ಬೆಂಗಳೂರು: ರಾಜ್ಯದಲ್ಲಿ ಮಳೆಯಿಲ್ಲದೆ ಬರ ತಾಂಡವವಾಡುತ್ತಿದೆ. ಈಗಾಗಲೇ ಕೇಂದ್ರದಿಂದ ತಂಡವೊಂದು ಬಂದು, ಬರ ಅಧ್ಯಯನ ಕೂಡ ನಡೆಸಿದ್ದಾರೆ. ರಾಜ್ಯದಿಂದ ಕೂಡ ಬರ ಅಧ್ಯಯನ ವರದಿ ನೀಡಲಾಗಿದೆ. ಆದರೆ ಇಲ್ಲಿಯ ತನಕ ಬರ ಪರಿಹಾರ ಮಾತ್ರ ಒಂದು ರೂಪಾಯಿ ಬಂದಿಲ್ಲ. ಇದರ ನಡುವೆ ರಾಜ್ಯ ಬಿಜೆಪಿ ನಾಯಕರು ಕೂಡ ಬರ ಅಧ್ಯಯನ ನಡೆಸುತ್ತಿದ್ದಾರೆ. ಈ ಬಗ್ಗೆ ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯೆ ನೀಡಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಅವರು, ಕೇಂದ್ರ ಸರ್ಕಾರ ಈಗಾಗಲೇ ಬರ ಅಧ್ಯಯನ ನಡೆಸಿದೆ. ರಾಜಗಯ ಬಿಜೆಪಿಯವರು ಏನು ಅಧ್ಯಯನ ಮಾಡುತ್ತಾರೆ..? ಬಿಜೆಪಿಯವರು ಕೇವಲ ರಾಜಕೀಯ ಅಧ್ಯಯನಕ್ಕೆ ಹೋಗುತ್ತಾರೆ. ಬಿಜೆಪಿಯವರು ಮೊದಲು ಕೇಂದ್ರ ಸರ್ಕಾರದ ಬಳಿ ಚರ್ಚಿಸಿ, ಅನುದಾನ ಕೊಡಿಸಲಿ. ಬರ ಅಧ್ಯಯನ ಮಾಡಬೇಡಿ ಎಂದು ನಾವೂ ಹೇಳಲು ಹೋಗಲ್ಲ. ಬಿಜೆಪಿಯಿಂದ 25 ಸಂಸದರಿದ್ದಾರಲ್ಲ, ಚರ್ಚಿಸಿ ಕೊಡಿಸಲಿ ನೋಡೋಣಾ ಎಂದಿದ್ದಾರೆ.
ಕೇಂದ್ರ ಸರ್ಕಾರದ ಬಳಿ ಬರ ಪರಿಹಾರಕ್ಕಾಗಿ 17 ಸಾವಿರ ಕೋಟಿ ಕೇಳಿದ್ದೇವೆ. 33,700 ಕೋಟಿ ನಷ್ಟವಾಗಿದೆ. ಮೊದಲು ಅದನ್ನು ಕೊಡಿಸಲಿ. ಸಂಸದರು, ಕೇಂದ್ರ ಸರ್ಕಾರದ ಬಳಿ ಚರ್ಚಿಸಿ ಕೊಡಿಸಲಿ. ನಮ್ಮ ಸಚಿವರ ಭೇಟಿಗೆ ಕೇಂದ್ರ ಸರ್ಕಾರ ಸಮಯವನ್ನೇ ಕೊಟ್ಟಿಲ್ಲ. ಕೇಳಿರುವ ಬರ ಪರಿಹಾರವನ್ನು ಸಂಸದರೆಲ್ಲಾ ಸೇರಿ, ಚರ್ಚಿಸಿ ಕೊಡಿಸಿ ಎಂದಿದ್ದಾರೆ.
ರಾಜ್ಯದ ಹಕವೆಡೆ ಭೂಮಿಗೆ ಬಿತ್ತಿದ ಬೀಜವೆಲ್ಲ ನಶಿಸಿ ಹೋಗಿದೆ. ಇನ್ನು ಎಷ್ಟೋ ಕಡೆ ಬೆಳೆದ ಪೈರು ಒಣಗಿ ಹೋಗುತ್ತೆ. ಸದ್ಯ ಎರಡು ದಿನದಿಂದ ರಾಜ್ಯದಲ್ಲಿ ಮಳೆ ಉತ್ತಮವಾಗಿ ಬರುತ್ತಿದೆ. ಬೇಸೆಇಗೆ ಕಾಲಕ್ಕೆ ಜಾನುವಾರುಗಳಿಗೆ ಏನು ಮಾಡೋದು ಎಂಬ ರೈತರ ಚಿಂತೆ ಈ ಮಳೆಯಿಂದ ನೀಗ ಬಹುದು. ಆದರೆ ಬರಗಾಲದ ಚಿಂತೆ ಕಡಿಮೆಯಾಗಲು ಸಾಧ್ಯವಿಲ್ಲ.