ರಾಜೀವ್ ಗೌಡರ‌ನ್ನ ಕಾಂಗ್ರೆಸ್ ನಿಂದ ಉಚ್ಚಾಟನೆ ಮಾಡ್ತಾರಾ..? ಸಚಿವ ಪರಮೇಶ್ವರ್ ಪ್ರತಿಕ್ರಿಯೆ

1 Min Read
ಸಚಿವ ಪರಮೇಶ್ವರ್

ಬೆಂಗಳೂರು: ಶಿಡ್ಲಘಟ್ಟದ ಪೌರಾಯುಕ್ತೆಗೆ ಕಾಂಗ್ರೆಸ್ ನಾಯಕ ರಾಜೀವ್ ಗೌಡ ಆಡಿದ ಮಾತುಗಳು ವಿರೋಧಕ್ಕೆ ಕಾರಣವಾಗಿದೆ. ಈ ಸಂಬಂಧ ರಾಜೀವ್ ಗೌಡರನ್ನ ಪಕ್ಷದಿಂದ ಉಚ್ಛಾಟನೆ ಮಾಡ್ತಾರಾ ಎಂಬ ಪ್ರಶ್ನೆಗೆ ಸಚಿವ ಜಿ.ಪರಮೇಶ್ವರ್ ಅವರು ಪ್ರತಿಕ್ರಿಯೆ ನೀಡಿದ್ದಾರೆ. ವಿಳಂಬ ಅಲ್ಲ ಅದು ಟೀಂ ಮಾಡಲಾಗಿದೆ. ಆದರೆ ಅವರೆಲ್ಲೋ ತಪ್ಪಿಸಿಕೊಂಡು ಹೋಗಿದ್ದಾರೆ. ಹುಡುಕಿಕೊಂಡು ಕರೆದುಕೊಂಡು ಬರ್ತಾರೆ ಎಂಬ ಮಾತನ್ನ ಹೇಳಿದ್ದಾರೆ.

ಸಮಯ ನಿಗದಿ ಮಾಡಿದ್ದೀರಾ‌ ನೀವು. ಜೆಡಿಎಸ್ ಕೇಳಿಕೊಂಡು, ಬಿಜೆಪಿ ಕೇಳಿಕೊಂಡು ನಾವೂ ಆಡಳಿತ ಮಾಡ್ತಾ ಇಲ್ಲ. ನಮಗೆ ಆದಂತ ರೀತಿಯಲ್ಲಿ ಆಡಳಿತ ಮಾಡ್ತಾ ಇದ್ದೀವಿ. ಅವರನ್ನ ಬಂಧನ ಮಾಡ್ತೀವಿ. ಅವತ್ತೇ ಸೂಚನೆಯನ್ನ ನೀಡಿದ್ದೀವಿ. ಹುಡುಕ್ತಾ ಇದ್ದಾರೆ, ಬಂಧನ ಮಾಡ್ತಾರೆ ಎಂದಿದ್ದಾರೆ.

ಇದೇ ವೇಳೆ ಉಚ್ಛಾಟನೆಯನ್ನ ಮಾಡ್ತಾರಾ ಎಂಬ ಪ್ರಶ್ನೆಗೆ ಅದನ್ನ ನಮ್ಮ ಅಧ್ಯಕ್ಷರು ತೀರ್ಮಾನ ಮಾಡ್ತಾರೆ. ಈಗಾಗಲೇ ನೋಟೀಸ್ ಕೊಟ್ಟಿದ್ದಾರೆ. ಅವರು ಪಕ್ಷದಿಂದ ತೆಗೆಯಬಹುದು, ಬಿಡಬಹುದು. ಅದು ಶಿಸ್ತಿನ ಸಮಿತಿ ಇರುತ್ತೆ. ಅದರ ಮುಂದೆ ತೀರ್ಮಾನ ತೆಗೆದುಕೊಳ್ಳುತ್ತಾರೆ. ಈ ರೀತಿಯಾದದ್ದೆಲ್ಲಾ ಅನೇಕ ಸಲ ನೋಡಿದ್ದೇನೆ. ಬುದ್ದಿ ಹೇಳಿದ್ದೀನಿ ಎಂದಿದ್ದಾರೆ.

ಇನ್ನು ಬಳ್ಳಾರಿ ಬ್ಯಾನರ್ ಗಲಾಟೆಗೆ ಸಂಬಂಧಿಸಿದಂತೆ ಬಿಜೆಪಿಯವರ ಪ್ರತಿಭಟನೆ ಬಗ್ಗೆ ಮಾತನ್ನಾಡಿ, ನನಗೂ ಕೂಡ ಗಮನದಲ್ಲಿದೆ. ನಾವೂ ಇಲ್ಲಿಯ ತನಕ ಅವರಿಗೆ ಪರ್ಮಿಷನ್ ಕೊಟ್ಟಿಲ್ಲ. ಸ್ಥಳೀಯ ಪೊಲೀಸರಿಗೆ ಬಿಟ್ಟಿದ್ದೀವಿ. ಸ್ಥಿತಿಗತಿ ನೋಡಿಕೊಂಡು ನೀವೂ ಅವರಿಗೆ ಪರ್ಮಿಷನ್ ಕೊಡಬೇಕಾ ಬೇಡ್ವಾ ಎಂಬುದನ್ನ ತೀರ್ಮಾನ ಮಾಡಿ ಎಂದು ಹೇಳಿದ್ದೇನೆ. ನಾನು ಇಲ್ಲಿಂದ ಎಲ್ಲವನ್ನು ಹೇಳುವುದಕ್ಕೆ ಆಗಲ್ಲ. ಸ್ಥಳೀಯವಾಗಿ ಅವರಿಗೆ ಪರಿಸ್ಥಿತಿ ಗೊತ್ತಿರುತ್ತೆ ಎಂದಿದ್ದಾರೆ.

Share This Article