IPL ನೀತಿಸಂಹಿತೆ ಉಲ್ಲಂಘಿಸಿ ಕೋಟಿ ಕೋಟಿ ದಂಡ ಕಟ್ಟಿರುವ ಕೊಹ್ಲಿ ಐಪಿಎಲ್ ನಿಂದ ಬ್ಯಾನ್ ಆಗ್ತಾರಾ..?

 

ಈ ಬಾರಿಯ ಐಪಿಎಲ್ ನಲ್ಲಿ ಖಂಡಿತ ಕಪ್ ಗೆದ್ದೆ ಗೆಲ್ಲುತ್ತಾರೆ ಎಂಬ ಭರವಸೆ ಕ್ರಿಕೆಟ್ ಪ್ರಿಯರದ್ದಾಗಿದೆ. ಅದಕ್ಕೆ ತಕ್ಕಂತೆ ನಮ್ಮ ಆರ್ಸಿಬಿ ಆಟಗಾರರು ತಮ್ಮ ಆಟವನ್ನು ಆಗಾಗ ತೋರಿಸುತ್ತಾ ಇದ್ದಾರೆ. ಸದ್ಯ ಡೆಲ್ಲಿಯಲ್ಲಿ ಆರ್ಸಿಬಿ ಟೀಂ ಬೀಡು ಬಿಟ್ಟಿದೆ. ಡೆಲ್ಲಿ‌ ಕ್ಯಾಪಿಟಲ್ಸ್ ಜೊತೆಗೆ ಆರ್ಸಿಬಿ ಸೆಣೆಸಾಡಲು ಸಿದ್ಧವಾಗಿದೆ. ಇದರ‌ ನಡುವೆಯೇ ವಿರಾಟ್ ಕೊಹ್ಲಿ ಬಗ್ಗೆ ಆತಂಕ ಎದುರಾಗಿದೆ.

 

ವಿರಾಟ್ ಕೊಹ್ಲಿಯನ್ನು ಒಂದೆರಡು ಪಂದ್ಯಗಳಿಂದ ಬ್ಯಾನ್ ಮಾಡಲಿದ್ದಾರೆ ಎಂಬ ಮಾತು ಕೇಳಿ ಬರುತ್ತಿದೆ. ಇದು ಆರ್ಸಿಬಿ ಫ್ಯಾನ್ಸ್ ಗೆ ಬೇಸರ ಉಂಟು ಮಾಡಿದ ಸುದ್ದಿಯಾಗಿದೆ. ಯಾಕಂದ್ರೆ ವಿರಾಟ್ ಕೊಹ್ಲಿ ಐಪಿಎಲ್ ನಿಯಮಗಳನ್ನು ಮೀರಿದ್ದಾರೆ. ಹೀಗಾಗಿ ಬ್ಯಾನ್ ಆಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

ಸತತ ಮೂರು ಪಂದ್ಯಗಳಲ್ಲಿ ವಿರಾಟ್ ಕೊಹ್ಲಿ ಅವರು ನಿಯಮ ಉಲ್ಲಂಘನೆ ಮಾಡಿದ್ದಾರೆ. ಅದಕ್ಕಾಗಿಯೇ ಮೂರು ಬಾರಿ ದಂಡವನ್ನು ಕಟ್ಟಿದ್ದಾರೆ. ಅತಿರೇಕದ ಸಂಭ್ರಮ ಪಟ್ಟಿದ್ದಕ್ಕಾಗಿ 12 ಲಕ್ಷ, ಸ್ಲೋ ಓವರ್ ರೇಟ್ 24 ಲಕ್ಷ, ಸಂಘರ್ಷ 1.7 ಕೋಟಿ ದಂಡ ಕಟ್ಟಿದ್ದಾರೆ.

ನೀತಿ ಸಂಹಿತೆ ಪ್ರಕಾರ ಮೂರು ಬಾರಿ ಸ್ಲೋ ಓವರ್ ರೇಟ್ ಶಿಕ್ಷೆಗೆ ಗುರಿಯಾದರೆ ಒಂದು ಪಂದ್ಯದ ನಿಷೇಧದ ಜೊತೆಗೆ 30 ಲಕ್ಷ ದಂಡ ವಿಧಿಸಲಾಗುತ್ತದೆ. ಸದ್ಯ ಮೂರು ಶಿಕ್ಷೆಗೆ ಗುರಿಯಾಗಿರುವ ಕೊಹ್ಲಿ ಪಂದ್ಯದಿಂದ ಬ್ಯಾನ್ ಆಗುವ ಆತಂಕ ಶುರುವಾಗಿದೆ.

Share This Article
Leave a Comment

Leave a Reply

Your email address will not be published. Required fields are marked *