2025ರ ಇಂಡಿಯನ್ ಪ್ರೀಮಿಯರ್ ಲೀಗ್ ಬಗ್ಗೆ ಈಗಾಗಲೇ ಎಲ್ಲರಲ್ಲೂ ಕುತೂಹಲ ಕೆರಳಿದೆ. ಬಿಸಿಸಿಐ ಕೂಡ ಎಲ್ಲಾ ರೀತಿಯ ತಯಾರಿಯನ್ನು ಮಾಡಿಕೊಳ್ಳುತ್ತಿದೆ. ನವೆಂಬರ್ 24 ಮತ್ತು 25ರಂದು ಮೆಗಾ ಹರಾಜು ಕೂಡ ನಡೆಯಲಿದೆ. ಅದಕ್ಕೆ ಉಳಿದಿರುವುದು ಕೇವಲ ಮೂರು ದಿನಗಳು ಮಾತ್ರ. ಸೌದಿ ಅರೇಬಿಯಾದಲ್ಲಿ ಹರಾಜು ಪ್ರಕ್ರಿಯೆ ನಡೆಯಲಿದೆ. ಯಾವ್ಯಾವ ಆಟಗಾರರು ಎಷ್ಟು ಕೋಟಿಗೆ ಹರಾಜಾಗುತ್ತಾರೆ ಎಂಬ ಕುತೂಹಲ ಎಲ್ಲರಿಗೂ ಕಾಡುತ್ತಿದೆ.
ಆದರೆ ಈ ಬಾರಿ ಆರ್ಸಿಬಿ ತಂಡದ ಬಗ್ಗೆ ಈ ಬಾರಿಯೂ ನಿರೀಕ್ಷೆ ಹೆಚ್ಚಾಗಿದೆ. ಈ ಸಲವಾದರೂ ಕಪ್ ಗೆಲ್ಲಲೇಬೇಕೆಂಬ ಹುಮ್ಮಸ್ಸಿನಲ್ಲಿಯೇ ಆಟಗಾರರು ಇದ್ದಾರೆ. ಹೀಗಾಗಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತೆರೆಮರೆಯಲ್ಲಿ ಹರಾಜು ಪ್ರಕ್ರಿಯೆ ನಡೆಸುತ್ತಿದೆ. ಈಗಾಗಲೇ ರಾಯಲ್ ಚಾಲೆಂಜರ್ಸ್ ಬೆಂಗಳೂರು ತನ್ನ ರಿಟೈನ್ ಲೀಸ್ಟ್ ರಿಲೀಸ್ ಮಾಡಿದೆ. ಆರ್ಸಿಬಿ ಟೀಮ್ ಮೊದಲು ರೀಟೈನ್ ಮಾಡಿಕೊಂಡಿದ್ದೆ ವಿರಾಟ್ ಕೊಹ್ಲಿಯನ್ನು. ಎರಡನೇ ಆಯ್ಕೆ ರಜತ್ ಪಾಟಿದಾರ್. ಮೂರನೇ ಆಯ್ಕೆಯಾಗಿ ಯಶ್ ದಯಾಳ್ ಅವರನ್ನು ಉಳಿಸಿಕೊಂಡಿದೆ.
ಇನ್ನು ಈ ಬಾರಿ ಕಪ್ ಗೆಲ್ಲಲೇಬೇಕೆಂಬ ಹುಮ್ಮಸ್ಸಿನಲ್ಲಿರುವ ಆರ್ಸಿಬಿ ತಂಡ ಸದ್ಯಕ್ಕೆ ಹೊಸ ಕ್ಯಾಪ್ಟನ್ ಅನ್ನ ಹುಡುಕುತ್ತಿದೆ. ಇದರ ನಡುವೆ ರಾಬಿನ್ ಉತ್ತಪ್ಪ ಕ್ಯಾಪ್ಟನ್ ಆಗಿ ರಜತ್ ಪಾಟೀದಾರ್ ಅವರನ್ನು ಮಾಡಬೇಕೆಂದು ಅಭಿಪ್ರಾಯ ಪಟ್ಟಿದ್ದಾರೆ. ಎರಡು ವರ್ಷಗಳ ಬಳಿಕ ಆರ್ಸಿಬಿ ಹೊಸ ನಾಯಕನ ಅಗತ್ಯ ಎದುರಾಗಿದೆ. ಹೀಗಾಗಿ ಪಾಟೀದಾರ್ ಮೇಲೆ ನಂಬಿಕೆ ಇಡಬಹುದು. ಆಗ ಮಾತ್ರ ಮುಂದಿನ ಐದು ವರ್ಷಗಳು ಆರ್ಸಿಬಿಗೆ ಕ್ಯಾಪ್ಟನ್ಸಿ ಸಮಸ್ಯೆ ಎದುರಾಗಲ್ಲ ಎಂದಿದ್ದಾರೆ.
ರಜತ್ ಪಾಟೀದಾರ್ ಆರ್ಸಿಬಿ ತಂಡದ ಸ್ಟಾರ್ ಬ್ಯಾಟರ್ ಆಗಿದ್ದಾರೆ. ಇದುವರೆಗೂ ಒಟ್ಟು 27 ಪಂದ್ಯಗಳನ್ನ ಆಡಿದ್ದಾರೆ. 799 ರನ್ ಗಳನ್ನ ಗಳಿಸಿದ್ದಾರೆ. ರಜತ್ ಪಾಟಿದಾರ್ ಏಳು ಅರ್ಧ ಶತಕ ಮತ್ತು ಒಂದು ಶತಕ ಸಿಡಿಸಿದ್ದಾರೆ.