ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್, ಚಿತ್ರದುರ್ಗ
2026-27ನೇ ಸಾಲಿನ ದಾಖಲಾತಿಗಳು ಪ್ರಾರಂಭ! (ಪ್ಲೇ ಗ್ರೂಪ್‌ನಿಂದ 12ನೇ ತರಗತಿವರೆಗೆ)
2026-27ನೇ ಸಾಲಿನ ದಾಖಲಾತಿಗಳು ಪ್ರಾರಂಭ! (ಪ್ಲೇ ಗ್ರೂಪ್‌ನಿಂದ 12ನೇ ತರಗತಿವರೆಗೆ)
ಲಕ್ಷಾಂತರ ಅಭಿಮಾನಿಗಳ ಆಸೆ ಇದು. ಕಿಚ್ಚ – ದಚ್ಚು ಆದಷ್ಟು ಬೇಗ ಸರಿಯಾಗಲಿ ಎಂಬುದು. ಅದಕ್ಕೆ ತಕ್ಕಂತೆ ಇತ್ತಿಚೆಗೆ ಒಂದು ಬೆಳವಣಿಗೆಯೂ ನಡೆದಿತ್ತು. ಸುಮಲತಾ ಅವರ ಹುಟ್ಟುಹಬ್ಬಕ್ಕೆ ಜೊತೆಯಾಗಿ ಒಂದೇ ವೇದಿಕೆ ಹಂಚಿಕೊಂಡಿದ್ದರು. ಅಂದಿನಿಂದ ಇಬ್ಬರು ಒಂದಾಗುತ್ತಾರೆ ಎಂಬ ನಿರೀಕ್ಷೆಯೂ ಎಲ್ಲರಲ್ಲೂ ಹುಟ್ಟಿತ್ತು. ಇಂದು ಹುಟ್ಟುಹಬ್ಬದ ಸಂಭ್ರಮದಲ್ಲಿ ಅದಕ್ಕೊಂದು ಕ್ಲಾರಿಟಿ ಕೊಟ್ಟಿದ್ದಾರೆ ಕಿಚ್ಚ ಸುದೀಪ್.
ನಿನ್ನೆ ರಾತ್ರಿಯಿಂದ ಕಿಚ್ಚ ಸುದೀಪ್ ತನ್ನ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ. ಇಂದು ಜೆಪಿ ನಗರದ ನಿವಾಸದಲ್ಲಿ ಮಾತನಾಡಿದ್ದು, ದರ್ಶನ್ ಮತ್ತು ಮಾಧ್ಯಮದವರ ನಡುವೆ ಎಲ್ಲವೂ ಸರಿಯಾಗಿದ್ದು ಖಂಡಿತ ಖುಷಿ ಆಯ್ತು. ಸಿನಿಮಾ ಸೋಲು, ಗೆಲುವಿನ ಬಗ್ಗೆ ಚರ್ಚೆಯಾಗಬೇಕು. ಆದರೆ ಆ ರೀತಿಯಾದಂತ ಬೆಳವಣಿಗೆ ನಡೆಯಬಾರದು. ಈಗ ದರ್ಶನ್ ಹಾಗೂ ನಿಮ್ಮ ನಡುವೆ ಎಲ್ಲವೂ ಸರಿಯಾಗಿದ್ದು ಖುಷಿ ತಂದಿದೆ.
ಸುಮಲತಾ ಅವರ ಬರ್ತ್ ಡೇ ಪಾರ್ಟಿಯಲ್ಲಿ ಸೇರಿದ್ದಕ್ಕೆ ನೀವೆಲ್ಲಾ ಎಲ್ಲಾ ಸರಿ ಆಗುತ್ತೆ ಎಂದೇ ಸುದ್ದಿ ಮಾಡಿದ್ರಿ. ನಾನು ಹಾಗೆಲ್ಲಾ ಎಲ್ಲೂ ಹೋಗಲ್ಲ. ಆದ್ರೆ ಸುಮಲತಾ ಅವರು 60ನೇ ವರ್ಷದ ಹುಟ್ಟುಹಬ್ಬ. ಅದೊಂದು ಸ್ಪೆಷಲ್. ನಂಗೂ ಗೊತ್ತಿತ್ತು ದರ್ಶನ್ ಅಲ್ಲಿ ಇರ್ತಾರೆ ಅಂತ. ಅವರು ಒಬ್ಬ ನಟ. ಗೌರವಿಸುತ್ತೇನೆ. ಆದ್ರೆ ಎಲ್ಲವೂ ಮೊದಲಿನಂತೆ ಆಗೋದಕ್ಕೆ ಸ್ವಲ್ಪ ಸಮಯ ಬೇಕು. ನನ್ನಲ್ಲೂ ಒಂದಷ್ಟು ಪ್ರಶ್ನೆಗಳಿವೆ. ಅವರಲ್ಲಿಯೂ ಒಂದಷ್ಟು ಪ್ರಶ್ನೆಗಳಿವೆ. ಅದಕ್ಕೆಲ್ಲ ಉತ್ತರ ಸಿಗಬೇಕು ಅಲ್ವಾ ಎಂದಿದ್ದಾರೆ.


ನಿಮ್ಮ ಊರಿನ ಅದ್ಧೂರಿ ಜಾತ್ರೆ, ವಿಶೇಷ ಆಚರಣೆಗಳು, ಅಥವಾ ನಿಮ್ಮ ಗಮನಕ್ಕೆ ಬಂದ ಸ್ಥಳೀಯ ಸಮಸ್ಯೆಗಳೇ? ಚಿತ್ರದುರ್ಗ ಹಾಗೂ ಸುತ್ತಮುತ್ತಲಿನ ಯಾವುದೇ ಸುದ್ದಿಯಾದರೂ ನಮಗೆ ತಿಳಿಸಿ. ನಿಮ್ಮ ಧ್ವನಿಯಾಗಿ ನಾವು ನಾಡಿಗೆ ತಲುಪಿಸುತ್ತೇವೆ. ಛಾಯಾಚಿತ್ರ ಮತ್ತು ವಿವರಗಳೊಂದಿಗೆ ನಮಗೆ ಇಮೇಲ್ ಮಾಡಿ.
✉️ suddionenews@gmail.com🛡️ ನಿಮ್ಮ ಮಾಹಿತಿಯನ್ನು ಗೌಪ್ಯವಾಗಿಡಲಾಗುವುದು.






ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್