ರಾಜ್ಯ ಕಾಂಗ್ರೆಸ್ ಸರ್ಕಾರದಲ್ಲಿ ಸಿಎಂ ಸ್ಥಾನದ ಹುದ್ದೆ ಚರ್ಚೆಯಾಗ್ತಾನೆ ಇದೆ. ನವೆಂಬರ್ ನಲ್ಲಿ ನಡೆಯುವ ಕ್ರಾಂತಿಯಿಂದಾಗಿ ಡಿಸಿಎಂ ಡಿಕೆ ಶಿವಕುಮಾರ್ ಅವರು ಸಿಎಂ ಆಗಲಿದ್ದಾರೆ ಎನ್ನಲಾಗಿದೆ. ಮತ್ತೊಂದು ಹೊಸ ವಿಚಾರ ಏನಂದ್ರೆ ಡಿಕೆ ಶಿವಕುಮಾರ್ ಅವರು ದಿನಾಂಕವನ್ನು ನಿಗದಿ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಒಂದು ಕಡೆ ಸಚಿವ ಸಂಪುಟ ಪುನರ್ ರಚನೆಯ ವಿಚಾರ ಸದ್ದು ಮಾಡ್ತಿದೆ.. ಮತ್ತೊಂದು ಕಡೆ ನವೆಂಬರ್ ಕ್ರಾಂತಿಯಲ್ಲಿ ಏನೆಲ್ಲಾ ವಿಚಾಗಳು ನಡೆಯಬಹುದು ಎಂಬುದು ಚರ್ಚೆಯಾದರೆ, ಇದೀಗ ಸಿಎಂ ಸ್ಥಾನಕ್ಕಾಗಿ ಡೇಟ್ ಲಾಕ್ ಮಾಡಿರುವುದು ಚರ್ಚೆಯಾಗುತ್ತಿದೆ.
ಡಿಸಿಎಂ ಡಿಕೆ ಶಿವಕುಮಾರ್ ಆಪ್ತ ಮೂಲಗಳ ಪ್ರಕಾರ, ಸಿಎಂ ನವೆಂಬರ್ ತಿಂಗಳಿನಲ್ಲಿಯೇ ಆಗಬೇಕು. ಅದರಲ್ಲೂ ನವೆಂಬರ್ 21ರಂದು ಸಿಎಂ ಆಗಲೇಬೇಕು ಎಂದು ಡೆಡ್ ಲೈನ್ ನೀಡಿದ್ದಾರೆ ಎನ್ನಲಾಗಿದೆ. ಅದರಲ್ಲೂ ಈ ವಿಚಾರವನ್ನು ಹೈಕಮಾಂಡ್ ನಾಯಕರ ಬಳಿಗೂ ಸಂದೇಶವನ್ನು ಕಳುಹಿಸಿದ್ದಾರೆ ಎನ್ನಲಾಗಿದೆ. ರಾಹುಲ್ ಗಾಂಧಿ ತನಕವೂ ಈ ವಿಚಾರವನ್ನು ಮುಟ್ಟಿಸಿದ್ದಾರೆ ಎನ್ನಲಾಗಿದೆ.
ಇನ್ನು ಡಿಕೆ ಶಿವಕುಮಾರ್ ಅವರು ದೇವರನ್ನು, ಜ್ಯೋತಿಷ್ಯವನ್ನು ಹೆಚ್ಚಾಗಿ ನಂಬುತ್ತಾರೆ. ಹೀಗಾಗಿ ಜ್ಯೋತಿಷ್ಯರು ಹೇಳಿದಂತೆ ಕೆಲವು ದಿನಾಂಕಗಳನ್ನು ಇಟ್ಟುಕೊಂಡಿದ್ದಾರಂತೆ. ಅದರಲ್ಲೂ ನವೆಂಬರ್ ಮೂರನೇ ವಾರದಲ್ಲಿ ಮೂರು ದಿನಾಂಕಗಳನ್ನು ಇಟ್ಟುಕೊಂಡಿದ್ದಾರೆ ಎನ್ನಲಾಗಿದೆ. ಆ ಮೂರು ದಿನಾಂಕದಲ್ಲಿ ಯಾವ ದಿನಾಂಕದಲ್ಲಾದರೂ ಸಿಎಂ ಪಟ್ಟ ಅಲಂಕರಿಸಬೇಕು ಎಂಬುದನ್ನ ಹೇಳಿದ್ದಾರೆ ಎನ್ನಲಾಗಿದೆ. ನವೆಂಬರ್ ಕ್ರಾಂತಿ ಏನಾಗಬಹುದು, ಯಾವ ಬದಕಾವಣೆಯಾಗಬಹುದು ಎಂಬ ಕುತೂಹಲಕ್ಕೆ ಕೆಲವೇ ವಾರಗಳಲ್ಲಿ ತೆರೆ ಬೀಳಲಿದೆ. ಡಿಸಿಎಂ ಪಟ್ಟದಿಂದ ಸಿಎಂ ಸ್ಥಾನ ಅಲಂಕರಿಸುತ್ತಾರಾ ಎಂಬುದನ್ನು ನೋಡಬೇಕಿದೆ.




