ಬೆಂಗಳೂರು: ವಿಧಾನಪರಿಷತ್ ಗೆ ವೀರೇಂದ್ರ ಅವರನ್ನು ಬಿಟ್ಟು ಮತ್ತೆ ಶರವಣ ಅವರಿಗೆ ಟಿಕೆಟ್ ನೀಡಲಾಗಿದೆ. ಈ ಸಂಬಂಧ ಸ್ಪಷ್ಟನೆ ನೀಡಿರುವ ಮಾಜಿ ಸಿಎಂ ಕುಮಾರಸ್ವಾಮಿ, ನಮ್ಮ ಅಧ್ಯಕ್ಷರು ಹೇಳಿದಂತ ರೀತಿಯಲ್ಲಿ ಶರವಣ ಅವರು, ಮೊದಲನೇ ಬಾರಿಗೆ 2014ರಲ್ಲಿ ಆಯ್ಕೆ ಮಾಡಿದಾಗ ಬಹಳ ರೀತಿಯಲ್ಲಿ ಪ್ರತಿಕ್ರಿಯೆ ಏನಿತ್ತು, ಈ ಬಾರಿ ಆ ರೀತಿ ಶರವಣ ಮೇಲೆ ನೆಗೆಟಿವ್ ಅಭಿಪ್ರಾಯಗಳಿರಲಿಲ್ಲ.
ಯಾಕೆಂದ್ರೆ ವಿಧಾನಪರಿಷತ್ ಗೆ ಆಯ್ಕೆ ಮಾಡಿದ ನಂತರ ಪಕ್ಷದ ಪ್ರತಿಯೊಂದು ಬೆಳವಣಿಗೆಯಲ್ಲಿ ಪಕ್ಷಕ್ಕೆ ಸಂಪೂರ್ಣವಾದ ಸಹಕಾರ ಕೊಟ್ಟುಕೊಂಡು ಬಂದಂತದ್ದು ಅಷ್ಟೇ ಅಲ್ಲ ಸದಸ್ಯರಾಗಿ ಸಕ್ರೀಯವಾಗಿ ಪಾಲ್ಗೊಂಡಿದ್ದರು. ಹಾಗೂ ಕಳೆದ ನಾಲ್ಕೈದು ವರ್ಷಗಳಲ್ಲಿ ಬೆಂಗಳೂರು ನಗರದಲ್ಲಿ, ರಾಜ್ಯಾದ್ಯಂತ ಅವರ ಸಮಾಜದ ಒಂದು ವಿಶ್ವಾಸ ಮೂಡೊಸುವಂತ ಕೆಲಸದಲ್ಲಿ ಪ್ರಾಮಾಣಿಕವಾಗಿ ದುಡಿದಿದ್ದಾರೆ.
ಅವರ ಸಮುದಾಯಕ್ಕೆ ಮತ್ತೊಮ್ಮೆ ಅವಕಾಶ ಕೊಡಬೇಕೆಂಬ ಮಾನದಂಡವನ್ನು ಬಳಸಿ, ಈ ವಿಷಯದಲ್ಲಿ ಆಯ್ಕೆ ಮಾಡಿಕೊಂಡಿದ್ದೇವೆ. ಪ್ರತಿಯೊಂದು ಪಕ್ಷದ ಸಂಘಟನೆ ಅಂತ ಬಂದಾಗ ಪಕ್ಷದ ಜೊತೆಯಾಗಿಯೆ ಅವರು, ಎಲ್ಲಾ ರೀತಿಯಲ್ಲಿಯೇ ಸಕ್ರೀಯವಾಗಿ ಪಾಲ್ಗೊಂಡು ಕೆಲಸ ಮಾಡಿದ್ದಾರೆ. ಪಕ್ಷದ ಬಗ್ಗೆ ಯಾರಾದರೂ ಲಘುವಾಗಿ ಮಾತನಾಎಇದಾಗ ಯಾವುದೇ ರೀತಿಯ ಆತಂಕ, ಭೋತಿಯಿಲ್ಲದೆ, ವಿರೋಧಿಗಳ ಮುಂದೆ ಪಕ್ಷವನ್ನು ಸಮರ್ಥಿಸಿಕೊಳ್ಳುವಲ್ಲಿ ಪ್ರಾಮಾಣಿಕವಾಗಿ ಕೆಲಸ ಮಾಡಿದ್ದಾರೆ ಎಂದಿದ್ದಾರೆ.