ಫೆಬ್ರವರಿ 14 ರಂದೇ ಏಕೆ ವ್ಯಾಲೆಂಟೈನ್ಸ್ ಡೇ ಆಚರಿಸಲಾಗುತ್ತದೇ?

1 Min Read

ಪ್ರೇಮಿಗಳ ದಿನದ ಆಚರಣೆ ಯಾವಾಗ ಪ್ರಾರಂಭವಾಯಿತು? ಫೆಬ್ರವರಿ 14 ರಂದು ಪ್ರೇಮಿಗಳ ದಿನವನ್ನು ಏಕೆ ಆಚರಿಸಲಾಗುತ್ತದೆ? ಇದರ ಹಿನ್ನೆಲೆ ಏನು? ಇಲ್ಲಿದೆ ಪ್ರೇಮಿಗಳ ದಿನದ ಇತಿಹಾಸ.ಇಂದು ನಾವು ಫೆಬ್ರವರಿ 14 ರಂದು ಪ್ರೇಮಿಗಳ ದಿನವನ್ನು ಸಂತೋಷದಿಂದ ಆಚರಿಸುತ್ತೇವೆ. ಆದರೆ ಇದರ ಹಿಂದೆ ಕಣ್ಣೀರಿನ ಕರಾಳ ಕಥೆಯಿದೆ.

ಮೂರನೇ ಶತಮಾನದಲ್ಲಿ, ರೋಮನ್ ಚಕ್ರವರ್ತಿಗಳ ಆಳ್ವಿಕೆಯಲ್ಲಿ ಪ್ರೇಮಿಗಳ ದಿನ ಆರಂಭವಾಯಿತು. ಆ ಕಾಲದಲ್ಲಿ ವಾಸಿಸುತ್ತಿದ್ದ ಸಂತ ವ್ಯಾಲೆಂಟೈನ್ ಎಂಬ ಪಾದ್ರಿಯ ಮರಣದ ಸ್ಮರಣಾರ್ಥ ಪ್ರೇಮಿಗಳ ದಿನವು ಆರಂಭವಾಯಿತು. ರೋಮ್‌ನಲ್ಲಿ ಆಳ್ವಿಕೆ ನಡೆಸುತ್ತಿದ್ದ ಚಕ್ರವರ್ತಿ ಕ್ಲಾಡಿಯಸ್, ಸೈನಿಕರು ಮದುವೆಯಾದರೆ ಅವರ ಹೋರಾಟ ಮಾಡಲು ಸಮಸ್ಯೆಯಾಗುತ್ತದೆ ಎಂಬ ಕಾರಣಕ್ಕೆ ವಿವಾಹಗಳನ್ನು ನಿಷೇಧಿಸಿದನು. ಈಗಾಗಲೇ ನಿಶ್ಚಯಿಸಿದ ವಿವಾಹಗಳನ್ನು ಸಹ ರದ್ದುಗೊಳಿಸಬೇಕೆಂದು ಕಟ್ಟುನಿಟ್ಟಿನ ಆದೇಶ ನೀಡಿದನು‌

ಈ ಕಾನೂನು ಜನರಲ್ಲಿ ತೀವ್ರ ಗೊಂದಲವನ್ನುಂಟುಮಾಡಿತು. ಆದರೆ ಸಂತ ವ್ಯಾಲೆಂಟೈನ್, ಸರ್ಕಾರದ ಆದೇಶಗಳನ್ನು ಧಿಕ್ಕರಿಸಿ, ಪ್ರೇಮಿಗಳಿಗೆ ರಹಸ್ಯವಾಗಿ ವಿವಾಹಗಳನ್ನು ಮಾಡಿಸಿದನು. ಇದು ರಾಜನ ಗಮನಕ್ಕೆ ಬಂದಾಗ, ವ್ಯಾಲೆಂಟೈನ್ ನನ್ನು ಬಂಧಿಸಿ ಜೈಲಿನಲ್ಲಿರಿಸಲಾಯಿತು. ಜೈಲಿನಲ್ಲಿದ್ದಾಗ ವ್ಯಾಲೆಂಟೈನ್ ಜೈಲರ್‌ನ  ಮಗಳ ಸ್ನೇಹ ಬೆಳೆಸಿದನು.ಅವಳು ಕುರುಡಿಯಾಗಿದ್ದಳು. ನಂತರದಲ್ಲಿ, ಆ ಸ್ನೇಹ ಪ್ರೀತಿಯಾಗಿ ಬದಲಾಯಿತು ಎಂಬ ಕಥೆಯಿದೆ. ಜೂಲಿಯಾ ಎಂದು ಕರೆಯಲ್ಪಡುವ ಹುಡುಗಿಯ ಮೇಲಿನ ಪ್ರೀತಿಯಿಂದ, ವ್ಯಾಲೆಂಟೈನ್ ಅವಳಿಗೆ ಕಣ್ಣು ಕಾಣುವಂತಾಗಲಿ ಎಂದು ದೇವರನ್ನು ಪ್ರಾರ್ಥಿಸಿದನು. ಇದರ ಪರಿಣಾಮವಾಗಿ, ಹುಡುಗಿಯ ದೃಷ್ಟಿ ಮರಳಿ ಬಂದಿತು ಎಂದು ಹೇಳಲಾಗುತ್ತದೆ.

ನಂತರ ವ್ಯಾಲೆಂಟೈನ್  ಮರಣದಂಡನೆಯ ದಿನದಂದು ವ್ಯಾಲೆಂಟೈನ್ ತನ್ನ ಪ್ರಿಯತಮೆಗೆ  ಪತ್ರವನ್ನು ಬರೆದು ಕಳುಹಿಸಿದನು. ಇದರಿಂದ ಪ್ರೇಮ ಪತ್ರಗಳನ್ನು ಬರೆಯುವ ಪದ್ಧತಿ ಪ್ರಾರಂಭವಾಯಿತು ಎನ್ನಲಾಗುತ್ತದೆ. ಬಳಿಕ ಸಂತ ವ್ಯಾಲೆಂಟೈನ್ ಅವರನ್ನು ಕಲ್ಲೆಸೆದು ಕೊಲ್ಲಲಾಯಿತು ಮತ್ತು ಶಿರಚ್ಛೇದ ಮಾಡಲಾಯಿತು. ಅವರು ನಿಧನರಾದ ದಿನ ಫೆಬ್ರವರಿ 14 ಆಗಿದ್ದರಿಂದ, ಆ ದಿನವನ್ನು  ಪ್ರಪಂಚದಾದ್ಯಂತ ‘ಪ್ರೇಮಿಗಳ ದಿನ’  ಎಂದು ಆಚರಿಸಲಾಯಿತು.

Share This Article
Enable Notifications OK No thanks