ಮಲ್ಲಿಕಾರ್ಜುನ ಖರ್ಗೆ ರಾಜ್ಯ ರಾಜಕಾರಣಕ್ಕೆ ಬರ್ತಾರಾ..? ಸಿಎಂ ರೇಸ್ ನಿಂದ ಡಿಕೆಶಿ ಹಿಂದೆ ಉಳೀದ್ರಾ..?

ಬೆಂಗಳೂರು: ರಾಜ್ಯ ಕಾಂಗ್ರೆಸ್ ನಲ್ಲಿ ಎಲ್ಲವೂ ನಾರ್ಮಲ್ ಆಗಿಲ್ಲ ಅನ್ನೋದು ಎಲ್ಲರಿಗೂ ಕಾಣಿಸುತ್ತಿರುವ ಸತ್ಯ. ಅದರಲ್ಲೂ ಸಿಎಂ ಸ್ಥಾನದ ವಿಚಾರವಾಗಿ ಹಗ್ಗಜಗ್ಗಾಟ ನಡೆಯುತ್ತಲೆ ಇದೆ. ಈಗ ಹೊಸದಾಗಿ ಕೇಳಿ ಬರುತ್ತಿರುವ ವಿಷಯ ಏನು ಅಂದ್ರೆ ಮಲ್ಲಿಕಾರ್ಜುನ ಖರ್ಗೆ ಅವರು ರಾಜ್ಯಾ ರಾಜಕಾರಣಕ್ಕೆ ಬರ್ತಾ ಇದಾರೆ ಅನ್ನೋ ಮಾತು. ಆದರೆ ಈ ಹಿಂದೆ ಮಲ್ಲಿಕಾರ್ಜುನ ಖರ್ಗೆ ಅವರೇ ಹೇಳಿದ್ದರು, ಎಲ್ಲರನ್ನು ಲೀಡ್ ಮಾಡುವ ಸ್ಥಾನದಲ್ಲಿದ್ದು, ಇಲ್ಲಿಗೆ ಯಾಕೆ ಬರಲಿ. ಸಮುದ್ರದಲ್ಲಿ ಈಜಾಡುವವನನ್ನ ಕಾವೇರಿ ನದಿಯಲ್ಲಿ ಈಜಾಡಿ ಅಂದಂಗೆ ಆಯ್ತು ಅಂತ ಹೇಳುವ ಮೂಲಕ ಇಲ್ಲ ಎಂದಿದ್ದರು. ಆದರೆ ಯಾವುದೇ ವಿಚಾರವಾದರೂ ಬೆಂಕಿ ಇಲ್ಲದೆ ಹೊಗೆಯಾಡುವುದಕ್ಕೆ ಸಾಧ್ಯವೇ ಇಲ್ಲ ಅಲ್ವಾ.

ಸದ್ಯ ರಾಷ್ಟ್ರ ರಾಜಕಾರಣದಲ್ಲಿ ಇಡೀ ಕಾಂಗ್ರೆಸ್ ಪಕ್ಷವನ್ನು ಮುನ್ನಡೆಸುತ್ತಿರುವ ಮಲ್ಲಿಕಾರ್ಜುನ ಖರ್ಗೆ ಅವರನ್ನು ರಾಜ್ಯ ರಾಜಕಾರಣಕ್ಕೆ ಕರೆತರ್ತಾರೆ ಎಂಬ ವಿಚಾರಕ್ಕೂ ಒಂದು ಸ್ಟ್ರಾಂಗ್ ಕಾರಣವಿದೆ. ಇತ್ತೀಚೆಗಷ್ಟೇ ಕೆ.ಎನ್.ರಾಜಣ್ಣ ರಾಜ್ಯದಲ್ಲಿ ಸೆಪ್ಟೆಂಬರ್ ಕ್ರಾಂತಿ ಆಗುತ್ತೆ ಎಂದಿದ್ದರು. ಈ ಕ್ರಾಂತಿ ಹೇಳಿಕೆಯನ್ನ ಅವರೇ ಅದಾದ ಮೇಲೆ ಉಲ್ಟಾ ಕೂಡ ಹೊಡೆದಿದ್ದರು. ಆದರೂ ಅದಕ್ಕೂ ಮುನ್ನ ಕ್ರಾಂತಿ ಬಗ್ಗೆ ಸಾಕಷ್ಟು ಚರ್ಚೆಗಳಾದವು. ಅದು ಸಿಎಂ ಬದಲಾವಣೆಯ ಕ್ರಾಂತಿಯೇ ಇರಬೇಕು ಎನ್ನಲಾಗಿತ್ತು.

ಇದರ ನಡುವೆ ಸಿದ್ದರಾಮಯ್ಯ ಅವರು ಈ ಐದು ವರ್ಷದ ಅವಧಿಗೆ ನಾನೇ ಸಿಎಂ ಎಂದಿದ್ದರು. ಹಾಗೇ ಡಿಸಿಎಂ ಆಗಿರಯವ ಡಿಕೆ ಶಿವಕುಮಾರ್ ಅವರು ಇನ್ನೇನು ಮಾಡಲು ಆಗುತ್ತೆ ಎಂಬ ಮಾತುಗಳನ್ನ ಆಡಿದ್ದರು. ಈ ಎಲ್ಲಾ ಬೆಳವಣಿಗೆಗಳಿಗೆ ಬ್ರೇಕ್ ಹಾಕೋದು ಅಂದ್ರೆ ಅದು ಮಲ್ಲಿಕಾರ್ಜುನ ಖರ್ಗೆ ಅವರನ್ನ ಸಿಎಂ ಮಾಡೋದು ಎಂಬ ಲೆಕ್ಕಾಚಾರ ಹೈಕಮಾಂಡ್ ದು ಎನ್ನಲಾಗ್ತಾ ಇದೆ. ಮೊದಲಿನಿಂದಾನು ರಾಜ್ಯದಲ್ಲಿ ದಲಿತ ಸಿಎಂ ಕೂಗು ಬೇರೆ ಕೇಳಿಸ್ತಾ ಇದೆ. ಹೀಗಾಗಿ ಈ ಗ್ಯಾಪ್ ನಲ್ಲಿಯೇ ದಲಿತ ಸಿಎಂ ಮಾಡುತ್ತಾರಾ ಎಂಬ ಪ್ರಶ್ನೆಯೂ ಎಲ್ಲರನ್ನ ಕಾಡುತ್ತಾ ಇದೆ. ಮಲ್ಲಿಕಾರ್ಜುನ ಖರ್ಗೆ ಅವರು ರಾಜ್ಯಾ ರಾಜಕಾರಣಕ್ಕೆ ಬರ್ತಾರೆ ಅಂದಾಗ ಯಾರೂ ಏನು ಮಾತಾಡಲ್ಲ ಅನ್ನೋದು ಕೂಡ ಕಾರಣವಾಗಿದೆ ಎಂಬ ಮಾತುಗಳು ಕೇಳಿ ಬರ್ತಿವೆ.

Share This Article
Leave a Comment

Leave a Reply

Your email address will not be published. Required fields are marked *

Enable Notifications OK No thanks