ಬೆಂಗಳೂರು; ಡಿಸಿಎಂ ಡಿಕೆ ಶಿವಕುಮಾರ್ ಅವರು ಕಾಂಗ್ರೆಸ್ ಶಾಸಕರಿಗಾಗಿ ಔತಣಕೂಟ ಆಯೋಜಿಸಿದ್ದರು. ಈ ಔತಣಕೂಟದಲ್ಲಿ ಬಿಜೆಪಿಯ ನಾಯಕರು ಸಹ ಭಾಗಿಯಾಗಿದ್ದದ್ದು ಆಶ್ಚರ್ಯವಾಗಿತ್ತು. ಅದರಲ್ಲೂ ಮಾಜಿ ಸಿಎಂ ಯಡಿಯೂರಪ್ಪ ಅವರ ಆಪ್ತ, ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಬಣದಲ್ಲಿ ಗುರುತಿಸಿಕೊಂಡಿರುವ ಮಾಜಿ ಸಚಿವ ರೇಣುಕಾಚಾರ್ಯ ಅವರು ಕಾಂಗ್ರೆಸ್ ಸೇರಿಕೊಳ್ಳುತ್ತಿದ್ದಾರಾ ಎಂಬ ಅನುಮಾನ ಕಾಡುವುದಕ್ಕೆ ಶುರುವಾಗಿದೆ. ಅದಕ್ಕೆ ಕಾರಣ ಇಂದು ವೈರಲ್ ಆಗಿರುವ ರೇಣುಕಾಚಾರ್ಯ ಅವರ ಫೋಟೋ.

ಹೌದು ಎಂ.ಪಿ.ರೇಣುಕಾಚಾರ್ಯ ಅವರು ಡಿಸಿಎಂ ಡಿಕೆ ಶಿವಕುಮಾರ್ ಅವರನ್ನು ಭೇಟಿಯಾಗಿ, ಫೋಟೋ ತೆಗೆಸಿಕೊಂಡಿದ್ದಾರೆ. ಈ ಫೋಟೋ ನೋಡಿದ ರಾಜಕೀಯ ಗಣ್ಯರು, ಬಿಜೆಪಿ ನಾಯಕರು ಇವರೇನು ಕಾಂಗ್ರೆಸ್ ಸೇರುವ ಯೋಜನೆಯಲ್ಲಿದ್ದಾರಾ ಎಂಬ ಚರ್ಚೆ ಶುರು ಮಾಡಿಕೊಂಡಿದ್ದಾರೆ. ಕೆಪಿಸಿಸಿ ಅಧ್ಯಕ್ಷರಾಗಿ ಡಿಕೆ ಶಿವಕುಮಾರ್ ಅವರು ಐದು ವರ್ಷ ಪೂರೈಸಿದ ಹಿನ್ನಲೆಯಲ್ಲಿ ಕಾಂಗ್ರೆಸ್ ನಾಯಕರೆಲ್ಲರೂ ಡಿಕೆ ಶಿವಕುಮಾರ್ ಅವರನ್ನು ಅಭಿನಂದಿಸಿದ್ದರು. ಆದರೆ ಇದೇ ವೇಳೆ ಸದ್ದಿಲ್ಲದೆ ಡಿಸಿಎಂ ಡಿಕೆ ಶಿವಕುಮಾರ್ ಅವರುಗೆ ಹೂಗುಚ್ಛ ನೀಡಿ, ರೇಣುಚಾರ್ಯ ಅವರು ಕೂಡ ಅಭಿನಂದಿಸಿರುವುದು ಅನುಮಾನಕ್ಕೆ ಕಾರಣವಾಗಿದೆ.

ಇತ್ತ ಕಾಂಗ್ರೆಸ್ ಕೂಡ ಅವಕಾಶವನ್ನ ನೀಡಿದೆ. ಯಾರೂ ಬೇಕಾದರೂ ನಮ್ಮ ಪಕ್ಷಕ್ಕೆ ಬರಬಹುದು ಎಂದು. ಬೇರೆ ಪಕ್ಷದಿಂದ ಬರುವ ಎಲ್ಲರಿಗೂ ಸ್ವಾಗತ ಎಂದೇ ಹೇಳಿದ್ದಾರೆ. ಇದರ ನಡುವೆಯೇ ರೇಣುಕಾಚಾರ್ಯ ಅವರ್ಯಾಕೆ ಭೇಟಿ ಮಾಡಿದರು ಎಂಬ ಕುತೂಹಲ ಮೂಡಿದೆ. ತಮ್ಮ ಕ್ಷೇತ್ರದ ಅಭಿವೃದ್ದಿ ಅಂತ ನೆಪ ಹೇಳಿದ್ರು ಕೂಡ, ಅವರೀಗ ಶಾಸಕರಾಗಲಿ ಬೇರೆ ಯಾವುದೇ ಹುದ್ದೆಯಲ್ಲಾಗಲಿ ಇಲ್ಲ. ಹೀಗಾಗಿ ಎಲ್ಲರಿಗೂ ರೇಣುಕಾಚಾರ್ಯ ಮೇಲೆ ಅನುಮಾನ ಮೂಡಿದೆ.

