ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿ ಸಚಿವ ಸುಧಾಕರ್ ತನ್ನದೇ ಪ್ರಾಬಲ್ಯ ಹೊಂದಿದ್ದಾರೆ. ಆ ಪ್ರಾಬಲ್ಯ ಎಷ್ಟಿದೆ ಎಂದರೆ ಬಿಜೆಪಿಯ ಜನಸ್ಪಂದನಾ ಕಾರ್ಯಕ್ರಮ ನಡೆದಾಗ ಸಂಪೂರ್ಣ ಜವಬ್ದಾರಿ ಹೊತ್ತುಕೊಂಡು, ಜನರನ್ನು ಕರೆತಂದು ಸಿಎಂ ಕಡೆಯಿಂದ, ಯಡಿಯೂರಪ್ಪ ಅವರಿಂದ ಹೊಗಳಿಸಿಕೊಂಡಿದ್ದರು. ಕಾಂಗ್ರೆಸ್ ನಲ್ಲಿದ್ದ ಸುಧಾಕರ್, ಬಿಜೆಪಿಗೆ ಸೇರಿದ್ದರು. ಈಗ ಆರೋಗ್ಯ ಮತ್ತು ವೈದ್ಯಕೀಯ ಸಚಿವರಾಗಿದ್ದಾರೆ. ಇದೀಗ ಕಾಂಗ್ರೆಸ್ ಚಿಕ್ಕಬಳ್ಳಾಪುರದಲ್ಲಿ ತಮ್ಮ ಅಭ್ಯರ್ಥಿಯನ್ನೇ ಗೆಲ್ಲಿಸುವ ತಂತ್ರ ರೂಪಿಸುತ್ತಿದೆ ಎನ್ನಲಾಗಿದೆ.
ಚುನಾವಣೆ ಸಮೀಪಿಸುತ್ತಿದೆ. ಮೂರು ಪಕ್ಷಗಳು ಎಲ್ಲಾ ಕ್ಷೇತ್ರದಲ್ಲೂ ಗೆಲ್ಲುವ ಅಭ್ಯರ್ಥಿಗಳನ್ನು ಹಾಕಲು ಈಗಾಗಲೇ ಫ್ಲ್ಯಾನ್ ಮಾಡಿಕೊಳ್ಳುತ್ತಿದ್ದಾರೆ. ಚಿಕ್ಕಬಳ್ಳಾಪುರದಲ್ಲೂ ಗೆಲುವು ತುಂಬಾ ಮುಖ್ಯವಾಗಿದೆ. ಬಿಜೆಪಿಯಿಂದ ಸುಧಾಕರ್ ಗೆಲ್ಲುವ ಭರವಸೆ ಇಟ್ಟಿಕೊಂಡಿದ್ದಾರೆ. ಹೀಗಾಗಿ ಕಾಂಗ್ರೆಸ್ ನಿಂದ ರಕ್ಷಾ ರಾಮಯ್ಯ ಅವರನ್ನು ಕಣಕ್ಕಿಳಿಸುವ ಫ್ಲ್ಯಾನ್ ಇದೆ ಎನ್ನಲಾಗುತ್ತಿದೆ. ಇನ್ನು ಜೆಡಿಎಸ್ ಯಾವುದೇ ಅಭ್ಯರ್ಥಿಯನ್ನು ಘೋಷಣೆ ಮಾಡಿಲ್ಲ.
ಇದಕ್ಕೆ ಪುಷ್ಟಿ ನೀಡುವಂತೆ ಇಂದು ರಕ್ಷಾ ರಾಮಯ್ಯ ಚಿಕ್ಕಬಳ್ಳಾಪುರದಲ್ಲಿ ಆಕ್ಟೀವ್ ಆಗಿದ್ದಾರೆ. ಭಾರತ್ ಜೋಡೋ ಯಾತ್ರೆಗೆ ಚಿಕ್ಕಬಳ್ಳಾಪುರದಲ್ಲಿ ಜನರನ್ನು ಕರೆದೊಯ್ದಿದ್ದಾರೆ. ಈ ಮೂಲಕ ರಕ್ಷಾ ರಾಮಯ್ಯ ಚಿಕ್ಕಬಳ್ಳಾಪುರ ನೆಲದಲ್ಲಿ ಆಕ್ಟೀವ್ ಆಗಿರುವುದನ್ನು ನೋಡಿದರೆ ಸುಧಾಕರ್ ವಿರುದ್ಧ ಸ್ಪರ್ಧೆ ಒಡ್ಡಬಹುದು ಎನ್ನಲಾಗಿದೆ.