Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಶಿವಶಿಂಪಿ ಸಮಾಜಕ್ಕೆ ಸರ್ಕಾರದ ಸೌಲಭ್ಯಗಳನ್ನು ದೊರಕಿಸಿಕೊಡುವಲ್ಲಿ ಪ್ರಾಮಾಣಿಕ ಪ್ರಯತ್ನವನ್ನು ಮಾಡುತ್ತೇನೆ :  ಶಾಸಕ ಕೆ.ಸಿ.ವಿರೇಂದ್ರ

Facebook
Twitter
Telegram
WhatsApp

 

ವರದಿ ಮತ್ತು ಫೋಟೋ ಕೃಪೆ
ಸುರೇಶ್ ಪಟ್ಟಣ್,
ಮೊ : 98862 95817

ಚಿತ್ರದುರ್ಗ,(ಆ.06) : ಶಿವಶಿಂಪಿ ಸಮಾಜಕ್ಕೆ ಸರ್ಕಾರದವತಿಯಿಂದ ಸಿಗಬೇಕಾದ ಸೌಲಭ್ಯಗಳನ್ನು ದೊರಕಿಸಿಕೊಡುವಲ್ಲಿ ಪ್ರಾಮಾಣಿಕ ಪ್ರಯತ್ನವನ್ನು ಮಾಡುವುದಾಗಿ ಶಾಸಕ ಕೆ.ಸಿ.ವಿರೇಂದ್ರ (ಪಪ್ಪಿ) ಭರವಸೆ ನೀಡಿದ್ದಾರೆ.

ಚಿತ್ರದುರ್ಗ ಜಿಲ್ಲಾ ಲಿಂಗಾಯತ ಶಿವಶಿಂಪಿ ಸಮಾಜದವತಿಯಿಂದ ನಗರದ ತರಾಸು ರಂಗಮಂದಿರದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಕುಲಗುರು ಶ್ರೀ ಶಿವದಾಶಿಮಯ್ಯ ಜಯಂತಿ, ಪ್ರತಿಭಾ ಪುರಸ್ಕಾರ ಮತ್ತು ಸಾಧಕರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ಇಂತಹ ಜಾತಿ ಸಮಾರಂಭಗಳಲ್ಲಿ ಮಾತನಾಡುವಷ್ಟು ನಾನು ಇನ್ನು ಪಕ್ವವಾಗಿಲ್ಲ, ಮಕ್ಕಳ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹ ಮಾಡುತ್ತಿರುವುದುನ ಹಾಗೂ ಸಮಾಜದಲ್ಲಿ ಉತ್ತಮವಾದ ಸಾಧನೆಯನ್ನು ಮಾಡಿದವರನ್ನು ಗುರುತಿಸಿ ಸನ್ಮಾನ ಮಾಡುತ್ತಿರುವುದು ತುಂಬಾ ಉತ್ತಮವಾದ ಕೆಲಸವಾಗಿದೆ. ಶಿವಶಿಂಪಿ ಸಮಾಜವೆಂದರಡೆ ಕಾಯಕ ಸಮಾಜವಾಗಿದೆ. ಇವರು ತಮಗೆ ಒಪ್ಪಿಸಿದ ಕಾಯಕವನ್ನು ಮಾಡುವಲ್ಲಿ ನಿಷ್ಠೆಯನ್ನು ತೋರುತ್ತಾರೆ. ಇವರ ಕಾಯಕದಿಂದಲೇ ಪ್ರಸಿದ್ಧಿಯನ್ನು ಪಡೆದಿದ್ದಾರೆ ಸಮಾಜದವರು ಎಲ್ಲರೊಂದಿಗೆ ಬೆರೆತು ಹೊಂದಿಕೊಂಡು ಹೋಗುವಂತಹ ಸಮಾಜದವರಾಗಿದ್ದಾರೆ ಎಂದರು.

ಶಿವಶಿಂಪಿ ಸಮಾಜಕ್ಕೆ ಸರ್ಕಾರದಿಂದ ಯಾವ ರೀತಿಯ ಸೌಲಭ್ಯಗಳು ಸಿಗುತ್ತಿವೆ ಎಂದು ತಿಳಿದುಕೊಂಡು ಮುಂದೆ ಸಿಗಬೇಕಾದ ವಿವಿಧ ರೀತಿಯ ಸೌಲಭ್ಯಗಳನ್ನು ದೂರಕಿಸಿಕೊಡುವಲ್ಲಿ ಪ್ರಮಾಣಿಕವಾದ ಪ್ರಯತ್ನವನ್ನು ಮಾಡುತ್ತೇನೆ. ಚಿತ್ರದುರ್ಗದ ಸಮಾಜದವರು ತಮಗೆ ಸೇರಿದ ಶಾಲೆಯೊಂದರ ಬಗ್ಗೆ ಮನವಿ ಮಾಡಿದ್ದಾರೆ. ಇದರ ಬಗ್ಗೆ ಪರಿಶೀಲಿಸಿ ಮುಂದಿನ ಕ್ರಮವನ್ನು ತೆಗೆದುಕೊಳ್ಳಲಾಗುವುದು ಮುಂದಿನ ನಾಲ್ಕಾರು ದಿನಗಳಲ್ಲಿ ನನ್ನನು ಭೇಟಿ ಮಾಡುವಂತೆ ಸಮಾಜದವರಿಗೆ ಶಾಸಕರು ಸೂಚಿಸಿದರು.

ಕಾರ್ಯಕ್ರಮವನ್ನು ಉದ್ಘಾಟಿಸಿದ ಚಲನಚಿತ್ರ ನಟರಾದ ದೊಡ್ಡಣ್ಣ ಮಾತನಾಡಿ, ಪ್ರತಿಭಾ ಪುರಸ್ಕಾರ ಮತ್ತು ಸಾಧಕರಿಗೆ ಸನ್ಮಾನ ಕಾರ್ಯಕ್ರಮ ತುಂಬಾ ಉತ್ತಮವಾಗಿದೆ. ವಿದ್ಯಾರ್ಥಿಗಳನ್ನು ಗುರುತಿಸಿ ಪ್ರೋತ್ಸಾಹಿಸುವುದು ಸಾಧಕರನ್ನು ಗುರುತಿಸಿ ಸನ್ಮಾನಿಸುವುದು ಒಳ್ಳೆಯ ಕೆಲಸವಾಗಿದೆ. ಇದರಿಂದ ಇಬ್ಬರಿಗೂ ಸಹಾ ಪ್ರೋತ್ಸಾಹ ಸಿಗಲಿದೆ ಎಂದ ಅವರು, ಕನ್ನಡ ಭಾಷೆ ನಮ್ಮ ಮಾತೃ ಭಾಷೆಯಾಗಿದೆ ಅದನ್ನು ತಮ್ಮ ಮಕ್ಕಳಿಗೆ ಕಲಿಸಿ ಇಂದಿನ  ದಿನಮಾನದಲ್ಲಿ ಕೆಲವು ಪೋಷಕರು ಇಂಗ್ಲಿಷ್ ವ್ಯಾಮೋಹಕ್ಕೆ ಬಿದ್ದು ಕನ್ನಡವನ್ನು ಮರೆಯುತ್ತಿದ್ದಾರೆ. ಇದರಿಂದ ನಮಗೆ ಪೆಟ್ಟು ಬೀಳಲಿದೆ. ಇದರಿಂದ ಪೋಷಕರು ತಮ್ಮ ಮಕ್ಕಳಿಗೆ ಕನ್ನಡವನ್ನು ಕಲಿಸಿ ಕನ್ನಡ ಪುರಾತನವಾದ ಭಾಷೆಯಾಗಿದ್ದು ರನ್ನನ ಕಾಲದಲ್ಲಿಯೂ ಇತ್ತು ಈಗಲೂ ಇದೆ ಇದನ್ನು ನಾವುಗಳು ಮೆರೆಯಬಾರದೆಂದು ಕಿವಿ ಮಾತು ಹೇಳಿದರು.

ಇಂದಿನ ಯುವ ಜನತೆ ಸೇರಿದಂತೆ ಎಲ್ಲರಲ್ಲಿಯೂ ಸಹಾ ಮೊಬೈಲ್ ಬಳಕೆ ಹೆಚ್ಚಾಗಿದೆ ಇದರಿಂದ ಯುವ ಜನತೆ ಹಾಳುಗುತ್ತಿದೆ. ಸಾಧ್ಯವಾದಷ್ಟಿ ಇದರ ಬಳಕೆಯನ್ನು ಕಡಿಮೆ ಮಾಡಿ ಅನಿವಾಯ್ ಇದ್ದಾಗ ಮಾತ್ರ ಇದನ್ನು ಬಳಸಿ ಎಂದು ತಿಳಿಸಿದ ದೊಡ್ಡಣ್ಣ, ಮಕ್ಕಳು ಮೋಬೈಲ್ ಹಿಡಿಯುವುದಕ್ಕಿಂತ ಪುಸ್ತಕವನ್ನು ಹಿಡಿಯುವುದರಿಂದ ಜ್ಞಾನ ವೃದ್ದಿಯಾಗುತ್ತದೆ, ನಿಮ್ಮನ್ನು ಎತ್ತರಕ್ಕೆ ಕೊಂಡೂಯುತ್ತದೆ. ನಮ್ಮ ವಚನ ಸಾಹಿತ್ಯವು ಸಹಾ ಕನ್ನಡದಲ್ಲಿಯೇ ಇದೆ ಅದನ್ನು ಓದಲು ಕನ್ನಡ ಭಾಷೆಯ ಅವಶ್ಯಕತೆ ಇದೆ. ಕನ್ನಡ ಭಾಷೆ ಎನ್ನವುದು ಅಮೃತಕ್ಕೆ ಸಮಾನವಾದದು, ಪ್ರತಿಯೊಬ್ಬರಿಗೂ ಅರ್ಥವಾಗುವ ರೀತಿಯಲ್ಲಿದೆ ಬಸವಣ್ಣನವರಿಗೆ ಜಾತಿ ಮತ ಎಂಬ ಬೇಧ ಇರಲಿಲ್ಲ, ಎಲ್ಲರನ್ನು ಒಂದೇ ಎಂಬ ಭಾವನೆಯಿಂದ ನೋಡುತ್ತಿದ್ದರು ಎಂದು ತಿಳಿಸಿದರು.

ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಯನ್ನು ಮಾಡಿದ ಸಮಾಜ ಭಾಂಧವರನ್ನು ಸನ್ಮಾನಿಸಲಾಯಿತು, 2022-23ನೇ ಸಾಲಿನಲ್ಲಿ ಎಸ್.ಎಸ್.ಎಲ್.ಸಿ. ಮತ್ತು ಪಿಯುಸಿಯಲ್ಲಿ ಉತೀರ್ಣರಾದ ಜಿಲ್ಲೆಯ ಹಾಗೂ ಹೂರ ಜಿಲ್ಲೆಯ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಹುಬ್ಬಳ್ಳಿಯ ಅಖಿಲ ಭಾರತ ಲಿಂಗಾಯತ ಶಿವಶಿಂಪಿ ಸಮಾಜದ ಉಪಾಧ್ಯಕ್ಷರಾದ ಡಾ.ಪ್ರಭಾಕರ್ ಶಿವಶಿಂಪಿ, ದಾವಣಗೆರೆ ಶಿವಶಿಂಪಿ ಸಮಾಜದ ಅಧ್ಯಕ್ಷರಾದ ಗುರುಬಸಪ್ಪ ಬೂಸ್ನೂರ್, ಬೆಂಗಳೂರು ಜಿಲ್ಲಾ ಶಿವಶಿಂಪಿ ಸಮಾಜದ ಅಧ್ಯಕ್ಷರಾದ ಸುಭಾಶ್ ಕುಬಸದ್, ಜಿಲ್ಲಾ ಲಿಂಗಾಯತ ಶಿವಶಿಂಪಿ ಸಮಾಜದ ಮಹಿಳಾ ಘಟಕದ ಅಧ್ಯಕ್ಷರಾದ ಶ್ರೀಮತಿ ಅನಿತಾ ಮುರುಗೇಶ್ ಸೊಲ್ಲಾಪುರದ ಶಿವಶಿಂಪಿ ಸಮಾಜದ ಮಹಿಳಾ ಘಟಕದ ಅಧ್ಯಕ್ಷರಾದ ಶ್ರೀಮತಿ ಸ್ಮಿತಾ ಅನಿಲ್ ಕುಮಾರ್ ನಾಯ್ಕ್ ಭಾಗವಹಿಸಿದ್ದರು.

ಶ್ರೀಮತಿ ಶೈಲಜ ವಿಜಯಕುಮಾರ್ ಪ್ರಾರ್ಥಿಸಿದರೆ, ಜಿಲ್ಲಾ ಲಿಂಗಾಯತ ಶಿವಶಿಂಪಿ ಸಮಾಜದ ಕಾರ್ಯದರ್ಶಿ ಇ.ಕೆ.ಮಲ್ಲಿಕಾರ್ಜನ್ ಸ್ವಾಗತಿಸಿ ಪ್ರಸ್ತಾವಿಕವಾಗಿ ಮಾತನಾಡಿದರು, ಎಸ್.ವಿ. ಕೊಟ್ರೇಶ್ ವಂದಿಸಿದರು. ಶ್ರೀಮತಿ ನಿರ್ಮಲ ಬಸವರಾಜು ಮತ್ತು ಶ್ರೀಮತಿ ಗೀತಾ ರುದ್ರೇಶ್ ಕಾರ್ಯಕ್ರಮ ನಿರೂಪಿಸಿದರು.


ಚಿತ್ರದುರ್ಗ ಜಿಲ್ಲಾ ಲಿಂಗಾಯತ ಶಿವಶಿಂಪಿ ಸಮಾಜದವತಿಯಿಂದ ಭಾನುವಾರ ಹಮ್ಮಿಕೊಂಡಿದ್ದ ಕುಲಗುರು ಶ್ರೀ ಶಿವದಾಶಿಮಯ್ಯ ಜಯಂತಿ, ಪ್ರತಿಭಾ ಪುರಸ್ಕಾರ ಮತ್ತು ಸಾಧಕರಿಗೆ ಸನ್ಮಾನ ಕಾರ್ಯಕ್ರಮದ ಅಂಗವಾಗಿ ಬೃಹತ್ ಮೆರವಣಿಗೆಯನ್ನು ಹಮ್ಮಿಕೊಳ್ಳಲಾಗಿತ್ತು.

ನಗರದ ರಂಗಯ್ಯನ ಬಾಗಿಲು ಬಳಿಯ ಮದಕರಿ ಗಣಪತಿ ದೇವಾಲಯದಿಂದ ಪ್ರಾರಂಭವಾದ ಮೆರವಣಿಗೆಯನ್ನು ಬೆಂಗಳೂರು ಜಿಲ್ಲಾ ಶಿವಶಿಂಪಿ ಸಮಾಜದ ಅಧ್ಯಕ್ಷರಾದ ಸುಭಾಶ್ ಕುಬಸದ್ ರವರು ಕುಲಗುರು ಶ್ರೀ ಶಿವದಾಶಿಮಯ್ಯರವರ ಭಾವಚಿತ್ರಕ್ಕೆ ಪುಷ್ಟನಮನ ಸಲ್ಲಿಸುವುದರ ಮೂಲಕ ಮೆರವಣಿಗೆಗೆ ಚಾಲನೆ ನೀಡಿದರು.

ಇದೇ ಮೆರವಣಿಗೆಯಲ್ಲಿ ವೀರಗಾಸೆಯ ತಂಡದವರು ಭಾಗವಹಿಸುವುದರ ಮೂಲಕ ದಾರಿಯುದ್ದಕ್ಕೂ ನೀರಗಾಸೆಯ ಒಡಪುಗಳನ್ನು ಹೇಳುವುದರ ಮೂಲಕ ಜನರ ಗಮನ ಸೆಳೆದರು. ಮೆರವಣಿಗೆಯ ರಂಗಯ್ಯನ ಬಾಗಿಲು, ದೊಡ್ಡಪೇಟೆ, ಉಚ್ಚಂಗಿ ಯಲ್ಲಮ್ಮ ದೇವಾಲಯ ಚಿಕ್ಕಪೇಟೆ, ಆನೆ ಬಾಗಿಲು ಸಂತೇಪೇಟೆ, ಎಸ್.ಬಿ.ಎಂ. ವೃತ್ತ, ಮಹಾವೀರ ವೃತ್ತ, ಮದಕರಿ ವೃತ್ತದ ಮೂಲಕ ಹಾದು ತರಾಸು ರಂಗಮಂದಿರವನ್ನು ಸೇರಿತು. ಸಂತೇಪೇಟೆ ವೃತ್ತದಲ್ಲಿ ಮಹಿಳೆಯರು ನೃತ್ಯವನ್ನು ಮಾಡುವುದರ ಮೂಲಕ ಸೇರಿದಿದ್ದ ಜನತೆಯ ಗಮನ ಸೆಳೆದರು.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಬಿಜೆಪಿ ಪಕ್ಷದಿಂದ ಉಚ್ಛಾಟನೆಗೊಂಡ ಈಶ್ವರಪ್ಪ..!

ಬೆಂಗಳೂರು: ಲೋಕಸಭಾ ಚುನಾವಣೆಯಲ್ಲಿ ಶಿವಮೊಗ್ಗ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಕೆ ಎಸ್ ಈಶ್ವರಪ್ಪ ಅವರನ್ನು ಬಿಜೆಪಿ ಪಕ್ಷದಿಂದ ಉಚ್ಛಾಟನೆ ಮಾಡಿದೆ. ತನ್ನ ಮಗನಿಗೆ ಸಿಗಲಿಲ್ಲ ಎಂಬ ಕಾರಣಕ್ಕೆ ಈಶ್ವರಪ್ಪ ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ

ಅಂಚೆ ಮತದಾನ ಸೇವಾಕೇಂದ್ರ : ಮತ ಚಲಾಯಿಸಲು ಏ.25 ಕಡೆಯ ದಿನ

ಚಿತ್ರದುರ್ಗ ಏ.22:  ಬೇರೆ ಲೋಕಸಭಾ ಕ್ಷೇತ್ರದ ಮತದಾರರಾಗಿದ್ದು, ಚಿತ್ರದುರ್ಗ ಲೋಕಸಭಾ ಕ್ಷೇತ್ರ ಚುನಾವಣೆ ಕಾರ್ಯದಲ್ಲಿ ನಿರತವಾಗಿರುವ ನೌಕರರು, ಮತಚಲಾಯಿಸಲು ಅನುಕೂಲವಾಗುವಂತೆ ಎಲ್ಲಾ ವಿಧಾನಸಭಾ ಕ್ಷೇತ್ರದ ಸಹಾಯಕ ಚುನಾವಣಾಧಿಕಾರಿಗಳ ಕಚೇರಿಯಲ್ಲಿ ಅಂಚೆ ಮತದಾನ ಸೇವಾಕೇಂದ್ರ ತೆರೆಯಲಾಗಿದೆ.

ಚಿತ್ರದುರ್ಗ ಲೋಕಸಭಾ ಚುನಾವಣೆ: ಏಪ್ರಿಲ್ 24ರ ಸಂಜೆ 6ಕ್ಕೆ ಬಹಿರಂಗ ಪ್ರಚಾರ ಅಂತ್ಯ : ಜಿಲ್ಲಾಧಿಕಾರಿ ಕಟ್ಟುನಿಟ್ಟಿನ ಸೂಚನೆ

ಚಿತ್ರದುರ್ಗ.ಏ.22: ಚಿತ್ರದುರ್ಗ ಲೋಕಸಭಾ ಚುನಾವಣೆಗೆ ಇದೇ ಏಪ್ರಿಲ್ 26ರಂದು ಬೆಳಿಗ್ಗೆ 7 ರಿಂದ ಸಂಜೆ 6 ರವರೆಗೆ ಮತದಾನ ನಡೆಯಲಿದೆ. ಮತದಾನ ಮುಕ್ತಾಯಗೊಳ್ಳುವ 48 ಗಂಟೆಗಳ ಮುಂಚೆ ಬಹಿರಂಗ ಪ್ರಚಾರ ಅಂತ್ಯಗೊಳಿಸಬೇಕು ಎಂದು ಚುನಾವಣಾಧಿಕಾರಿ

error: Content is protected !!