ಇಂಥದ್ದೊಂದು ವಿಚಾರ ಈಗ ರಾಜಕೀಯ ವಲಯ ಹಾಗೂ ಗಾಂಧಿನಗರದಲ್ಲಿ ಸಾಕಷ್ಟು ಸದ್ದು ಮಾಡುತ್ತಾ ಇದೆ. ಸುದೀಪ್ ಅವರಿಗೆ ರಾಜಕೀಯ ಹೊಸದೇನು ಅಲ್ಲ. ಈ ಹಿಂದೆಯೂ ಚುನಾವಣಾ ಅಖಾಡಕ್ಕೆ ಇಳಿದಿದ್ದರು. ಅದು ಸ್ನೇಹಿತರಿದ್ದ ಪಕ್ಷಕ್ಕೆ ಹೋಗಿ ಪ್ರಚಾರ ಮಾಡಿ ಬರುತ್ತಾ ಇದ್ದರು. ಆದರೆ ಈ ಬಾರಿ ಅವರನ್ನೇ ರಾಜಕೀಯ ಅಖಾಡಕ್ಕೆ ಇಳಿಸಲು ಕಾಂಗ್ರೆಸ್ ಮನಸ್ಸು ಮಾಡಿದೆ. ಅದಕ್ಕಾಗಿಯೇ ನಟಿ, ಮಾಜಿ ಸಂಸದೆ ರಮ್ಯಾ ಅವರನ್ನು ಸುದೀಪ್ ಅವರ ಭೇಟಿಗೆ ಕಳುಹಿಸಿದೆ ಎನ್ನಲಾಗಿದೆ.
ಸುದೀಪ್ ಅವರನ್ನು ಪಕ್ಷಕ್ಕೆ ಸೆಳೆಯಲು ಕಾಂಗ್ರೆಸ್ ಮಾಸ್ಟರ್ ಪ್ಲ್ಯಾನ್ ಮಾಡಿದೆ. ಅದಕ್ಕೆಂದೆ ರಮ್ಯಾ ಅವರನ್ನೇ ಮುಂದೆ ಬಿಟ್ಟಿದೆ ಎನ್ನಲಾಗುತ್ತಿದೆ. ಕಳೆದ ಎರಡು ದಿನಗಳ ಹಿಂದೆ ರಮ್ಯಾ ಅವರು ಸುದೀಪ್ ಅವರ ಮನೆಗೆ ಹೋಗಿದ್ದಂತೆ. ಸುದೀಪ್ ಅವರಿಗೆ ತಮ್ಮ ಪಕ್ಷಕ್ಕೆ ಬರುವಂತೆ ಆಹ್ವಾನ ನೀಡಿದ್ದಾರೆ ಎನ್ನಲಾಗಿದೆ.
ಸುದೀಪ್ ಅವರನ್ನು ಪಕ್ಷಕ್ಕೆ ಆಹ್ವಾನ ಮಾಡಿದ್ದಲ್ಲದೆ, ಕಾಂಗ್ರೆಸ್ ಗೆ ಬಂದ್ರೆ ಕ್ಷೇತ್ರ ಕೂಡ ನಿಗದಿ ಮಾಡಲಾಗಿದೆಯಂತೆ. ಶಿವಮೊಗ್ಗ ಅಥವಾ ಚಿತ್ರದುರ್ಗದಲ್ಲಿ ನಿಂತುಕೊಳ್ಳಲು ಆಫರ್ ನೀಡಲಾಗಿದೆಯಂತೆ. ಈ ಎರಡು ಕ್ಷೇತ್ರದಲ್ಲಿ ಎಸ್ಟಿ ಸಮುದಾಯದ ವೋಟ್ ಗಳು ಹೆಚ್ಚಾಗಿರುವ ಕಾರಣ ST ವೋಟ್ ಗಳನ್ನು ಸೆಳೆಯುವುದಕ್ಕೆ ಕಾಂಗ್ರೆಸ್ ಈ ತೀರ್ಮಾನ ಮಾಡಿದೆ ಎನ್ನಲಾಗಿದೆ. ಇದಾಗ್ಯೂ ಸುದೀಪ್ ಕಡೆಯಿಂದ ಏನು ಉತ್ತರ ಬರಲಿದೆ ಎಂಬುದು ಎಲ್ಲರ ಕುತೂಹಲವಾಗಿದೆ.