Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಕನ್ನಡ ನಾಡಿನಲ್ಲಿ ಕನ್ನಡ ಯಾಕಿಲ್ಲ: ಕೋರ್ಟ್ ನಲ್ಲಿ ಜಡ್ಜ್ ಪ್ರಶ್ನೆ

---Advertisement---

ಕನ್ನಡ ನಾಡಿನಲ್ಲೇ ಕನ್ನಡದ ಅವಗಣನೆಯಾಗುತ್ತಿರುವುದ ಹಲವು ಘಟನೆಗಳು ಇತ್ತೀಚೆಗೆ ನಡೆದಿವೆ.ಸರ್ಕಾರೀ ಆಯೋಗಗಳ ವರದಿಗಳಲ್ಲೂ ಕನ್ನಡದ ಅವಗಣನೆಯಾಗುತ್ತಿರುವುದಕ್ಕೆ ಈಗ ಹೈಕೋರ್ಟ್ ಜಡ್ಜ್ ತರಾಟೆಗೆ ತೆಗೆದುಕೊಂಡಿದ್ದಾರೆ.

ಕನ್ನಡ ನಾಡಿನಲ್ಲೇ ಕನ್ನಡಕ್ಕೆ ಯಾಕೆ ಅವಕಾಶವಿಲ್ಲ. ಹೀಗಂತ ಹೈಕೋರ್ಟ್ ನಲ್ಲೇ ನ್ಯಾಯಾಧೀಶರು ಪ್ರಶ್ನೆ ಮಾಡಿರುವ ವಿಡಿಯೋ ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಕೆಪಿಎಸ್ ಸಿ ಅಲ್ಲಿ ಕನ್ನಡದಲ್ಲಿ ಯಾಕೆ ನಡಾವಳಿಗಳು ಇಲ್ಲ ಎಂದು ಹೈಕೋರ್ಟ್ ನ್ಯಾಯಮೂರ್ತಿ ಕೃಷ್ಣ ದೀಕ್ಷಿತ್ ಪ್ರಶ್ನೆ ಮಾಡಿದ್ದಾರೆ.

ವಕೀಲರು ನ್ಯಾಯಾಧೀಶರ ಮುಂದೆ ತಾಂತ್ರಿಕ ವರದಿಯನ್ನು ಇಂಗ್ಲಿಷ್ ನಲ್ಲಿ ಓದುತ್ತಿದ್ದರು. ಇದನ್ನು ಗಮನಿಸಿದ ನ್ಯಾಯಮೂರ್ತಿಗಳು ಇದನ್ನೆಲ್ಲಾ ಕನ್ನಡದಲ್ಲಿ ಹೇಳಿ. ಯಾಕೆ ಇಂಗ್ಲಿಷ್ ನಲ್ಲಿ ಹೇಳುತ್ತೀರಿ? ಮತ್ತೆ ಕನ್ನಡವನ್ನು ಪ್ರೀತಿಸಬೇಕು ಎಂದರೆ ಹೇಗೆ? ಯಾರಿಗೂ ಅರ್ಥವಾಗದ ಹಾಗೆ ಲ್ಯಾಟಿನ್ ನಲ್ಲಿ ಬರೆದು ಬಿಡಿ ಹಾಗಿದ್ರೆ ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ. ಇದಕ್ಕೆ ಇದು ತಾಂತ್ರಿಕ ವರದಿ ಎಂದು ವಕೀಲರು ಸಮಜಾಯಿಷಿ ಕೊಡುವ ಪ್ರಯತ್ನ ಮಾಡುತ್ತಾರೆ. ಈ ವಿಡಿಯೋ ಈಗ ಫುಲ್ ವೈರಲ್ ಆಗಿದೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now
🏫 ಅಡ್ಮಿಷನ್ ಓಪನ್
🔒

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್

ಸ್ವಾಗತ...