ಬೆಂಗಳೂರು; ಇತ್ತೀಚೆಗಷ್ಟೇ ನಟಿ ನೇಹಾಗೌಡ ಹಾಗೂ ಚಂದನ್ ಗೌಡ ಅವರು ತಮ್ಮ ಮಗಳ ನಾಮಕರಣವನ್ನು ಮಾಡಿದ್ದಾರೆ. ಕುಟುಂಬಸ್ಥರು, ಸ್ನೇಹಿತರು, ಬಂಧು ಬಳಗದವರನ್ನ ಕರೆದು ಅದ್ದೂರಿಯಾಗಿ ನೆರವೇರಿಸಿದ್ದಾರೆ. ಮಗಳಿಗೆ ಶಾರದಾ ಎಂಬ ಹೆಸರನ್ನ ಇಟ್ಟಿದ್ದಾರೆ. ಈ ಹೆಸರಿನ ಬಗ್ಗೆಯೇ ಸಾಕಷ್ಟು ಚರ್ಚೆ ಆಗ್ತಾ ಇದೆ. ಇದಕ್ಕೆ ಅವರ ತಂದೆ ರಾಮಕೃಷ್ಣ ಅವರೇ ಉತ್ತರ ನೀಡಿದ್ದಾರೆ.

ಈಗಂತೂ ಜನ ಹೊಸ ಹೊಸ ಹೆಸರುಗಳನ್ನೇ ಇಡುತ್ತಾರೆ. ಅದರಲ್ಲೂ ಇಂಗ್ಲೀಷ್ ಟೋನ್ ಇರುವಂತ ಹೆಸರು ಬರುತ್ತಿವೆ. ಆದ್ದರಿಂದ ಮೊಮ್ಮಗಳಿಗೆ ನಮ್ಮ ಪರಂಪರೆಯ, ನಮ್ಮ ಸಂಸ್ಕೃತಿ ಇದೆಲ್ಲಾ ಬಿಂಬಿತವಾಗುವಂತ ಹೆಸರನ್ನ ಇಡಬೇಕು ಅನ್ನಿಸಿತು. ಹೀಗಾಗಿ ಶಾರದ ಎಂಬ ಹೆಸರನ್ನ ಇಟ್ಟಿದ್ದೇವೆ. ಈ ಹೆಸರನ್ನು ಕೇಳಿದ ಎಲ್ಲರಿಗೂ ಖುಷಿ ಕೊಟ್ಟಿದೆ. ಅದ್ದರಿಂದ ನಮ್ಮೆಲ್ಲರಿಗೂ ಖುಷಿಯಾಗಿದೆ. ಶಾರದೆ ನಮ್ಮ ವಿದ್ಯಾದೇವತೆ. ವಿದ್ಯೆಗೆ ಆಕೆಯೇ ಅಧಿಪತಿ. ಈ ಹೆದರಿಟ್ಟಿರುವುದು ಖುಷಿ ಕೊಟ್ಟಿದೆ ಎಂದಿದ್ದಾರೆ.

ಮಕ್ಕಳಿಗೆ ಅಕ್ಷರ ಚೆನ್ನಾಗಿ ತಲೆಗೆ ಹೋಗಲಿ, ವಿದ್ಯೆ ಒಲಿಯಲಿ ಎಂಬ ಕಾರಣಕ್ಕೆ ಸಾಕಷ್ಟು ಜನ ಶೃಂಗೇರಿ ಶಾರದಾ ಪೀಠಕ್ಕೆ ಹೋಗಿ ಈಗಲೂ ಅಕ್ಷರಾಭ್ಯಾಸ ಮಾಡಿ ಬರುತ್ತಾರೆ. ಹೀಗಾಗಿ ನೇಹಾ ಗೌಡ ಮತ್ತು ಚಂದನ್ ದಂಪತಿ ಮಗುವಿಗೆ ಶಾರದಾ ಎಂಬ ಹೆಸರನ್ನೇ ಇಟ್ಟಿದ್ದಾರೆ. ಶಾರದಾ ಎಂಬ ಹೆಸರು ಕೇಳುವುದಕ್ಕೂ ಹಿತ ಎನಿಸುತ್ತದೆ. ಕರೆಯುವುದಕ್ಕೂ ಖುಷಿ ಎನಿಸುತ್ತದೆ. ಕೊಂಚ ಹಿಂದಿನ ಕಾಲದ ಹೆಸರೇ ಆದರೂ ಆ ಹೆಸರಿನ ಮೇಲೆ ಎಲ್ಲರಿಗೂ ಅಪಾರವಾದ ಗೌರವ ಇರುವುದು ಕಾಣಿಸುತ್ತದೆ. ಇನ್ಮುಂದೆ ನೇಹಾ ಮಗಳು ಶಾರದೆಯಾಗಿ ನಲಿಯುತ್ತಾಳೆ.

