ಕನ್ನಡ ನಾಡಿನಲ್ಲೇ ಕನ್ನಡದ ಅವಗಣನೆಯಾಗುತ್ತಿರುವುದ ಹಲವು ಘಟನೆಗಳು ಇತ್ತೀಚೆಗೆ ನಡೆದಿವೆ.ಸರ್ಕಾರೀ ಆಯೋಗಗಳ ವರದಿಗಳಲ್ಲೂ ಕನ್ನಡದ ಅವಗಣನೆಯಾಗುತ್ತಿರುವುದಕ್ಕೆ ಈಗ ಹೈಕೋರ್ಟ್ ಜಡ್ಜ್ ತರಾಟೆಗೆ ತೆಗೆದುಕೊಂಡಿದ್ದಾರೆ.
ಕನ್ನಡ ನಾಡಿನಲ್ಲೇ ಕನ್ನಡಕ್ಕೆ ಯಾಕೆ ಅವಕಾಶವಿಲ್ಲ. ಹೀಗಂತ ಹೈಕೋರ್ಟ್ ನಲ್ಲೇ ನ್ಯಾಯಾಧೀಶರು ಪ್ರಶ್ನೆ ಮಾಡಿರುವ ವಿಡಿಯೋ ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಕೆಪಿಎಸ್ ಸಿ ಅಲ್ಲಿ ಕನ್ನಡದಲ್ಲಿ ಯಾಕೆ ನಡಾವಳಿಗಳು ಇಲ್ಲ ಎಂದು ಹೈಕೋರ್ಟ್ ನ್ಯಾಯಮೂರ್ತಿ ಕೃಷ್ಣ ದೀಕ್ಷಿತ್ ಪ್ರಶ್ನೆ ಮಾಡಿದ್ದಾರೆ.
ವಕೀಲರು ನ್ಯಾಯಾಧೀಶರ ಮುಂದೆ ತಾಂತ್ರಿಕ ವರದಿಯನ್ನು ಇಂಗ್ಲಿಷ್ ನಲ್ಲಿ ಓದುತ್ತಿದ್ದರು. ಇದನ್ನು ಗಮನಿಸಿದ ನ್ಯಾಯಮೂರ್ತಿಗಳು ಇದನ್ನೆಲ್ಲಾ ಕನ್ನಡದಲ್ಲಿ ಹೇಳಿ. ಯಾಕೆ ಇಂಗ್ಲಿಷ್ ನಲ್ಲಿ ಹೇಳುತ್ತೀರಿ? ಮತ್ತೆ ಕನ್ನಡವನ್ನು ಪ್ರೀತಿಸಬೇಕು ಎಂದರೆ ಹೇಗೆ? ಯಾರಿಗೂ ಅರ್ಥವಾಗದ ಹಾಗೆ ಲ್ಯಾಟಿನ್ ನಲ್ಲಿ ಬರೆದು ಬಿಡಿ ಹಾಗಿದ್ರೆ ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ. ಇದಕ್ಕೆ ಇದು ತಾಂತ್ರಿಕ ವರದಿ ಎಂದು ವಕೀಲರು ಸಮಜಾಯಿಷಿ ಕೊಡುವ ಪ್ರಯತ್ನ ಮಾಡುತ್ತಾರೆ. ಈ ವಿಡಿಯೋ ಈಗ ಫುಲ್ ವೈರಲ್ ಆಗಿದೆ.






