ಮಂಡ್ಯ ; ಈ ಬಾರಿ ಮುಂಗಾರು ಮಳೆ ಅದ್ಭುತವಾಗಿ ಆರಂಭವಾಗಿದೆ. ಈಗಾಗಲೇ ರಾಜ್ಯದ ಕೆಲವು ಜಲಾಶಯಗಳಲ್ಲಿ ಒಳ ಹರಿವು ಹೆಚ್ಚಳವಾಗಿದೆ. ಈ ವರ್ಷ ಉತ್ತಮ ಮಳೆಯಾಗಲಿದೆ ಎಂಬುದನ್ನು ತಜ್ಞರು ಕೂಡ ತಿಳಿಸಿದ್ದಾರೆ. ಈ ಬೆನ್ನಲ್ಲೇ ಕೆಆರ್ಎಸ್ ಜಲಾಶಯ ಬಲುಬೇಗನೆ ತುಂಬಲಿದೆ ಎನ್ನಲಾಗುತ್ತಿದೆ. ಶ್ರೀರಂಗಪಟ್ಟಣ ತಾಲೂಕಿನ ಕೆಆರ್ಎಸ್ ಜಲಾಶಯದ ಒಳ ಹರಿವು ಹೆಚ್ಚಳವಾಗಿರುವುದು ರೈತರಿಗೆ ಸಂತಸ ತಂದುಕೊಟ್ಟಿದೆ.
ಕೆಆರ್ಎಸ್ ಅಣೆಕಟ್ಟೆಯ ನೀರಿನ ಮಟ್ಟ ಏರಿಜೆಯಾಗಿದೆ. ಜಲಾಯಶ ಭರ್ತಿಗೆ ಇನ್ನು ಕೇವಲ ನಾಲ್ಕೇ 4 ಅಡಿ ನೀರು ಮಾತ್ರ ಬಾಕಿ ಇದೆ. 13 ಸಾವಿರಕ್ಕೂ ಅಧಿಕ ಕ್ಯೂಸೆಕ್ ನೀರು ಜಲಾಶಯದತ್ತ ಹರಿದು ಬರುತ್ತಿರುವುದು ಒಳ್ಳೆಯ ವಿಷಯವಾಗಿದೆ. ಕಾವೇರಿ ಜಲಾನಯನ ಪ್ರದೇಶದಲ್ಲಿ ಮಳೆ ಜೋರಾದ ಹಿನ್ನೆಲೆ ಕೆಆರ್ಎಸ್ ನಲ್ಲಿ ನೀರು ಜಾಸ್ತಿಯಾಗಿದೆ. ಜಲಾಶಯಕ್ಕೆ ಅಪಾರ ಪ್ರಮಾಣದಲ್ಲಿ ನೀರು ಹರಿದು ಬರುತ್ತಿದ್ದು, 124 ಅಡಿ ಒರುವ ಕೆಆರ್ಎಸ್ ಜಲಾಶಯ ಈಗಾಗಲೇ 120 ಅಡಿಯಷ್ಟು ಭರ್ತಿಯಾಗಿದೆ.
ಭರ್ತಿಯಾಗುವುದಕ್ಕೆ ಇನ್ನು ನಾಲ್ಕು ಅಡಿ ಮಾತ್ರ ಬಾಕಿ ಇದೆ. ಈ ವಾರದಲ್ಲಿಯೇ ಅದು ಕೂಡ ಭರ್ತಿಯಾಗುವ ಸಾಧ್ಯತೆ ಇದೆ. ಒಂದು ವೇಳೆ ಜೂನ್ ವೇಳೆಗೆ ನೀರೇನಾದ್ರೂ ತುಂಬಿದರೆ ಒಂದು ಇತಿಹಾಸವನ್ನೇ ಸೃಷ್ಟಿ ಮಾಡುತ್ತದೆ. ಇದೇ ಮೊದಲ ಬಾರಿಗೆ ಕೆಆರ್ಎಸ್ ಜಲಾಶಯ ಜೂನ್ ತಿಂಗಳಲ್ಲಿ ಪೂರ್ಣ ಪ್ರಮಾಣದಲ್ಲಿ ಭರ್ತಿಯಾದಂತೆ ಆಗುತ್ತದೆ. ಜೂನ್ ನಲ್ಲಿ ಭರ್ತಿಯಾದರೆ ಹೊಸ ದಾಖಲೆ ಕೆಆರ್ಎಸ್ ಬರೆಯಲಿದೆ. 124.80 ಅಡಿಯ ಕೆಆರ್ಎಸ್ ಡ್ಯಾಂ ಈಗ 120.20 ಅಡಿಯಷ್ಟು ನೀರು ತುಂಬಿದೆ. ಇದು ಆ ಭಾಗದ ರೈತರಿಗೆ ಖುಷಿ ತಂದಿದೆ.















