ಕನ್ನಡಿಗರೇಕೆ ಕೊಡಬೇಕು ಕಪ್ಪ? : ಕಾಂಗ್ರೆಸ್ ವಿರುದ್ಧ ಬಿಜೆಪಿ ಗರಂ

suddionenews
1 Min Read

ಬೆಂಗಳೂರು: “ಕನ್ನಡಿಗರ ತೆರಿಗೆ ರಾಹುಲ್‌ ಗಾಂಧಿ ಹಕ್ಕು” ಕಾಂಗ್ರೆಸ್ ಗುಲಾಮಿ ಮನಸ್ಥಿತಿಯ ಸದಸ್ಯರೇ, “ಧೈರ್ಯವಾಗಿ ನಕಲಿ ಗಾಂಧಿಗಳನ್ನು ಪ್ರಶ್ನಿಸಿ” ಕನ್ನಡಿಗರೇಕೆ ಕೊಡಬೇಕು ಕಪ್ಪ? ಎಂದು ಪ್ರಶ್ನೆ ಮಾಡಿದ್ದಾರೆ.

ಕಣ್ಣಿಗೆ ಕಂಡಿದ್ದು ಕೇರಳದ ವಯನಾಡಿಗೆ ಕೊಟ್ಟ ₹15 ಲಕ್ಷ! ಕಣ್ಣಿಗೆ ಕಾಣದ‌ ಕನ್ನಡಿಗರ ಮೂಟೆ ಮೂಟೆ ಹಣ ಹೋಗುತ್ತಿರುವುದು ದೆಹಲಿಯ 10 ಜನಪಥ್ ಮನೆಗೆ! ಮಜವಾದಿ ಸಿದ್ದರಾಮಯ್ಯ ಅವರ #ATMSarkara ಲೂಟಿ ಹೊಡೆದು ಮೂಟೆಗಳಲ್ಲಿ ಕನ್ನಡಿಗರ ತೆರಿಗೆ ಹಣವನ್ನು ಸಾಗಿಸಿ, ಖಜಾನೆ ಖಾಲಿ ಎನ್ನುತ್ತಿದೆ ನಾಡ ದ್ರೋಹಿ ಸರ್ಕಾರ!

ರಾಜ್ಯದಲ್ಲಿ ಕಾಂಗ್ರೆಸ್ ಅನ್ನು ಅಧಿಕಾರಕ್ಕೆ ತಂದಿದ್ದು ಕನ್ನಡಿಗರೇ ಆದರೂ, ಆಡಳಿತ ನಡೆಸುತ್ತಿರುವವರು ಮಾತ್ರ ಕೇರಳದ ಕಾಂಗ್ರೆಸ್ಸಿಗರು, ನಕಲಿ ಗಾಂಧಿಗಳು! ಮಾಜಿ ಅನರ್ಹ ಸಂಸದ ರಾಹುಲ್ ಗಾಂಧಿ ಸಾಹೇಬರನ್ನು ಮೆಚ್ಚಿಸಿ ತಮ್ಮ ಕುರ್ಚಿ ಭದ್ರ ಮಾಡಿಕೊಳ್ಳಲು ಈಗ ಕನ್ನಡಿಗರ ತೆರಿಗೆ ಹಣವನ್ನು ಕೇರಳದ ವಯನಾಡಿನಲ್ಲಿ ಆನೆ ತುಳಿತಕ್ಕೆ ಒಳಗಾದವರಿಗೆ ಕೊಡಲು ಮಜಾವಾದಿ ಸಿದ್ದರಾಮಯ್ಯ ಖರ್ಚು ಮಾಡುತ್ತಿದ್ದಾರೆ.

ಕೇರಳ ಸರ್ಕಾರ ನಂದಿನಿ ಹಾಲು ಮಾರಾಟಕ್ಕೆ ಅವಕಾಶ ಕೊಟ್ಟಿಲ್ಲ, ಕೆಎಸ್‌ಆರ್‌ಟಿಸಿ ಹೆಸರನ್ನೂ ಕಿತ್ತುಕೊಳ್ಳಲು ಪ್ರಯತ್ನಿಸಿತ್ತು. ಹೀಗಿದ್ದರೂ ಕನ್ನಡಿಗರ ತೆರಿಗೆ ಹಣ ಕೇರಳಕ್ಕೆ ಕೊಡಲು ಹೊರಟಿದೆ ಈ ನಾಡ ವಿರೋಧಿ ಕಾಂಗ್ರೆಸ್ ಸರ್ಕಾರ. ರಾಹುಲ್‌ ಗಾಂಧಿಯವರ ಕ್ಷೇತ್ರ ವಯನಾಡಿನ ಮೇಲೆ ಕರ್ನಾಟಕ ಸರ್ಕಾರಕ್ಕೆ ಅಷ್ಟೊಂದು ಕಾಳಜಿ ಇದ್ದರೆ, ಕೆಪಿಸಿಸಿ ಕಚೇರಿಯಿಂದ ಬೌನ್ಸ್‌ ಆಗದ ಚೆಕ್ ಕೊಡಬಹುದಿತ್ತು. ಇಲ್ಲ ಡಿ. ಕೆ. ಶಿವಕುಮಾರ್‌ ಅವರ ಅಕ್ರಮ ಹಣವನ್ನಾದರೂ ಕೊಡಬಹುದಿತ್ತು. ವರ್ಗಾವಣೆ ದಂಧೆಯ ಕಮಾಯಿಯಲ್ಲಿ ಸ್ವತಃ ಸಿದ್ದರಾಮಯ್ಯನವರೇ ದಾನ ಮಾಡಬಹುದಿತ್ತು.

 

ಕರ್ನಾಟಕದಲ್ಲಿ ಬರಗಾಲ ಬಂದು ನೂರಾರು ರೈತರು ಆತ್ಮಹತ್ಯೆ ಮಾಡಿಕೊಂಡರೂ ನಯಾ ಪೈಸೆ ಹಣವನ್ನು ಸಹ ಕೊಡಲು ಯೋಗ್ಯತೆ ಇಲ್ಲದ ಈ ನಾಚಿಕೆಗೇಡಿ ಸರ್ಕಾರ ಈಗ ರಾಹುಲ್ ಗಾಂಧಿ ಅವರನ್ನು ಖುಷಿ ಪಡಿಸಲು ಕರ್ನಾಟಕದ ತೆರಿಗೆದಾರರ ಹಣ ಲೂಟಿ ಹೊಡೆಯುತ್ತಿದೆ ಎಂದು ಟ್ವೀಟ್ ಮಾಡಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *