ ಸಿನಿಮಾ, ಕ್ರೇಜ್ ಸೃಷ್ಟಿ ಮಾಡಿತ್ತು. ಇದರ ನಡುವೆ ರಜನೀಕಾಂತ್ ರಾಜಕೀಯ ಪ್ರವೇಶ ಮಾಡ್ತಾರ ಎಂಬುದನ್ನು ನೋಡಬೇಕಿದೆ.