ಬೆಂಗಳೂರು: ಗುತ್ತಿಗೆದಾರ ಸಂತೋಷ್ ಸಾವಿನ ಬಳಿಕ ಈಶ್ವರಪ್ಪ ತಮ್ಮ ಸಚಿವ ಸ್ಥಾನ ಕಳೆದುಕೊಂಡಿದ್ದಾರೆ. ಅವರನ್ನು ಬಂಧಿಸಿ ಅಂತ ಕಾಂಗ್ರೆಸ್ ನಾಯಕರು ಪ್ರತಿಭಟನೆಗಳ ಮೂಲಕ ಒತ್ತಡ ಹಾಕುತ್ತಿದ್ದಾರೆ. ರಾಜ್ಯಾದ್ಯಂತ ಹಲವು ಕಡೆ ಪ್ರತಿಭಟನೆ ನಡೆಸುತ್ತಿದ್ದಾರೆ.
ಈ ಮಧ್ಯೆ, ಈಶ್ವರಪ್ಪ ಪರ ಆರ್ ಅಶೋಕ್ ಮಾತನಾಡಿದ್ದಾರೆ. ಈಶ್ಚರಪ್ಪ ಕೇಸಿನಲ್ಲಿ 100% ಕಾಂಗ್ರೆಸ್ ಕೈವಾಡವಿದೆ. ಸಂತೋಷ್ ಸಾವಿನ ಬಗ್ಗೆ ಸಾಕಷ್ಟು ಸಂಶಯಗಳಿವೆ. ಸಂತೋಷ್ ಉಡುಪಿಗೆ ಸ್ನೇಹಿತರ ಜೊತೆ ಯಾಕೆ ಬಂದ..? ಆತ ಬರೆದಿರುವಂತಹ ಡೆತ್ ನೋಟ್ ಇಲ್ಲ. ಸಂತೋಷ್ ಮೆಸೇಜ್ ಹಾಕಿದ್ದಾರಾ ಎಂಬುದನ್ನು ತಿಳಿಯಬೇಕು. ತನಿಖೆಯಿಂದಲೇ ಸಾವಿನ ಸತ್ಯಾಂಶ ಹೊರಬರಲಿದೆ. ಈಶ್ವರಪ್ಪ ಟಾರ್ಗೆಟ್ ಆಗಿದ್ದಾರೆ ಎಂದು ಅನುಮಾನ ವ್ಯಕ್ತಪಡಿಸಿದ್ದಾರೆ.
ಇನ್ನು ಇದೇ ವೇಳೆ ಕಾಂಗ್ರೆಸ್ ಬಗ್ಗೆ ಆಕ್ರೋಶಗೊಂಡ ಸಚಿವ ಆರ್ ಅಶೋಕ್, ಕಾಂಗ್ರೆಸ್ ನವರು ಗೇಮ್ ಆಡುತ್ತಿದ್ದಾರೆ. ಚುನಾವಣೆಗೆ ಏನು ಬೇಕೋ ಅದನ್ನು ಮಾಡುತ್ರಿದ್ದಾರೆ. ಕಾಂಗ್ರೆಸ್ ದೇಶದ ಪರ, ಜನರ ಪರವಾಗಿ ನಿಂತಿಲ್ಲ. ಅಧಿಕಾರ ಅಂದ್ರೆ ಕಾಂಗ್ರೆಸ್ ನವರು ಬರುತ್ತಾರೆ. ಅಧಿಕಾರ ಇಲ್ಲ ಅಂತ ಕಾಂಗ್ರೆಸ್ ನವರು ಸಾಯುತ್ತಾರೆ. ಕರ್ನಾಟಕದಿಂದಲೇ ಕಾಂಗ್ರೆಸ್ ಓಡಿಸುತ್ತೇವೆ ಎಂದಿದ್ದಾರೆ.