ದಿಢೀರನೇ ಡಿಕೆಶಿ ದೆಹಲಿಗೆ ಹೋಗ್ತಿರೋದ್ಯಾಕೆ..?

1 Min Read

ಬೆಂಗಳೂರು: ಕಾಂಗ್ರೆಸ್ ಸರ್ಕಾರದಲ್ಲಿ ಮೊದಲೇ ಏನೇನೋ ಆಗ್ತಿದೆ. ಅದರಲ್ಲೂ ಅಧಿಕಾರ ಹಂಚಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಸಿದ್ದರಾಮಯ್ಯ ಅವರು ನಾನೇ ಸಿಎಂ ಅಂತಿದ್ರೆ ಮನಸೊಳಗೆ ಆಸೆ ಇಟ್ಕೊಂಡಿರೋ ಡಿಕೆ ಶಿವಕುಮಾರ್ ತಮಗೆ ತಾವೇ ಸಮಾಧಾನ ಮಾಡಿಕೊಳ್ತಾ ಇದಾರೆ. ಇದರ ನಡುವೆ ದಿಢೀರನೇ ದೆಹಲಿಗೆ ಭೇಟಿ ನೀಡಿದ್ದಾರೆ. ಆ ಬಗ್ಗೆ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿ ಡಿಸಿಎಂ ಡಿಕೆ ಶಿವಕುಮಾರ್, ನನ್ನದೇನೋ ಖಾಸಗಿ ಕೆಲಸವಿದೆ. ಅದಕ್ಕೋಸ್ಕರ ಹೋಗ್ತಾ ಇದ್ದೀನಿ ಎಂದಿದ್ದಾರೆ.

ದೆಹಲಿಗೆ ಇವತ್ತು ಹೋಗಿ, ನಾಳೆ ನನ್ನ ಕೆಲಸ ಮುಗಿಸಿಕೊಂಡು ವಾಪಸ್ ಬರ್ತೀನಿ ಎಂದಿದ್ದಾರೆ. ಇದೇ ವೇಳೆ ಸಮೀಕ್ಷೆಯ ವೇಳೆ ಸೋಮಣ್ಣ ಅವರು ಕೂಡ ಆಕ್ಷೇಪ ವ್ಯಕ್ಯಪಡಿಸಿದ್ದರ ಬಗ್ಗೆ ಪ್ರಶ್ನೆ ಕೇಳಿದ್ದಕ್ಕೆ, ಯಾರೂ ಬೇಕಾದರೂ ಆಕ್ಷೇಪ ಪಡಲಿ. ಜಾತಿ ಗಣತಿ ಮಾಡಬೇಕು. ಕೋರ್ಟ್ ಹೇಳಿದೆ, ಅದರಲ್ಲಿ ಯಾವುದಕ್ಕೆ ಉತ್ತರ ಕೊಡಬೇಕೋ ಅದಕ್ಕೆ ಕೊಡಿ. ಬೇಡದೆ ಇರುವುದಕ್ಕೆ ತಲೆ ಕೆಡಿಸಿಕೊಳ್ಳಬೇಡಿ ಅಂತ. ನಾನು ಕೂಡ ಅಧಿಕಾರಿಗಳಿಗೆ ಹೇಳಿ ಕಳುಹಿಸಿದ್ದೇನೆ. ಬೆಂಗಳೂರಿನ ಜನಕ್ಕರ ಕೋಳಿ, ಕುರಿ, ಚಿನ್ನ ಎಲ್ಲಾ ಕೇಳಬೇಡಿ. ಅದು ಅವರ ಪರ್ಸನಲ್ ವಿಚಾರ ಅಂತ.

ಸಮೀಕ್ಷರಯನ್ನ ಯಾರೂ ವಿರೋಧಿಸುವ ಅಗತ್ಯವಿಲ್ಲ. ಮೊದಲ ಸಮೀಕ್ಷೆಯನ್ನ ಸರಿ ಇಲ್ಲ ಅಂತ ಹೇಳಿದ್ದು ಅವರೇ. ಅದಕ್ಕೆ ಹೊಸದಾಗಿ ಸಮೀಕ್ಷೆ ಮಾಡುವುದಕ್ಕೆ ಅವಕಾಶ ಮಾಡಿಕೊಟ್ಟಿದ್ದೀವಿ. ಎಲ್ಲರೂ ಕೂಡ ಸಮೀಕ್ಷೆಯಲ್ಲಿ ಭಾಗವಹಿಸಿ ಅಂತ ಮನವಿ ಮಾಡ್ತೇನೆ ಎಂದಿದ್ದಾರೆ. ಇದೇ ವೇಳೆ ಸಿಎಂ ಸ್ಥಾನದ ವಿಚಾರದ ಪ್ರಶ್ನೆಗೆ ಮೌನವಾಗಿ ಹೋಗಿದ್ದಾರೆ. ಸಿದ್ದರಾಮಯ್ಯ ಅವರೇ ಪೂರ್ಣಾವಧಿ ಸಿಎಂ ಅಂತ ಇದ್ದಾರಲ್ಲ ಸರ್ ಎಂದಾಗ ಮೌನವಾಗಿ ಮುಂದೆ ಹೋಗಿದ್ದಾರೆ.

Share This Article