ಬೆಂಗಳೂರು: ಮಾಡಾಳು ಪ್ರಶಾಂತ್ ಕಚೇರಿಯಲ್ಲಿ ಲೋಕಾಯುಕ್ತ ದಾಳಿಯಿಂದ ಪತ್ತೆಯಾಗಿದ್ದು ಕೋಟಿ ಕೋಟಿ ಹಣ. ಬಗೆದಷ್ಟು ಮಾಡಾಳು ಭ್ರಷ್ಟಾಚಾರದ ಸಾಮ್ರಾಜ್ಯ ತೆರೆದುಕೊಳ್ಳುತ್ತಾ ಇದೆ. ಸದ್ಯ ಮಾಡಾಳು ಪ್ರಶಾಂತ್ ನ್ಯಾಯಾಂಗ ಬಂಧನದಲ್ಲಿದ್ದಾರೆ. ಈಗ ಶಾಸಕ ಮಾಡಾಳು ವಿರೂಪಾಕ್ಷಪ್ಪಗೆ ಲೋಕಾಯುಕ್ತ ಅಧಿಕಾರಿಗಳಿಂದ ಲುಕ್ ಔಟ್ ನೋಟೀಸ್ ಕೂಡ ಹೊರಡಿಸಲಾಗಿದೆ.
ಮಗನ ಮೋಸದ ಜಾಲ ಪತ್ತೆಯಾದ ಕೂಡಲೇ ಮಾಡಾಳು ವಿರೂಪಾಕ್ಷಪ್ಪ ಎಸ್ಕೇಪ್ ಆಗಿದ್ದರು. ಬಂಧನದ ಭೀತಿಗೆ ಒಳಗಾಗಿದ್ದರು. ಆದ್ರೆ ಇಂದು ಅವರ ಭವಿಷ್ಯ ನಿರ್ಧಾರವಾಗಲಿದೆ. ವಿರೂಪಾಕ್ಷಪ್ಪ ಅವರ ವಕೀಲರು ಹೈಕೋರ್ಟ್ ನಲ್ಲಿ ಜಾಮೀನು ಅರ್ಜಿ ಹಾಕಿದ್ದಾರೆ. ತುರ್ತು ವಿಚಾರಣೆ ನಡೆಸುವಂತೆ ಕೋರಿದ್ದಾರೆ.
ಮಾಡಾಳು ಪ್ರಶಾಂತ್ ಹಣ ಪಡೆಯುವಾಗ ವಿರೂಪಾಕ್ಷಪ್ಪ ಆ ಸ್ಥಳದಲ್ಲಿ ಇಲ್ಲದೆ ಇದ್ದ ಕಾರಣವನ್ನೆ ಇಟ್ಟುಕೊಂಡು ವಕೀಲರು ವಾದ ಮಂಡಿಸುವ ಸಾಧ್ಯತೆ ಇದೆ. ಹೈಕೋರ್ಟ್ ನಿಂದ ಇಂದು ಜಾಮೀನು ಸಿಕ್ಕರೆ ವಿರೂಪಾಕ್ಷಪ್ಪ ಅವರಿಗೆ ರಿಲೀಫ್ ಸಿಕ್ಕಂತೆ. ಜಾಮೀನು ತಿರಸ್ಕಾರ ಮಾಡಿದರೆ ಅರೆಸ್ಟ್ ವಾರೆಂಟ್ ಜಾರಿಯಾಗುವ ಸಾಧ್ಯತೆ ಇದೆ. ಯಾಕಂದ್ರೆ ಮಾಡಾಳು ಪ್ರಶಾಂತ್ ಅವ್ಯವಹಾರದಲ್ಲಿ ವಿರೂಪಾಕ್ಷಪ್ಪ ಬೆಂಬಲವೂ ಹೆಚ್ಚಿದೆ ಎಂದು ತಿಳಿದು ಬಂದಿದೆ ಎನ್ನಲಾಗಿದೆ.