Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ आध्यात्मिक अन्य

---Advertisement---

ಸಚಿವ ಸ್ಥಾನಕ್ಕಾಗಿ ಸಿಎಂ ಹಿಂದೆ ಬಿದ್ದಿದ್ದ ಈಶ್ವರಪ್ಪ ಈಗ ಸಚಿವ ಸ್ಥಾನ ಬೇಡ ಅಂತಿರೋದ್ಯಾಕೆ..?

---Advertisement---

 

ಬೆಂಗಳೂರು: ಮಾಜಿ ಸಚಿವ ಈಶ್ವರಪ್ಪ ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣದಿಂದಾಗಿ ರಾಜೀನಾಮೆ ನೀಡಿದ್ದರು. ಬಳಿಕ ಆ ಕೇಸ್ ನಿಂದ ಕ್ಲೀನ್ ಚಿಟ್ ಕೂಡ ಸಿಕ್ಕಿದೆ. ಬಳಿಕ ಸಚಿವ ಸಂಪುಟ ವಿಸ್ತರಣೆ ಮಾಡಿ, ನನ್ನ ಮತ್ತೆ ಸಚಿವ ಸ್ಥಾನಕ್ಕೆ ವಾಪಾಸ್ ಕರೆದುಕೊಳ್ಳಿ ಎಂದು ಸಾಕಷ್ಟು ಬಾರಿ ಸಿಎಂ ಬೊಮ್ಮಾಯಿ ಅವರಿಗೆ ಮನವಿ ಮಾಡಿದ್ದರು. ಆದ್ರೆ ಅದ್ಯಾಕೋ ಈಗ ನನಗೆ ಸಚಿವ ಸ್ಥಾನ ಬೇಡ ಎನ್ನುತ್ತಿದ್ದಾರೆ.

ಈ ಬಗ್ಗೆ ನಗರದಲ್ಲಿ ಮಾತನಾಡಿದ ಅವರು, ಸಂತೋಷ್ ಪಾಟೀಲ್ ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ ಎಂದು ಯಾರಿಗೂ ಕನಸು ಬಿದ್ದಿರಲಿಲ್ಲ. ಅವರು ಮಲಗಿದ್ದು ಒಂದು ಕಡೆ, ಅವರ ಪತ್ರ ಸಿಕ್ಕಿದ್ದು ಮತ್ತೊಂದು ಕಡೆ. ಆದರೂ ಈ ಕೇಸಲ್ಲಿ ನನಗೆ ಕ್ಲೀನ್ ಚಿಟ್ ಸಿಕ್ಕಿದೆ.

ಕಾರ್ಯಕರ್ತರ ಅಪೇಕ್ಷೆ ಮೇರೆಗೆ ಸಂಪುಟ ವಿಸ್ತರಣೆ ಸಂಪುಟ ವಿಸ್ತರಣೆ ಮಾಡುವಂತೆ ಸಿಎಂಗೆ ತಿಳಿಸಿದ್ದೆ. ಸಿಎಂ ಬೊಮ್ಮಾಯಿ ಅವರು ಕೂಡ ನನ್ನನ್ನು ಮಂತ್ರಿ ಮಾಡುವ ಭರವಸೆ ನೀಡಿದ್ದರು. ಆದರೆ ಈಗ ಅವರಿಗೆ ಏನು ಸಮಸ್ಯೆ ಇದೆಯೋ ಏನೋ..? ಪಕ್ಷ ಮತ್ತು ಸರ್ಕಾರಕ್ಕೆ ಸಮಸ್ಯೆ ಮಾಡುವುದಕ್ಕೆ ನಾನು ತಯಾರಿಲ್ಲ. ಈಗಾಗಲೇ ಸಚಿವನಾಗಿ ನಾನು ಹಲವು ಇಲಾಖೆಗಳನ್ನು ನೋಡಿದ್ದೇನೆ. ಹಾಗಾಗಿ ನನಗೆ ಸಚಿವ ಸ್ಥಾನ ಬೇಡ. ಈ ಬಗ್ಗೆ ಈಗಾಗಲೇ ಸಿಎಂ ಬೊಮ್ಮಾಯಿ ಅವರಿಗೂ ತಿಳಿಸಿದ್ದೇನೆ ಎಂದಿದ್ದಾರೆ.

Join WhatsApp

Join Now

Join Telegram

Join Now

Leave a Comment