ಸರ್ಕಾರ ರಚನೆ ಮಾಡುವಷ್ಟು ಬಹುಮತವನ್ನು ಕಾಂಗ್ರೆಸ್ ಪಕ್ಷ ಪಡೆದುಕೊಂಡಿದೆ. ಬಿಜೆಪಿಗೆ ಇದು ದೊಡ್ಡ ಶಾಕ್ ಆಗಿ ಪರಿಣಮಿಸಿದೆ. ಘಟಾನುಘಟಿ ನಾಯಕರೇ ಸೋತಿದ್ದಾರೆ. ತಮ್ಮ ಸೋಲಿಗೆ ಒಬ್ಬೊಬ್ಬರು ಒಂದೊಂದು ರೀತಿಯ ಆತ್ಮವಿಮರ್ಶೆ ಮಾಡಿಕೊಳ್ಳುತ್ತಿದ್ದಾರೆ. ಆದ್ರೆ ಬಿ ಎಲ್ ಸಂತೋಷ್ ಬೇರೆಯದ್ದೇ ರೀತಿಯಲ್ಲಿ ಹೇಳಿದ್ದಾರೆ.
“ಕಲಿಯುತ್ತೇವೆ.. ಸೋಲಿನಿಂದ , ಹಿನ್ನಡೆಗಳಿಂದ , ತಪ್ಪುಗಳಿಂದ. ಉತ್ತರಿಸುತ್ತೇವೆ, ಟೀಕೆಗಳಿಗೆ, ಕುಹಕಗಳಿಗೆ , ಒಡಕು ಮಾತುಗಳಿಗೆ
ನಮ್ಮ ಗತಿಶೀಲತೆಯಿಂದ. ನಾವು ಇರಲಿಕ್ಕೇ ಬಂದವರು … ಗೆಲ್ಲಲಿಕ್ಕೇ ಬಂದವರು …
ನಮಗೆ ಸೋಲು ಕ್ಷಣಿಕ … ಮುನ್ನಡೆ ಸತತ… ಇನ್ನು 12 ತಿಂಗಳಿನೊಳಗೆ 31000 ಕ್ಕೆ ಮತ್ತೆ 10000 ಸೇರಿಸಿ 41000 ಬೂತ್‌ಗಳಲ್ಲಿ ಮುನ್ನಡೆ ಸಾಧಿಸಿ ತೋರಿಸುತ್ತೇವೆ” ಎಂದು ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಬರೆದಿದ್ದಾರೆ.
ಬಿಎಲ್ ಸಂತೋಷ್ ಅವರು ಈ ರೀತಿ ಪೋಸ್ಟ್ ಹಾಕಿರುವುದಕ್ಕೆ ಸಾಕಷ್ಟು ವಿರೋಧ ವ್ಯಕ್ತವಾಗಿದೆ. ಸೋಷಿಯಲ್ ಮೀಡಿಯಾ ಪೋಸ್ಟ್ ನಲ್ಲಿಯೇ ಕಮೆಂಟ್ ಗ ಸುರಿಮಳೆ ಬಂದಿದೆ. ಈ ಬಾರಿಯ ಚುನಾವಣೆಯನ್ನು ಬಿ ಎಲ್ ಸಂತೋಷ್ ಅವರು ಪ್ರತಿಷ್ಠೆಯಾಗಿ ತೆಗೆದುಕೊಂಡಿದ್ದರು. ಆದರೆ ಕೇವಲ 65 ಸೀಟ್ ಪಡೆದು, ಹೀನಾಯ ಸೋಲು ಕಂಡಿದೆ.