ಅಭಿಮಾನಿಗಳ ಚಿತ್ತ ರಮ್ಯಾ ಕೊಡುವ ಸಿಹಿ ಸುದ್ದಿಯತ್ತ : ಗಣೇಶ ಹಬ್ಬಕ್ಕೆ ಕೊಡುವ ಸುದ್ದಿ ಏನಿರಬಹುದು..?

suddionenews
1 Min Read

ಸ್ಯಾಂಡಲ್ ವುಡ್ ಮೋಹಕತಾರೆ ರಮ್ಯಾ ಎಂದರೆ ಈಗಲೂ ಎಲ್ಲರಿಗೂ ಅಚ್ಚುಮೆಚ್ಚು. ಸಿನಿಮಾ ರಂಗದಿಂದ ದೂರಾಗಿ ಸಾಕಷ್ಟು ವರ್ಷಗಳೇ ಕಳೆದಿದೆ. ಆದರೂ ರಮ್ಯಾ ಬರಬೇಕು ಎಂದು ಬಯಸುತ್ತಾರೆ. ಮತ್ತೆ ಸಿನಿಮಾಗೆ ಬಂದರೆ ಖುಷಿ ಎಂದೇ ಎಲ್ಲರೂ ಹೇಳುತ್ತಾರೆ. ಇತ್ತಿಚೆಗೆ ಅಭಿಮಾನಿಗಳಿಗೆ ಮತ್ತೆ ಕಮ್ ಬ್ಯಾಕ್ ಮಾಡುವ ಸೂಚನೆ ನೀಡುತ್ತಿದ್ದಾರೆ. ಇದೋಗ ನಾಳೆ ಗಣೇಶನ ಹಬ್ಬಕ್ಕೆ ಏನೋ ಗುಡ್ ನ್ಯೂಸ್ ಕೊಡುವುದಾಗಿ ಸ್ಟೇಟಸ್ ಹಾಕಿದ್ದಾರೆ.

About time i take the plunge, don’t you think? ನಿಮ್ಮೆಲ್ಲರ ಜೊತೆ ನಾನು ಸಿಹಿ ಸುದ್ದಿ ಹಂಚಿಕೊಳ್ಳಲು ಮುಂದಾಗಿರುವೆ’ ಎಂದು ರಮ್ಯಾ ಬರೆದುಕೊಂಡಿದ್ದಾರೆ. ಈ ಪೋಸ್ಟ್ ನೋಡಿದಾಗಿನಿಂದ ಫ್ಯಾನ್ಸ್ ತಲೆಯಲ್ಲಿ ನೂರೆಂಟು ವಿಚಾರಗಳು ಓಡುತ್ತಾ ಇದೆ.

ಅದರ ಜೊತೆಗೆ ನಾಳೆ ಬೆಳಗ್ಗೆ 11.15ಕ್ಕೆ ಸುದ್ದಿ ಬರುತ್ತೆ. ಅದು ಅಫೀಶಿಯಲ್ ವಿಚಾರ ಎಂದಿರುವುದು ಮತ್ತಷ್ಟು ಕುತೂಹಲಕ್ಕೆ ಕಾರಣವಾಗಿದೆ. ಸಿನಿಮಾ ವಿಚಾರನೂ ಇರಬಹುದು ಅಂದುಕೊಂಡಿದ್ದಾರೆ. ಆದರೆ ಹೆಚ್ಚು ಏನನ್ನು ಗೆಸ್ ಮಾಡುವುದಕ್ಕೆ ಆಗದೆ ಇರುವ ಕಾರಣ ನಾಳೆಗಾಗಿ ಕಾಯುತ್ತಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *