ಡಿಕೆ ಶಿವಕುಮಾರ್ ಬಿಜೆಪಿ ಪಕ್ಷ ಸೇರ್ತಾರಾ..? ಆಗಲೇ ಒಂದು‌ ಕಾಲಿಟ್ಟಾಗಿದೆ ಅಂದಿದ್ಯಾಕೆ ಆ ಶಾಸಕ..?

1 Min Read

ಡಿಕೆ ಶಿವಕುಮಾರ್ ಅವರು ಇತ್ತೀಚೆಗೆ ಆರ್ ಎಸ್ ಎಸ್ ಗೀತೆಯನ್ನ ಹಾಡಿ ತಮ್ಮದೇ ಪಕ್ಷದ ನಾಯಕರ ಕೆಂಗಣ್ಣಿಗೆ ಗುರಿಯಾಗಿದ್ರು. ಇದರ ಬೆನ್ನಲ್ಲೇ ಶಾಸಕರೊಬ್ಬರು ಡಿಕೆಶಿ ಬಗ್ಗೆ ಶಾಕಿಂಗ್ ಹೇಳಿಕೆಯನ್ನ ನೀಡಿದ್ದಾರೆ. ಡಿಕೆ ಶಿವಕುಮಾರ್ ಅವರು, ಬಿಜೆಪಿ ಕಡೆಗೆ ಒಂದು ಕಾಲನ್ನ ಈಗಾಗಲೇ ಇಟ್ಟಿದ್ದಾರೆ ಎಂದಿದ್ದಾರೆ. ಅವರೇ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್.

ಡಿಕೆ ಶಿವಕುಮಾರ್ ನಾಟಕ ಮಾಡ್ತಾ ಇದ್ದಾರೆ. ಅವರು ಈಗಾಗಲೇ ಬಿಜೆಪಿ ಕಡೆಗೆ ಒಂದು ಕಾಲಿಟ್ಟಿದ್ದಾರೆ. ಬಿಜೆಪಿಗೆ ಬರುವ ಬಗ್ಗೆ ಒಂದು ಚರ್ಚೆ ಕೂಡ ಆಗಿದೆ. ಆದರೆ ಅವರ ಹಿಂದೆ ಸಾಕಷ್ಟು ಶಾಸಕರು ಇಲ್ಲ ಎಂಬ ಕಾರಣಕ್ಕೆ ಸುಮ್ಮನಾಗಿದ್ದಾರೆ. ದೆಹಲಿಯಲ್ಲಿ ಡಿಕೆ ಶಿವಕುಮಾರ್ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ನೇತೃತ್ವದಲ್ಲಿ ಚರ್ಚೆಯೂ ನಡೆದಿದೆ. ಡಿಕೆಶಿ ಹಾಗೂ ವಿಜಯೇಂದ್ರ ನೇತೃತ್ವದಲ್ಲಿ 60-70 ಕಾಂಗ್ರೆಸ್ ಶಾಸಕರನ್ನು ಕರೆತರುತ್ತೀವಿ ಎಂಬ ಚರ್ಚೆಯೂ ಆಗಿದೆ ಎಂದಿದ್ದಾರೆ.

ಮುಂದೆ ನಮಸ್ತೆ ಸದಾ ವತ್ಸಲೇ ಹಾಡ್ತೀವಿ ಅಂತ ಹಾಡಿದ್ದಾರಷ್ಟೇ. ನಮಗಿರುವ ಮಾಹಿತಿ‌ಪ್ರಕಾರ ಡಿಕೆ ಶಿವಕುಮಾರ್ ಅವರ ಹಿಂದೆ 13 ಜನ ಶಾಸಕರಿಲ್ಲ.‌ ಎಲ್ಲರು ಸಿದ್ದರಾಮಯ್ಯ ಅವರ ಕಡೆ ಇದ್ದಾರೆ. ನನಗೆ ನಮ್ಮ ಪಕ್ಷದ ಹೈಕಮಾಂಡ್ ನಾಯಕರೊಬ್ಬರು ಇದೇ ವಿಚಾರ ಕೇಳಿದರು. ಅದಕ್ಕೆ ನಾನಿ ಒಂದು ಹತ್ತು ಮಂದಿ ಇರಬಹುದು. ಬಿಜೆಪಿ ಅಂದ್ರೆ ಅವರು ಬರುವುದಿಲ್ಲ ಎಂದೆ. ಅದಕ್ಕೆ ಅವರು ಕೂಡ ಹೌದು ಎಂದರು ಎಂದಿದ್ದಾರೆ.

ಆದರೆ ಡಿಸಿಎಂ ಡಿಕೆ ಶಿವಕುಮಾರ್ ಅವರು ನಾನು ಕಾಂಗ್ರೆಸ್ ನ ನಿಷ್ಠಾವಂತ ನಾಯಕ. ಕಾಂಗ್ರೆಸ್ ಪಕ್ಷಕ್ಕಾಗಿಯೇ ಹುಟ್ಟಿರೋದು. ಇಲ್ಲಿಯೇ ಇರ್ತೀನಿ ಎಂಬ ಮಾತನ್ನ ಹೇಳಿದ್ದರು.

Share This Article
Leave a Comment

Leave a Reply

Your email address will not be published. Required fields are marked *