ವ್ಯಾಲೆಂಟೈನ್ಸ್ ಡೇ ಅಂತ ಜೋಡಿ ತಿರುಗಾಡಿದ್ರೆ ಕಾಲು ಮುರಿಯುತ್ತೇವೆ : ಶಿವಸೇನೆ

suddionenews
1 Min Read

ಇಂದು ಪ್ರೇಮಿಗಳ ದಿನ. ಎಲ್ಲೆಡೆ ಪ್ರೇಮಿಗಳು ಈ ದಿನವನ್ನ ಸಂಭ್ರಮದಿಂದ ಆಚರಿಸುತ್ತಾರೆ. ತಮ್ಮ ಪ್ರೇಮಿಗಳಿಗೆ ಇಷ್ಟವಾದ ಗಿಫ್ಟ್ ಕೊಟ್ಟು, ಪ್ರೀತಿಯ ದಿನವನ್ನ ಸೆಲೆಬ್ರೇಟ್ ಮಾಡ್ತಾರೆ. ಆದ್ರೆ ಈ ದಿನವನ್ನ ಆಚರಿಸಿದ್ರೆ ಕಾಲು ಮುರಿಯೋದಾಗಿ ಶಿವಸೇನೆ ಕಾರ್ಯಕರ್ತರು ಹೇಳಿದ್ದಾರೆ.

ವ್ಯಾಲೆಂಟೈನ್ಸ್ ಡೇ ಎಂದು ಯಾವುದೇ ಜೋಡಿ ಕೈ ಕೈ ಹಿಡಿದು ತಿರುಗಾಡಿದ್ರೆ ಅವರ ಕಾಲು ಮುರಿಯುತ್ತೇವೆ ಎಂದು ಎಚ್ಚರಿಕೆ ನೀಡುವುದರ ಜೊತೆಗೆ ಲಾಠಿ ಹಿಡಿದು ಓಡಾಡುತ್ತಿದ್ದಾರೆ. ಮಧ್ಯಪ್ರದೇಶದ ಬೋಪಾಲ್ ನಲ್ಲಿ ಈ ರೀತಿ ಎಚ್ಚರಿಕೆ ನೀಡಿದ್ದಾರೆ.

ಇನ್ನು ಈ ವಿಚಾರವಾಗಿ ಪೊಲೀಸರು ಎಚ್ಚರಿಕೆ ನೀಡಿದ್ದಾರೆ. ಯಾವುದೆರ ರೀತಿಯ ಬೆದರಿಕೆ ಹಾಕದಂತೆ ಶಿವಸೇನೆ ಕಾರ್ಯಕರ್ತರಿಗೆ ಪೊಲೀಸರು ಎಚ್ಚರಿಕೆ ನೀಡಿದ್ದಾರೆ. ಇನ್ನು ಪ್ರೇಮಿಗಳ ದಿನದಂದು ಕಿರುಕುಳ ನೀಡುವವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುವುದಾಗಿ ಎಚ್ಚರಿಕೆ ನೀಡಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *