Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ आध्यात्मिक अन्य

---Advertisement---

ಭರತ್ ರೆಡ್ಡಿ‌ಆಪ್ತ ಸತೀಶ್ ರೆಡ್ಡಿಯನ್ನ ಯಾಕೆ ಅರೆಸ್ಟ್ ಮಾಡ್ಲಿಲ್ಲ : ಹೆಚ್ಡಿಕೆ ಪ್ರಶ್ನೆ

---Advertisement---

ಬೆಂಗಳೂರು: ಬಳ್ಳಾರಿಯಲ್ಲಿ ನಡೆದ ಬ್ಯಾನರ್ ಗಲಾಟೆಗೆ ಸಂಬಂಧಿಸಿದಂತೆ ಕೇಂದ್ರ ಸಚಿವ ಕುಮಾರಸ್ವಾಮಿ ಇಂದು ಸುದ್ದಿಗೋಷ್ಟಿ ನಡೆಸಿ ಒಂದಷ್ಟು ಪ್ರಶ್ನೆಗಳನ್ನ ಕೇಳಿದ್ದಾರೆ. ಈ ಗಲಾಟೆ ಸಂಬಂಧ ಭರತ್ ರೆಡ್ಡಿ ಆಪ್ತ ಸತೀಶ್ ರೆಡ್ಡಿಯನ್ನ ಯಾಕೆ ಅರೆಸ್ಟ್ ಮಾಡಿಲ್ಲ ಎಂದಿದ್ದಾರೆ.

ಈ ಘಟನೆ ಪ್ರಾರಂಭವಾದಾಗ ಕ್ಷಣ ಕ್ಷಣದ ಮಾಹಿತಿಯನ್ನ ಮಾಧ್ಯಮದವರೇ ಇಟ್ಟಿದ್ದಾರೆ. ಅದನ್ನ ಜನಾರ್ದನ ರೆಡ್ಡಿ ಅವರಾಗಲಿ, ನಾನಾಗಲಿ ತಂದು ತೋರಿಸುವ ಅಗತ್ಯವಿಲ್ಲ. ಏಳು ಬಾರಿಯೋ ಎಂಟು ಬಾರಿಯೋ ಗುಂಡನ್ನ ಹಾರಿಸಲಾಗಿದೆ. ಅದಕ್ಕೆ ಹೇಳಿದ್ದು, ಈ ಸರ್ಕಾರ ಬದುಕಿದೆಯೋ ಸತ್ತಿದೆಯೋ ಅಂತ. ಸಿದ್ದರಾಮಯ್ಯ ಅವರೇ ದೇವರಾಜ್ ಅರಸು ಅವರ ಆಡಳಿತ ನಡೆಸಿದಂತ ದಿನಗಳ ದಾಖಲೆಗಳನ್ನ ಮುರಿದು, ಕರ್ನಾಟಕ ರಾಜ್ಯದಲ್ಲಿ ಅತ್ಯಂತ ಅವಧಿಯ ಮುಖ್ಯಮಂತ್ರಿ. ಮಣ್ ಉಯ್ಕಬೇಕು. ಈ ದಾಖಲೆ ನಿರ್ಮಾಣ ಮಾಡಿಕೊಂಡು. ಇತಿಹಾಸದಲ್ಲಿ ಬರೆಯುವುದು ನಿಮ್ಮ ಈ ದಾಖಲೆ ಅಲ್ಲ. ನಿಮ್ಮ ಈ ಅವಧಿಯಲ್ಲಿ ಯಾವ್ಯಾವ ರೀತಿ ನಡೆದುಕೊಂಡಿದ್ದೀರಿ. ಯಾವ ರೀತಿ ಜನತೆಯ ರಕ್ಷಣೆ ಮಾಡಿದ್ದೀರಿ. ನಿಮ್ಮ ಆಡಳಿತದ ವೈಖರಿ ಏನಿತ್ತು ಎಂಬುದನ್ನ ಮುಂದೆ ಇತಿಹಾಸಕಾರ ಬರೀತಾನೆ ಎಂದಿದ್ದಾರೆ.

ಗಾಳಿಯಲ್ಲಿ ಗುಂಡು ಹಾರಿಸಿದಾಗ ಯಡವಟ್ಟು. ಮುಖ್ಯಮಂತ್ರಿಗಳ ಹೇಳಿಕೆ. ಸತೀಶ್ ರೆಡ್ಡಿ ಅವರು ಗುಂಡು ಹಾರಿಸಲು ಹೋಗಿ ರಾಜಶೇಖರ್ ಗೆ ತಗುಲಿದೆ ಎಂದು ಮುಖ್ಯಮಂತ್ರಿಗಳು ಹೇಳಿದರು. ಮಿಸ್ಟರ್ ಹೋಂ ಮಿನಿಸ್ಟರ್ ಏನಾಗಿದೆ ಇದರ ತನಿಖೆ. ನಿಮ್ಮ ಮುಖ್ಯಮಂತ್ರಿಗಳೇ ಇಲ್ಲಿ ಹೇಳಿದ್ದಾರೆ. ಗುಂಡು ಎಲ್ಲಿಂದ ಬಂತು ಅಂತ. ಸತೀಶ್ ರೆಡ್ಡಿಯನ್ನ ಅರೆಸ್ಟ್ ಮಾಡಿದ್ರಾ..? ಘನಂಧಾರಿ ಕೆಲಸ ಮಾಡಿದ್ದಾರೆ ಅಂತ ರಾಜಾತಿಥ್ಯ ಕೊಟ್ಟು ಆಸ್ಪತ್ರೆಗೆ ಕರೆದುಕೊಂಡು ಬಂದು ಇಟ್ಟುಕೊಂಡಿದ್ದಾರಂತೆ ಎಂದು ಆಕ್ರೋಶ ಹೊರ ಹಾಕಿದ್ದಾರೆ.

Join WhatsApp

Join Now

Join Telegram

Join Now