ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯಲ್ಲಿ ಟಿಕೆಟ್ ಸಿಗಲಿಲ್ಲ ಎಂಬ ಕಾರಣಕ್ಕೆ ಜಗದೀಶ್ ಶೆಟ್ಟರ್ ಕಾಂಗ್ರೆಸ್ ಸೇರಿದರೂ. ಇಲ್ಲಿಯೂ ಸೋಲು ಕಂಡರು. ಆದರೆ ಕಾಂಗ್ರೆಸ್ ನಲ್ಲಿ ಜಗದೀಶ್ ಶೆಟ್ಟರ್ ಅವರನ್ನು ಗೌರವಯುತವಾಗಿಯೇ ಕಾಣುತ್ತಿದ್ದಾರೆ. ಪ್ರಾಶಸ್ತ್ಯ ನೀಡುತ್ತಿದ್ದಾರೆ. ಇತ್ತಿಚೆಗಷ್ಟೇ ಬಿಜೆಪಿಯ ಒಂದಷ್ಟು ಮಂದಿ ಜಗದೀಶ್ ಶೆಟ್ಟರ್ ನೇತೃತ್ವದಲ್ಲಿಯೇ ಕಾಂಗ್ರೆಸ್ ಕೂಡ ಸೇರಿದ್ದಾರೆ. ಇದರ ನಡುವೆ ಜಗದೀಶ್ ಶೆಟ್ಟರ್ ಕಾಂಗ್ರೆಸ್ ತೊರೆಯುತ್ತಾರೆ ಎಂಬ ಮಾತು ಕೇಳಿ ಬರುತ್ತಾ ಇದೆ.
ಈ ವಿಚಾರ ಹೈಕಮಾಂಡ್ ಗಮನಕ್ಕೂ ಬಂದಿದೆ. ಲೋಕಸಭಾ ಚುನಾವಣೆ ಹತ್ತಿರದಲ್ಲಿಯೇ ಇದೆ. ಹೀಗಾಗಿ ಸಣ್ಣ ಮಿಸ್ಟೇಕ್ ಪಕ್ಷಕ್ಕೆ ದೊಡ್ಡ ಡ್ಯಾಮೇಜ್ ಆಗಲಿದೆ. ಅಲರ್ಟ್ ಆಗಿರುವ ಕಾಂಗ್ರೆಸ್ ನಾಯಕರು, ಶೆಟ್ಟರ್ ಉಳಿಸಿಕೊಳ್ಳಲು ಚಿಂತನೆ ನಡೆಸುತ್ತಿದ್ದಾರೆ. ಜಗದೀಶ್ ಶೆಟ್ಟರ್ ಜೊತೆಗೆ ಲಕ್ಷ್ಮಣ ಸವದಿಗೂ ದೊಡ್ಡ ಜವಬ್ದಾರಿ ಕೊಡಲು ಸಿದ್ಧವಾಗಿದ್ದಾರೆ.
ಈ ಬಾರಿಯ ಲೋಕಸಭ ಚುನಾವಣೆ ಎರಡು ಪಕ್ಷಕ್ಕೂ ಪ್ರತಿಷ್ಠೆಯಾಗಿದೆ. ಯಾಕಂದ್ರೆ ಬಿಜೆಪಿ ಸೋಲಿಸಲು ಇಂಡಿಯಾ ಮೈತ್ರಿಕೂಟ ಒಂದಾಗಿದೆ. ಇತ್ತ ರಾಜ್ಯದಲ್ಲಿ ಕಾಂಗ್ರೆಸ್ ಸೋಲಿಸಲು ಜೆಡಿಎಸ್ ಮತ್ತು ಬಿಜೆಪಿ ಒಂದಾಗಿದೆ. ಹೀಗಾಗಿ ಲೋಕಸಭಾ ಚುನಾವಣೆ ಕಣ ಬಿಸಿಯಾಗಿರುತ್ತದೆ. ಈ ನಿಟ್ಟಿನಲ್ಲಿ ಕಾಂಗ್ರೆಸ್, ಬಿಜೆಪಿಯ ಮತಬ್ಯಾಂಕ್ ಗೆ ಕೈ ಹಾಕಲು ಹೊರಟಿದೆ. ಅಂದ್ರೆ ಲಿಂಗಾಯತ ಪತಗಳನ್ನು ಸೆಳೆಯುವ ಪ್ರಯತ್ನ ಇದಾಗಿದೆ. ಅದಕ್ಕಾಗಿಯೇ ಜಗದೀಶ್ ಶೆಟ್ಟರ್ ಅವರಿಗೆ ಪ್ರಚಾರ ಸಮಿತಿ ಅಧ್ಯಕ್ಷ ಸ್ಥಾನ ನೀಡಲು ಮುಂದಾಗಿದೆ. ಲಕ್ಷ್ಮಣ್ ಸವದಿಗೆ ಕೆಪಿಸಿಸಿ ಕಾರ್ಯಾಧ್ಯಕ್ಷ ಸ್ಥಾನ ನೀಡಲು ಚಿಂತನೆ ನಡೆಸಿದೆ. ಇದಕ್ಕೆ ಇಬ್ಬರ ಸಮ್ಮತಿಯೂ ಸಿಕ್ಕಿದ್ದು, ಈ ಮೂಲಕ ಕಾಂಗ್ರೆಸ್ ಲಿಂಗಾಯತ ಮತ ಸೆಳೆಯುವುದಕ್ಕೆ ಹೊರಟಿದೆ.