ಶಾರುಖ್ ಖಾನ್ ʻಜೀರೋʼ ಸಿನಿಮಾದ ಸೋಲಿನಿಂದ ಹೊರ ಬರುವುದಕ್ಕೆ ಸಾಕಷ್ಟು ಪ್ರಯತ್ನ ಪಡುತ್ತಿದ್ದಾರೆ. ʻಪಠಾಣ್ʼ ಸಿನಿಮಾ ಸೋಲಿನ ನೋವಿಗೆ ಒಂದು ಔಷಧಿಯಾಗುತ್ತೇ ಎಂದೇ ಬಾಲಿವುಡ್ ಮಂದಿ ಭಾವಿಸಿದ್ದರು.
ಪಠಾಣ್ ಸಿನಿಮಾದಿಂದ ಶಾರುಖ್ ಖಾನ್ ಮತ್ತೆ ಗೆಲುವಿನ ನಗೆ ಬೀರಲಿದ್ದಾರೆ ಎನ್ನಲಾಗುತ್ತಿತ್ತು. ಆದರೆ ಅದ್ಯಾಕೋ ಸಿನಿಮಾಗೆ ಕೇಸರಿ ವಿವಾದವೊಂದು ಸುತ್ತಿಕೊಂಡು, ಸಿನಿಮಾ ರಿಲೀಸ್ ಆಗುವುದೇ ಡೌಟ್ ಎಂಬ ವಾತಾವರಣವನ್ನು ನಿರ್ಮಾಣವಾಗಿದೆ.
ಪಠಾಣ್ ಸಿನಿಮಾದಲ್ಲಿ ಬೇಷರಂ ರಂಗ ಎಂಬ ಹಾಡೊಂದು ಇದೆ. ಈ ಹಾಡಿನಲ್ಲಿ ದೀಪಿಕಾ ಪಡುಕೋಣೆ ಹಾಗೂ ಶಾರುಖ್ ಖಾನ್ ಕಾಣಿಸಿಕೊಂಡಿದ್ದಾರೆ. ಹಾಡು ನೋಡುಗರಿಗೆ ಯಾರಿಗೂ ಅಷ್ಟಾಗಿ ಏನು ಮನಸ್ಸಿನಾಳಕ್ಕೆ ನಾಟಿಲ್ಲ. ಆವರೇಜ್ ಲೆಕ್ಕದಲ್ಲೂ ಆ ಸಾಂಗ್ ರುಚಿಸಿಲ್ಲ. ಆದರೆ ಹಿಂದೂ ಸಂಘಟನೆಗಳನ್ನು ರೊಚ್ಚಿಗೇಳುವಂತೆ ಮಾಡಿದೆ.
ಅದರಲ್ಲೂ ದೀಪಿಕಾ ಪಡುಕೋಣೆ ಈ ಹಾಡಿನಲ್ಲಿ ಸಿಕ್ಕಾಪಟ್ಟೆ ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ. ಹಾಡಿನಲ್ಲಿ ಸಾಕಷ್ಟು ಕಲರ್ ಕಾಂಬಿನೇಷನ್ ಬಿಕಿನಿಯನ್ನು ಹಾಕಿಕೊಳ್ಳುತ್ತಾರೆ. ಕೊನೆಯಲ್ಲಿ ಕೇಸರಿ ಕಲರ್ ಬಿಕಿನಿ ಹಾಕಿಕೊಂಡಾಗ ಇದು ಹಿಂದೂ ಭಾವನೆಗೆ ಧಕ್ಕೆ ತಂದಿದೆ ಎಂಬ ಕೂಗು ಕೇಳಿಸುವುದಕ್ಕೆ ಶುರುವಾಗುತ್ತೆ. ಪಠಾಣ್ ಸಿನಿಮಾ ಬಗ್ಗೆ ಬಾಯ್ಕಾಟ್ ಸಂಸ್ಕೃತಿ ಮತ್ತೆ ಸದ್ದು ಮಾಡಿ, ಟ್ವಿಟ್ಟರ್ ನಲ್ಲಿ ಅಭಿಯಾನ ಕೂಡ ಜೋರಾಗುತ್ತದೆ. ಇದು ಮಧ್ಯಪ್ರದೇಶ, ಉತ್ತರ ಪ್ರದೇಶ ಹಾಗೂ ಕರ್ನಾಟಕದಲ್ಲಿ ಹೆಚ್ಚಾಗಿತ್ತು. ಆದ್ರೆ ಈಗ ಮಹಾರಾಷ್ಟ್ರದಲ್ಲೂ ಪಠಾಣ್ ನಿಷೇಧದ ಕೂಗು ಕೇಳಿಸುತ್ತಿದೆ.
ಮಹಾರಾಷ್ಟ್ರದಲ್ಲಿ ಕೇಸರಿ ಕಲರ್ ಗಾಗಿ ವಿರೋಧ ವ್ಯಕ್ತವಾಗಿಲ್ಲ, ಬದಲಿಗೆ ಸಮುದಾಯವೊಂದರ ವಿಚಾರವಾಗಿ ವಿರೋಧ ವ್ಯಕ್ತವಾಗುತ್ತಿದೆ. ಅಖಿಲ ಭಾರತ ತೆವ್ಹಾರ್ ಸಮಿತಿ ಎಂಬ ಮುಸ್ಲಿಂ ಸಂಘಟನೆಯೊಂದು ಸಿನಿಮಾವನ್ನು ವಿರೋಧ ಮಾಡುತ್ತಿದೆ.
ಈ ಸಿನಿಮಾದಲ್ಲಿ ಅಶ್ಲೀಲ ದೃಶ್ಯಗಳಿದ್ದು, ಮುಸ್ಲಿಂ ಸಮುದಾಯವನ್ನು ಕೆಟ್ಟದಾಗಿ ಬಿಂಬಿಸಲಾಗಿದೆ ಎಂದಿದ್ದಾರೆ. ಇನ್ನು ಮಧ್ಯಪ್ರದೇಶದ ಲೇಮಾ ಮಂಡಳಿ ಅಧ್ಯಕ್ಷ ಸೈಯದ್ ಅನಾಸ್, ಇಂಥ ಸಿನಿಮಾಗೆ ಪಠಾಣ್ ಅಂತ ಹೆಸರಿಡುವುದು ಪಠಾಣ್ ಕುಲಕ್ಕೆ ಮಾಡುವ ಅವಮಾನ ಎಂದಿದ್ದಾರೆ.