ಬೆಂಗಳೂರು: ರಾಜ್ಯದಲ್ಲಿ ಲೋಕಸಭೆ ಚುನಾವಣೆಗೆ ಈಗಾಗಲೇ ಸಿದ್ಧತೆ ನಡೆಯುತ್ತಿದೆ. ಟಿಕೆಟ್ ಆಕಾಂಕ್ಷಿಗಳ ಪಟ್ಟಿಯೂ ಬೆಳೆಯುತ್ತಿದೆ. ಇದರ ನಡುವೆ ರಮ್ಯಾ ಹೆಸರು ಕೂಡ ಚರ್ಚೆಗೆ ಬಂದಿದೆ. ರಮ್ಯಾ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧೆ ಮಾಡುತ್ತಾರಾ ಎಂಬ ಚರ್ಚೆ ಎದ್ದಿದೆ. ಅದರ ಜೊತೆಗೆ ರಮ್ಯಾ ಅವರನ್ನು ಈ ಬಾರಿಯ ಚುನಾವಣೆಗೆ ಕರೆತರುವುದು ಬೇಡ ಎಂದು ಹಲವರು ವಿರೋಧ ವ್ಯಕ್ತಪಡಿಸಿದ್ದಾರೆ.
ನಟಿ ರಮ್ಯಾ ರಾಜಕೀಯದಿಂದ ದೂರಾಗಿ ಈಗ ಮತ್ತೆ ಚಿತ್ರರಂಗದಲ್ಲಿ ಆಕ್ಟೀವ್ ಆಗಿದ್ದಾರೆ. ಸಿನಿಮಾ ನಿರ್ಮಾಣ, ನಟನೆಯ ಜೊತೆಯಲ್ಲಿ ಬ್ಯುಸಿಯಾಗಿದ್ದಾರೆ. ಅಭಿಮಾನಿಗಳ ಆಸೆಯಂತೆ ರಮ್ಯಾ ಅವರು ಕಮ್ ಬ್ಯಾಕ್ ಆಗಿದ್ದಾರೆ. ಆದರೆ ಇದರ ನಡುವೆ ರಮ್ಯಾ ಮತ್ತೆ ಚಿತ್ರರಂಗಕ್ಕೆ ಬರಲಿದ್ದಾರಾ ಎಂಬ ಪ್ರಶ್ನೆ ಇದೆ.
ಸಚಿವ ಎಂ ಸಿ ಸುಧಾಕರ್ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ರಮ್ಯಾ ಅವರ ವಿಚಾರ ಚರ್ಚೆಗೆ ಬಂದಿದೆ. ಯಾವುದೇ ಕಾರಣಕ್ಕೂ ರಮ್ಯಾ ಅವರನ್ನು ಲೋಕಸಭಾ ಚುನಾವಣೆಗೆ ಕರೆತರಬಾರದು. ಸ್ಥಳೀಯ ಮಟ್ಟದಲ್ಲಿ ಕೆಲಸ ಮಾಡುತ್ತಿರುವ ನಾಯಕರಿಗೆ ಅವಕಾಶ ನೀಡಿ. ಕೊನೆ ಪಕ್ಷ ಚೆಲುವರಾಯಸ್ವಾಮಿ ಅವರ ಪತ್ನಿಗಾದರೂ ಟಿಕೆಟ್ ನೀಡಿ ಎಂದಿದ್ದಾರಂತೆ.
ಅದರ ಜೊತೆಗೆ ಸಭೆಯಲ್ಲಿ ಹಲವರ ಹೆಸರು ಕೂಡ ಪ್ರಸ್ತಾಪಗೊಂಡಿದೆ. ಕೆಪಿಸಿಸಿ ಖಜಾಂಚಿ ವಿನಯ್ ಕಾರ್ತೀಕ್ ಅವರಿಗೆ ಅವಕಾಶ ನೀಡಿ ಎಂಬ ಅಭಿಪ್ರಾಯಗಳು ಕೇಳಿ ಬಂದಿದೆ. ಸಭೆಯಲ್ಲಿ ವಿನಯ್ ಕಾರ್ತೀಕ್ ಹೆಸರನ್ನು ಹಲವರು ಪ್ರಸ್ತಾಪ ಮಾಡಿದ್ದಾರೆ. ಇದೇ ಹೆಸರನ್ನು ಹೈಕಮಾಂಡ್ ಮುಂದೆಯೂ ಇಡಲು ನಿರ್ಧರಿಸಿದ್ದು, ಹೈಕಮಾಂಡ್ ನಿರ್ಧಾರಕ್ಕೆ ಬದ್ಧರಾಗಿರಲು ನಿರ್ಧಾರ ಕೈಗೊಂಡಿದ್ದಾರೆ.