2023ರ ಚುನಾವಣೆಗೆ ಮಾಜಿ ಸಿಎಂ ಸಿದ್ದರಾಮಯ್ಯ ಅವರು ಇನ್ನು ತಾವೂ ಸ್ಪರ್ಧಿಸುವ ಕ್ಷೇತ್ರದ ಹುಡುಕಾಟದಲ್ಲಿದ್ದಾರೆ. ಇನ್ನು ಯಾವ ಕ್ಷೇತ್ರವನ್ನು ಫೈನಲ್ ಮಾಡಿಲ್ಲ. ಕೋಲಾರ, ಬಾಗಲಕೋಟೆ, ಬಾದಾಮಿ ಸೇರಿದಂತೆ ಹಲವು ಜಿಲ್ಲೆಗಳಿಂದ ಕಾರ್ಯಕರ್ತರು ಹಾಗೂ ಬೆಂಬಲಿಗರು ತಮ್ಮ ಕ್ಷೇತ್ರದಲ್ಲಿಯೇ ನಿಲ್ಲುವಂತೆ ಮನವಿ ಮಾಡುತ್ತಿದ್ದಾರೆ. ಆದ್ರೆ ಸಿದ್ದರಾಮಯ್ಯ ಮಾತ್ರ ಇನ್ನು ಯಾವ ಕ್ಷೇತ್ರವನ್ನು ಫೈನಲ್ ಮಾಡಿಲ್ಲ.

ಚಾಮುಂಡೇಶ್ವರಿ ಕ್ಷೇತ್ರದಿಂದ ಜಿಟಿ ದೇವೇಗೌಡ ಅವರ ಎದುರು ಸೋಲನ್ನು ಅನುಭವಿಸಿದ್ದರು. ಇದೀಗ ಸೋತಿದ್ದ ಜಾಗದಲ್ಲಿಯೇ ಗೆದ್ದು ತೋರಿಸುವ ನಿರ್ಧಾರ ಮಾಡುತ್ತಾರಾ ಎಂದು ಹಲವರಿಗೆ ಕುತೂಹಲ ಮೂಡಿದೆ. ಯಾಕಂದ್ರೆ ಜಿಲ್ಲೆಯಲ್ಲಿ ಜಿಟಿ ದೇವೇಗೌಡ ಅವರ ನಡೆಗೆ ಜೆಡಿಎಸ್ ನಲ್ಲಿಯೇ ಬಂಡಾಯವೆದ್ದಿದ್ದಾರೆ.

ಬಂಡಾಯವೆದ್ದಿರುವ ಮಂದಿ ನಮಗೆ ಟಿಕೆಟ್ ಸಿಗದೆ ಹೋದರೆ ನಾವೂ ಸಿದ್ದರಾಮಯ್ಯ ಅವರನ್ನು ಬೆಂಬಲಿಸುವುದಾಗಿ ತಿಳಿಸಿದ್ದಾರೆ. ಈಗಾಗಲೇ ಎರಡು ಸಾವಿರಕ್ಕೂ ಹೆಚ್ಚು ಮಂದಿ ಸಭೆ ನಡೆಸಿ, ನಿಮ್ಮ ಪರ ನಾವಿದ್ದೇವೆ. ನಿಮ್ಮನ್ನು ನಾವೂ ಗೆಲ್ಲಿಸುತ್ತೇವೆ. ಇಲ್ಲಿಂದಾನೇ ಸ್ಪರ್ಧೆ ಮಾಡಿ ಎಂದು ಮನವಿ ಮಾಡಿದ್ದಾರೆ. ರಮ್ಮನಹಳ್ಳಿಯ ಕನ್ನಡ ರಾಜ್ಯೋತ್ಸವದಲ್ಲಿ ಪಾಲ್ಗೊಂಡ ಬಂಡಾಯ ನಾಯಕರು ಸಿದ್ದರಾಮಯ್ಯ ಅವರಿಗೆ ಬೆಂಬಲ ಸೂಚಿಸಿದ್ದಾರೆ. ಜೆಡಿಎಸ್ ಪಕ್ಷಕ್ಕೆ ರಾಜೀನಾಮೆ ನೀಡುವುದಾಗಿಯೂ ತಿಳಿಸಿದ್ದಾರೆ.

