ಕಳಪೆ‌ ಪ್ರದರ್ಶನ ತೋರಿದ ಮ್ಯಾಕ್ಸಿ ಜಾಗಕ್ಕೆ ಬರಲಿದ್ದಾರಾ ಕನ್ನಡಿಗ ವಿಜಯ್ ಕುಮಾರ್

ಈ ಬಾರಿ ಆರ್ಸಿಬಿ ಮಹಿಳೆಯರ ತಂಡ ಗೆಲುವು ಕಂಡು ಕಪ್ ಎತ್ತಿಕೊಂಡು ಬಂದಿದೆ. ಆದರೆ ಪುರುಷರ ಟೀಂ ಮಾತ್ರ ಅಭಿಮಾನಿಗಳಿಗೆ ಬೇಸರ ಮಾಡುತ್ತಲೆ ಇದೆ. 17ನೇ ಆವೃತ್ತಿಯಲ್ಲಿ ಈಗಾಗಲೇ ನಾಲ್ಕು ಪಂದ್ಯಗಳನ್ನು ಸೋತಿದೆ. ಇದೀಗ ಏಪ್ರಿಲ್ 11ರಂದು ನಡೆಯುವ ಹೈವೋಲ್ಟೇಜ್ ಪಂದ್ಯದಲ್ಲಿ ಹಲವು ಬದಲಾವಣೆಗಳು ನಡೆಯಲಿವೆ.

ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ಆರ್ಸಿಬಿ ಹಾಗೂ ಮುಂಬೈ ಇಂಡಿಯನ್ಸ್ ತಂಡ ಮುಖಾಮುಖಿಯಾಗಲಿವೆ. ಮುಂಬೈ ವಿರುದ್ಧ ಗೆಲ್ಲಲೇಬೇಕಾದ ಅನಿವಾರ್ಯತೆ ಆರ್ಸಿಬಿ ತಂಡಕ್ಕೆ ಇದೆ. ಹೀಗಾಗಿ ತಂಡದಲ್ಲಿ ಒಂದಷ್ಟು ಬದಲಾವಣೆಯನ್ನು ತರಲು ಹೊರಟಿದೆ.

ಆರ್​​ಸಿಬಿ ಸ್ಟಾರ್ ಆಟಗಾರರೇ ಕಳಪೆ ಪ್ರದರ್ಶನ ನೀಡುತ್ತಿದ್ದಾರೆ. ಅದರಲ್ಲೂ ಸ್ಟಾರ್​ ಆಲ್​ರೌಂಡರ್​ ಮ್ಯಾಕ್ಸಿ ಕಳೆದ 5 ಪಂದ್ಯಗಳಲ್ಲೂ ಕಳಪೆ ಪ್ರದರ್ಶನ ನೀಡಿದ್ದು, ಕೇವಲ 32 ರನ್​ ಗಳಿಸಿದ್ದಾರೆ. ಹಾಗಾಗಿ ಆರ್​ಸಿಬಿ ಮ್ಯಾಕ್ಸ್​​ವೆಲ್​ ಅವರನನ್ನು ಕೈ ಬಿಟ್ಟು, ಕನ್ನಡಿಗೆ ವೈಶಾಕ್​ ವಿಜಯ್​ ಕುಮಾರ್​ಗೆ ಅವಕಾಶ ನೀಡುವ ಸಾಧ್ಯತೆ ಇದೆ ಎಂದು ತಿಳಿದು ಬಂದಿದೆ.

Share This Article
Leave a Comment

Leave a Reply

Your email address will not be published. Required fields are marked *

Enable Notifications OK No thanks