ʻಪುನೀತ ಪರ್ವʼದಲ್ಲಿ ರಿಷಬ್ ಶೆಟ್ಟಿ ಗೈರಾಗಿದ್ದೇಕೆ..? ಅಭಿಮಾನಿಗಳು ಅವರಿಗೆ ಹೇಳಿದ್ದೇನು..?

1 Min Read

 

ನಿನ್ನೆ ಅರಮನೆ ಮೈದಾನದಲ್ಲಿ ಬೃಹತ್ ವೇದಿಕೆ ಮೇಲೆ ಪುನೀತ ಪರ್ವ ಕಾರ್ಯಕ್ರಮ ನಡೆದಿದೆ. ಈ ಕಾರ್ಯಕ್ರಮಕ್ಕೆ ಕನ್ನಡ ಚಿತ್ರರಂಗದ ದೊಡ್ಡ ದೊಡ್ಡ ತಾರೆಯರು ಸೇರಿದಂತೆ ಅಕ್ಕಪಕ್ಕದ ಬಿಗ್ ಸ್ಟಾರ್ಗಳು ಸೇರಿದ್ದರು. ಆದರೆ ರಿಷಬ್ ಶೆಟ್ಟಿ ಈ ಕಾರ್ಯಕ್ರಮಕ್ಕೆ ಗೈರಾಗಿದ್ದರು.

ರಕ್ಷಿತ್ ಶೆಟ್ಟಿ ಹಾಗೂ ರಾಜ್ ಬಿ ಶೆಟ್ಟಿ ವೇದಿಕೆ ಹಂಚಿಕೊಂಡಿದ್ದರು. ಆದರೆ ರಿಷಬ್ ಬಾರದೆ ಇರುವುದಕ್ಕೆ ರಿಷಬ್ ಶೆಟ್ಟಿ ಕ್ಷಮೆಯಾಚಿಸಿದ್ದಾರೆ. ಜೊತೆಗೆ ಬಾರದೆ ಇರುವುದಕ್ಕೆ ಕಾರಣವನ್ನು ತಿಳಿಸಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ರಿಷಬ್ ಶೆಟ್ಟಿ, ಪೂರ್ವನಿರ್ಧರಿತ ಕಾರ್ಯಕ್ರಮವೊಂದಕ್ಕಾಗಿ ಬಹ್ರೇನ್ನಲ್ಲಿರುವ ಕಾರಣ, ಇಂದಿನ ‘ಪುನೀತಪರ್ವ’ದಲ್ಲಿ ಪಾಲ್ಗೊಳ್ಳಲು ಸಾಧ್ಯವಾಗಲಿಲ್ಲ. ಕಾರ್ಯಕ್ರಮ ಲೈವ್ ನೋಡುತ್ತಾ ಕಣ್ತುಂಬಿ ಬಂದವು. ನಾನೂ ಅಲ್ಲಿ, ಆ ನೆನಪುಗಳ ನಡುವೆ ಇರಬೇಕಿತ್ತು ಎನ್ನಿಸಿತು. ಅಪ್ಪು ಸರ್ ಕ್ಷಮೆಯಿರಲಿ,🙏 ಮೊದಲ ದಿನವೇ ಗಂಧದಗುಡಿಯಲ್ಲಿ ಭೇಟಿಯಾಗೋಣಾ ಎಂದಿದ್ದಾರೆ.

ಇನ್ನು ರಿಷಬ್ ಶೆಟ್ಟಿ ಹೀಗೆ ಟ್ವೀಟ್ ಮಾಡಿದ ಕೂಡಲೆ ಹಲವರು ಅದಕ್ಕೆ ನೆಟ್ಟಿಗರು ಹಾಗೂ ಅಪ್ಪು ಅಭಿಮಾನಿಗಳು ರಿಪ್ಲೇ ಮಾಡಿದ್ದಾರೆ. ರಕ್ಷಿತ್ ಶೆಟ್ಟಿ ಹಾಗೂ ರಿಷಬ್ ಶೆಟ್ಟಿ ಅವರು ವೇದಿಕೆ ಮೇಲೆ ಇದ್ದಾಗ ನೀವೂ ಕೂಡ ಇರಬೇಕಿತ್ತು. ಅಪ್ಪು ಸರ್ ಮೇಲೆ ನಿಮಗಿರುವ ಅಭಿಮಾನಕ್ಕೆ ನಾವೂಗಳು ಚಿರಋಣಿ. ನಿಮ್ಮ ಸರಳತೆ ಹೀಗೆ ಇರಲಿ. ನೀವೂ ಹೇಳಿದಂತೆ ಗಂಧದ ಗುಡಿ ಬಿಡುಗಡೆ ದಿನವೇ ಎಲ್ಲರೂ ಸಿಗೋಣಾ ಎಂದು ರಿಪ್ಲೇ ಮಾಡಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *