ರಾಜಣ್ಣನನ್ನ ಡಿಕೆಶಿ ಭೇಟಿ ಆಗಿದ್ದೇಕೆ..? ಪುತ್ರ ರಾಜೇಂದ್ರ ಬಿಚ್ವಿಟ್ರು ಸೀಕ್ರೆಟ್

1 Min Read

ದೆಹಲಿ: ಸಿಎಂ ಆಗಬೇಕೆಂಬ ಆಕಾಂಕ್ಷೆ ಹೊತ್ತು ದೇವರ ಮೊರೆ ಹೋಗಿದ್ದಾಗಿದೆ. ಕಳೆದ ಕೆಲ ದಿನಗಳಿಂದ ಸಿಎಂ ಸಿದ್ದರಾಮಯ್ಯ ಆಪ್ತರನ್ನು ಡಿಕೆಶಿ ಭೇಟಿ ಆಗ್ತಾ ಇದ್ದಾರೆ. ಅದರಲ್ಲೂ ಸಿದ್ದರಾಮಯ್ಯ ಅವರ ಪರಮಾಪ್ತ ರಾಜಣ್ಣ ಅವರನ್ನು ಭೇಟಿಯಾಗಿದ್ದರು. ಅದರಲ್ಲೂ ಎರಡು ಬಾರಿ. ಈ ಭೇಟಿಯ ಹಿನ್ನಲೆ ಏನು ಎಂಬುದನ್ನ ಅವರ ಪುತ್ರ ರಾಜೇಂದ್ರ ಅವರು ತಿಳಿಸಿದ್ದಾರೆ.

ದೆಹಲಿಯಲ್ಲಿ ಮಾತನಾಡಿದ ರಾಜೇಂದ್ರ ಅವರು, ದೆಹಲಿಯಲ್ಲಿ ಬೋರ್ಡ್ ಮೀಟಿಂಗ್ ಇತ್ತು ಅದಕ್ಕೆ ಬಂದಿದೆ. ಡಿಕೆ ಶಿವಕುಮಾರ್ ಅವರನ್ನ ರಾಜಣ್ಣ ಅವರು ಭೇಟಿ ಆಗಿರುವುದು, ಅವರು ಪಕ್ಷದ ಅಧ್ಯಕ್ಷರಿದ್ದಾರೆ. ಮತ್ತೆ ನಮ್ಮ ಸರ್ಕಾರದಲ್ಲಿ ಉಪಮುಖ್ಯಮಂತ್ರಿಗಳಿದ್ದಾರೆ. ಏನಾದರೂ ವಿಚಾರಗಳು ಇದ್ದಂತರ ಸಂದರ್ಭದಲ್ಲಿ ಮಾತನಾಡುವುದಕ್ಕೆ ಹೋಗಿದ್ದಾರೆ ಎಂದು ನಾನು ಅಂದುಕೊಂಡಿದ್ದೀನಿ. ಯಾಕಂದ್ರೆ ಅಲ್ಲಿ ಅವರಿಬ್ಬರೇ ಭೇಟಿಯಾಗಿರುವಂತದ್ದು. ನಾನು ಅಲ್ಲಿರಲಿಲ್ಲ.

ಆ ಭೇಟಿಯಲ್ಲಿ ಏನೆಲ್ಲಾ ಚರ್ಚೆಯಾಗಿದೆ ಎಂಬುದು ನಮ್ಮ ಬಳಿ ಚರ್ಚೆ ಮಾಡಿಲ್ಲ. ರಾಜಣ್ಣ ಅವರು ಯಾವಾಗಲೂ ಹೇಳುತ್ತಾರೆ. ನಾನು ಸಿದ್ದರಾಮಯ್ಯ ಅವರ ಪರ ಇದ್ದೀನಿ. ನನ್ನ ಮಾತಿಗೆ ಬದ್ಧನಾಗಿರುತ್ತೇನೆ ಎಂದು ರಾಜಣ್ಣ ಅವರು ಮಾತನ್ನ ಕೊಟ್ಟಿದ್ದಾರೆ. ಡಿಕೆ ಶಿವಕುಮಾರ್ ಅವರು ಪಕ್ಷದ ಅಧ್ಯಕ್ಷರಿದ್ದಾರೆ. ಅವರನ್ನ ಭೇಟಿಯಾಗಿರುವುದರಲ್ಲಿ ತಪ್ಪಿಲ್ಲ. ವಿಶ್ವಾಸ ಗಳಿಸುವುದು ಎನ್ನುವುದಕ್ಕಿಂತ ರಾಜಣ್ಣ ಅವರು ಡಿಕೆ ಶಿವಕುಮಾರ್ ಅವರು ಯೂತ್ ಕಾಂಗ್ರೆಸ್ ನಿಂದ ಜೊತೆಗೆ ಬೆಳೆದವರು. ಏನಾದರೂ ಮಾತನಾಡುವ ವಿಚಾರವಿದ್ದಂತ ಸಂದರ್ಭದಲ್ಲಿ ಭೇಟಿಯಾಗಿರಬಹುದು. ನೀವೆಲ್ಲಾ ಹೇಳಿದ್ದಂತೆ ಡಿನ್ನರ್ ಬಗ್ಗೆ ಊಟಕ್ಕೆ ಸೇರುವುದರಲ್ಲಿ ತಪ್ಪೇನಿಲ್ಲ. ನನ್ನ ಭವಿಷ್ಯ ರೂಪಿಸುವಂತದ್ದು, ನಾನೆಲ್ಲಿ ಸ್ಪರ್ಧೆ ಮಾಡ್ತೀನಿ ಅಲ್ಲಿ ಜನ ನನ್ನ ಗೆಲ್ಲಿಸಿ, ಮುಂದಕ್ಕೆ ಕಳುಹಿಸಿದರೆ ಅದಕ್ಕೆ ಪಕ್ಷ ನನಗೆ ಮುಂದೆ ರಾಜಕೀಯ ಸ್ಥಾನಮಾನ ಕೊಡಬೇಕು ಅದನ್ನ ಪಕ್ಷ ಕೊಡುತ್ತದೆ ಎಂದಿದ್ದಾರೆ.

Share This Article