ಯಡಿಯೂರಪ್ಪ ಅವರನ್ನು ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಭೇಟಿಯಾಗಿದ್ದೇಕೆ..?

1 Min Read

 

ಬೆಂಗಳೂರು: ಬಿಎಸ್ ವೈ ಭೇಟಿ ಬಳಿಕ ಲಕ್ಷ್ಮಿ ಹೆಬ್ಬಾಳ್ಕರ್ ಪ್ರತಿಕ್ರಿಯೆ ನೀಡಿದ್ದು, ಇದರಲ್ಲಿ ಯಾವುದೇ ಕುತೂಹಲವಿಲ್ಲ ಎಂದಿದ್ದಾರೆ. ಬೆಂಗಳೂರಿಗೆ ಬಂದಾಗ ಸಹಜವಾಗಿ ಭೇಟಿಯಾಗುತ್ತೇನೆ. ಯಡಿಯೂರಪ್ಪನವರು ಹಿರಿಯರು ಹಾಗೂ ಸಮಾಜದ ಮುಖಂಡರು. ಅವರ ಅರ್ಶಿವಾದ ಪಡೆಯುವ ನಿಟ್ಟಿನಲ್ಲಿ ಭೇಟಿಯಾಗಿದ್ದೇನೆ. ಇದೊಂದು ಸೌಹಾರ್ದಯುತವಾದ ಭೇಟಿ ಕೆಲವೊಂದು ವಿಚಾರದ ಬಗ್ಗೆ ಅವರೊಂದಿಗೆ ಚರ್ಚಿಸಿ ಮಾರ್ಗದರ್ಶನ ಪಡೆದುಕೊಂಡಿದ್ದೇನೆ ಎಂದಿದ್ದಾರೆ.

ಸಮುದಾಯದ ಅಥಾವ ರಾಜಕೀಯದ ಬಗ್ಗೆ ಚರ್ಚೆ ನಾ ಎಂಬ ಪ್ರಶ್ನೆಗೆ ಉತ್ತರಿಸಿ, ಎರಡು ವಿಚಾರದ ಬಗ್ಗೆ ಚರ್ಚೆ ಮಾಡಿದ್ದೇನೆ. ಅವರು ಸಮುದಾಯದ ಮುಖಂಡರು ಅವರಿಗೆ ಗೌರವ ಕೊಡುತ್ತಾ ಬಂದಿದ್ದೇನೆ ಎಂದಿದ್ದಾರೆ.

ಸಮುದಾಯದಕ್ಕೆ 2ಎ ಮೀಸಲಾತಿ ವಿಚಾರವಾಗಿ ಮಾತನಾಡಿ, ತಾಂತ್ರಿಕ ಕಾರಣದಿಂದ ಮೀಸಲಾತಿ ವಿಳಂಬವಾಗ್ತಿದೆ. ಈ ಅವಧಿಯಲ್ಲಿ ಮೀಸಲಾತಿ ಸಿಗುವ ಭರವಸೆ ಇದೆ. ಸಿಎಂ ಬೊಮ್ಮಾಯಿ‌ ಸಹ ಬರವಸೆ ನೀಡಿದ್ದಾರೆ. ಬೇರೆ ಸಮುದಾಯಕ್ಕೆ ಮೀಸಲಾತಿ ತೊಂದರೆ ಆಗದಂತೆ ನಮ್ಮ ಸಮುದಾಯಕ್ಕೆ ಮೀಸಲಾತಿ ಸಿಗುವ ವಿಶ್ವಾಸ. ರಾಜಕೀಯವಾಗಿ ನಮ್ಮ ಮತ್ತು ಯಡಿಯೂರಪ್ಪನವರ ವಿಚಾರಧಾರೆ ಬೇರೆ ಇರಬಹುದು. ಇದು ವೈಯಕ್ತಿಕವಾಗಿ ಬೇರೆ. ಇದರಲ್ಲಿ ಆಡಳಿತ ಮತ್ತು ವಿಪಕ್ಷ ಅಂತ ಬರೋದಿಲ್ಲ. ಕೆಲವೊಂದು ವಿಚಾರದಲ್ಲಿ ಯಡಿಯೂರಪ್ಪನವ ಮಾರ್ಗದರ್ಶನ ತೆಗೆದುಕೊಳ್ಳುತ್ತೇವೆ ಎಂದಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *