ಬೆಂಗಳೂರು: ವಿಧಾನಪರಿಷತ್ ನಾಮನಿರ್ದೇಶನಕ್ಕೆ ಇದೀಗ ಹೈಕಮಾಂಡ್ ಗ್ರೀನ್ ಸಿಗ್ನಲ್ ಕೊಟ್ಟಿದೆ. ಅದುವೆ ಸುಧಾಮ್ ದಾಸ್ ಗೆ ಓಕೆ ಎಂದಿದೆ. ಆದ್ರೆ ಸುಧಾಮ್ ದಾಸ್ ನಾಮನಿರ್ದೇಶನಕ್ಕೆ ಕಾಂಗ್ರೆಸ್ ನಲ್ಲಿಯೇ ವಿರೋಧವಿತ್ತು. ದಲಿತ ಸಚಿವರೆಲ್ಲಾ ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದರು. ಆದರೂ ವಿರೋಧದ ನಡುವೆಯೇ ನಾಮನಿರ್ದೇಶನಕ್ಕೆ ಹೈಕಮಾಂಡ್ ಅಸ್ತು ಎಂದಿದ್ದಾರೆ.
ಸಚಿವ ಜಿ ಪರಮೇಶ್ವರ್, ಮುನಿಯಪ್ಪ, ಮಹದೇವಪ್ಪ, ತಿಮ್ಮಾಪುರ ಅವರ ವಿರೋಧವಿತ್ತು. ಸುಧಾಮ್ ದಾಸ್ ನಾಮನಿರ್ದೇಶನ ವಿರೋಧಿಸಿ, ಹೈಕಮಾಂಡ್ ಗೆ ಪತ್ರ ಬರೆದಿದ್ದರು. ಆದ್ರೆ ಹೈಕಮಾಂಡ್ ಆ ಪತ್ರಕ್ಕೆ ತಲೆಕೆಡಿಸಿಕೊಂಡಂತೆ ಕಾಣುತ್ತಿಲ್ಲ. ಸುಧಾಮ್ ದಾಸ್ ಅವರನ್ನೇ ಆಯ್ಕೆ ಮಾಡಲು ಸೂಚಿಸಿದೆ.
ಈ ಮೊದಲು ಇಡಿ ಅಧಿಕಾರಿಯಾಗಿದ್ದ ಸುಧಾಮ್ ದಾಸ್, ಇತ್ತಿಚೆಗಷ್ಟೇ ಕಾಂಗ್ರೆಸ್ ಸೇರಿದ್ದರು. ಹಿರಿಯ ಸಚಿವರ ವಿರೋಧ ನಡುವೆಯೂ ಆಯ್ಕೆಯಾಗಿದ್ದಾರೆ. ಸುಧಾಮ್ ದಾಸ್ ಬಗ್ಗೆ ಹಿರಿಯ ಸಚಿವರು ಹೇಳಿದಂತೆ, ಹೆಸರನ್ನ ಅಂತಿಮಗೊಳಿಸುವಾಗ ನಮ್ಮ ಅಭಿಪ್ರಾಯ ಸಂಗ್ರಹಿಸದೇ ಇರೋದ್ರಿಂದ ಬೇಸರವಾಗಿದೆ. ಪ್ರಾದೇಶಿಕ ಸಮಾನತೆ, ಸಾಮಾಜಿಕ ನ್ಯಾಯ ಪಾಲಿಸಬೇಕಿತ್ತು. ಪಕ್ಷ ಸಂಘಟನೆಯಲ್ಲಿ ಸುಧಾಮ್ ದಾಸ್ ಅವರ ಸೇವೆ ಇಲ್ಲವೇ ಇಲ್ಲ. ಕಳೆದ ವಿಧಾನಸಭೆ ಚುನಾವಣೆಲ್ಲೂ ಸುಧಾಮ್ ದಾಸ್ ಅವರು ಕೆಲಸ ಮಾಡಿಲ್ಲ. ಹೀಗಾಗಿ ಸುಧಾಮ್ ದಾಸ್ ಪರಿಷತ್ ಆಯ್ಕೆಯನ್ನ ನಾವು ವಿರೋಧಿಸ್ತೇವೆ ಎಂದಿದ್ದರು.