ಬೆಂಗಳೂರು: ಮೋದಿ ಸಮುದಾಯದ ಬಗ್ಗೆ ರಾಹುಲ್ ಗಾಂಧಿ ಮಾತನಾಡಿದ್ದಕ್ಕೆ ಎರಡು ವರ್ಷ ಜೈಲು ಶಿಕ್ಷೆಯಾಗಿದೆ. ಸಂಸದ ಸ್ಥಾನದಿಂದ ಅನರ್ಹರಾಗಿದ್ದಾರೆ. ಈ ವಿಚಾರದಲ್ಲಿ ರಾಜ್ಯದಲ್ಲೂ ಆಕ್ರೋಶ ಜೋರಾಗಿದೆ. ಮೂಲಗಳ ಪ್ರಕಾರ ಇದೀಗ ಸಿಟಿ ರವಿ ವಿರುದ್ಧ ಡಿಕೆ ಶಿವಕುಮಾರ್ ಮಾನನಷ್ಟ ಮೊಕದ್ದಮೆ ದಾಖಲಿಸಲು ನಿರ್ಧಾರ ಮಾಡಿದ್ದಾರೆ ಎನ್ನಲಾಗಿದೆ.
ಬಿಜೆಪಿ ನಾಯಕರ ವಿರುದ್ಧ ಕಾಂಗ್ರೆಸ್ ನಾಯಕರು ಕಾನೂನು ಸಮರ ಸಾರಲು ಸಿದ್ಧರಾಗಿದ್ದಾರೆ. ದಾವಣಗೆರೆಯಲ್ಲಿ ನಡೆದ ಸಮಾವೇಶದಲ್ಲಿ ಬಿಜೆಪಿಯ ಪ್ರಧಾನ ಕಾರ್ಯದರ್ಶಿ ಸಿಟಿ ರವಿ, ಕಾಂಗ್ರೆಸ್ ವಿರುದ್ಧ ಹರಿಹಾಯ್ದಿದ್ದರು. ಡಿಕೆ ಬ್ರದರ್ಸ್ ಬಗ್ಗೆ ಮಾತನಾಡಿದ್ದರು.
ಕುಕ್ಕರ್ ಬಾಂಬ್ ಇಡುವ ಕೆಲಸವನ್ನು ಡಿಕೆ ಬ್ರದರ್ಸ್ ಮಾಡಿದ್ದರು ಎಂದು ಹೇಳಿದ್ದರು. ಈ ಹೇಳಿಕೆ ಕೇಳಿದ ಡಿಕೆಶಿ ಆಪ್ತರು ಈಗ ಸಲಹೆ ನೀಡಿದ್ದಾರಂತೆ. ಈ ಹೇಳಿಕೆ ಸಂಬಂಧ ಮಾನನಷ್ಟ ಮೊಕದ್ದಮೆ ಹೂಡಲು ಸೂಚಿಸಿದ್ದಾರೆ. ಆಪ್ತರ ಸಲಹೆ ಮೇರೆಗೆ ವಕೀಲರ ಜೊತೆ ಈಗಾಗಲೇ ಮಾತುಕತೆ ನಡೆಸಿದ್ದಾರೆ ಎನ್ನಲಾಗಿದೆ.





GIPHY App Key not set. Please check settings