ತುಮಕೂರು: ಕಾಂಗ್ರೆಸ್ ಸರ್ಕಾರದಲ್ಲಿ ಮೊದಲೇ ಕುರ್ಚಿ ಕದನ ಜೋರಾಗಿದೆ. ಡಿಸಿಎಂ ಡಿಕೆ ಶಿವಕುಮಾರ್ ಸಿಎಂ ಸ್ಥಾನಕ್ಕಾಗಿ ತಾಳ್ಮೆಯಿಂದ ಕಾಯುತ್ತಾ ಇದ್ದಾರೆ. ಒಪ್ಪಂದ ಆಗಿರುವುದು ಏನು ಅನ್ನೋದು ನಮಗೆ ಮಾತ್ರ ಗೊತ್ತು ಎಂಬ ವಿಚಾರವನ್ನು ಹಲವು ಬಾರಿ ಡಿಸಿಎಂ ಹೇಳಿದ್ದಾರೆ. ಇದರ ಬೆನ್ನಲ್ಲೇ ದಲಿತ ಸಿಎಂ ವಿಚಾರವೂ ಸಾಕಷ್ಟು ಚರ್ಚೆಗೆ ಬರ್ತಾ ಇರುತ್ತೆ. ಇಂದು ಮಾತ್ರವಲ್ಲ ದಲಿತ ಸಿಎಂ ವಿಚಾರ ಬೂದಿ ಮುಚ್ಚಿದ ಕೆಂಡದಂತೆ ಇದೆ. ಆಗಾಗ ಹೊಗೆಯಾಡುತ್ತಲೆ ಇರುತ್ತದೆ.
ಇದೀಗ ದಲಿತ ಸಿಎಂ ವಿಚಾರವನ್ನ ಕೆಎನ್ ರಾಜಣ್ಣ ತೆಗೆದಿದ್ದಾರೆ. ಈ ವಿಚಾರಗಳಲ್ಲಿ ವಾಸ್ತವಾಂಶ ಹೇಳಿದರೆ ಬಹಳ ಜನರಿಗೆ ಹಿಡಿಸುವುದಿಲ್ಲ. ಯಾಕಾಗ ಬಾರದು ದಲಿತ ಸಿಎಂ, ಮೈನಾರಿಟೀಸ್ ಯಾಕಾಗಬಾರದು, ಅಥವಾ ವಾಲ್ಮೀಕಿ ಸಮುದಾಯದವರು ಯಾಕಾಗಬಾರದು. ಕಾಂಗ್ರೆಸ್ ಪಕ್ಷ ಯಾವತ್ತಿದ್ದರೂ ಎಲ್ಲಾ ಸಮುದಾಯದವರಿಗೂ ನ್ಯಾಯ ಕೊಡುವಂತದ್ದು. ನಾನು ಕಾಂಗ್ರೆಸ್ ನಲ್ಲಿರುವ ಕೆಲವರಿಗೆ ಬೈತೀನಿ ಅದು ಬೇರೆ ವಿಚಾರ. ಆದ್ರೆ ಆ ವಿಚಾರಕ್ಕೆ ಅಸಮಾಧಾನವಿದೆ ಅಷ್ಟೇ.
ದೇವರಾಜ್ ಅರಸು ಅವರು 70ರವರೆಗೆ ಎಂಎಲ್ಎನೇ ಇರಲಿಲ್ಲ. ಅವರು ಮುಖ್ಯಮಂತ್ರಿ ಮಾಡ್ತಾರೆ. ಯಾಕಂದ್ರೆ ಎಂಎಲ್ಎ ಗಳ ಅವರ ಬಗ್ಗೆ ಹೆಚ್ಚಿನ ಒಲವು ತೋರಿಸಿದ್ದಕ್ಕೆ ಅವರನ್ನ ಮುಖ್ಯಮಂತ್ರಿ ಮಾಡಿದ್ರು. ದೇವರಾಜ್ ಅರಸು ಇನ್ನೊಬ್ಬ ಅರಸು ಜಾತಿಯವನು ಇರಲಿಲ್ಲ ವಿರೋಧ ಮಾಡುವುದಕ್ಕೆ. ವೀರಪ್ಪ ಮೊಯ್ಲಿಗೆ ಅವರ ಸಮುದಾಯದವನು ಇನ್ನೊಬ್ಬ ಇಲ್ಲ. ಧರ್ಮಸಿಂಗ್ ಅವರಿಗೂ ಅವರ ಜಾತಿಯ ಇನ್ನೊಬ್ಬ ಇಲ್ಲ. ಹೀಗೆ ಕಾಂಗ್ರೆಸ್ ಪಕ್ಷ ಎಲ್ಲರಿಗೂ ಅವಕಾಶ ನೀಡುತ್ತದೆ. ಕುರುಬರು ಎಷ್ಟಿದ್ದಾರೋ ವಾಲ್ಮೀಕಿ ಸಮುದಾಯದವರು ಅಷ್ಟೇ ಇದ್ದಾರೆ. ಎಲ್ಲಾ ಸಮುದಾಯದವರಿಗೂ ಅವಕಾಶ ಕೊಟ್ಟಾಗ ಆ ಸಮುದಾಯದವರು ಕಾಂಗ್ರೆಸ್ ಪಕ್ಷದ ಮೇಲೆ ಒಲವು, ಪ್ರೀತಿ ಕೊಡ್ತಾರೆ ಎಂದಿದ್ದಾರೆ.




