Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

---Advertisement---

ಇದ್ದಕ್ಕಿದ್ದ ಹಾಗೇ ಶಾಸಕ ದರ್ಶನ್ ಪುಟ್ಟಣ್ಣಯ್ಯ ಅಮೆರಿಕಾಗೆ ತೆರಳಿದ್ಯಾಕೆ..? ಮತ್ತೆ ವಾಪಸ್ ಆಗೋದು ಯಾವಾಗ..?

---Advertisement---

 

 

ಮಂಡ್ಯ: ಶಾಸಕ ದರ್ಶನ್ ಪುಟ್ಟಣ್ಣಯ್ಯ ಈ ಮೊದಲು ಇದ್ದದ್ದು ಕೂಡ ಅಮೆರಿಕಾದಲ್ಲಿಯೇ‌‌. ಆದರೆ ಚುನಾವಣೆಗೂ ಮುನ್ನ ಮೇಲುಕೋಟೆಗೆ ಬಂದು, ಚುನಾವಣೆಯಲ್ಲೂ ಸ್ಪರ್ಧೆ‌ ಮಾಡಿದರು. ಗೆಲುವನ್ನು ಕಂಡರು. ರೈತ ನಾಯಕ ಎಂದೇ ಖ್ಯಾತಿ ಪಡೆದಿದ್ದಾರೆ. ಯಾವಾಗಲೂ ಹಸಿರು ಶಾಲನ್ನು ತನ್ನ ಹೆಗಲ‌ ಮೇಲೆ ಹಾಕಿಕೊಂಡು ರೈತರಿಗೆ ಬೆಂಬಲವಾಗಿ‌ ನಿಂತಿದ್ದಾರೆ.

ಅಮೆರಿಕಾದಲ್ಲಿ ಒಳ್ಳೆ ಕಂಪನಿಯಲ್ಲಿ ಕೆಲಸದಲ್ಲಿದ್ದ ದರ್ಶನ್ ಪುಟ್ಟಣ್ಣಯ್ಯ, ಚುನಾವಣೆಯಲ್ಲಿ ನಿಂತ ಬಳಿಕ ಒಂದಷ್ಟು ಜನ ಅವರ ಬಗ್ಗೆ ಮಾತನಾಡಿದ್ದರು. ಚುನಾವಣೆ ಮುಗಿದ ಬಳಿಕ ಅಮೆರಿಕಾಗೆ ಹೋಗಿ ಬಿಡುತ್ತಾರೆ ಅಂತ. ಸದ್ಯ ಚುನಾವಣೆ ಮುಗಿದು ಶಾಸಕರು ಕೂಡ ಆಗಿದ್ದಾರೆ. ಈಗ ಅಮೆರಿಕಾಗೂ ತೆರಳಿದ್ದಾರೆ. ಆದರೆ ವಾಪಾಸ್ ಇಷ್ಟರಲ್ಲೇ ಬರಲಿದ್ದಾರೆ.

ದರ್ಶನ್ ಪುಟ್ಟಣ್ಣಯ ಹೆಂಡತಿ ಮತ್ತು ಮಕ್ಕಳು ಅಮೆರಿಕಾದಲ್ಲಿಯೇ ಇದ್ದಾರೆ. ಹೀಗಾಗಿ ಚುನಾವಣೆ ಮುಗಿದ ಮೇಲೆ ಕುಟುಂಬಸ್ಥರನ್ನು ನೋಡಿಕೊಂಡು ಬರುವುದಕ್ಕೆ ದರ್ಶನ್ ಪುಟ್ಟಣ್ಣಯ್ಯ ತೆರಳಿದ್ದಾರೆ. ಚುನಾವಣೆ ಸಮಯದಲ್ಲಿ ದರ್ಶನ್ ಪುಟ್ಟಣ್ಣಯ್ಯ ಅವರ ಹೆಂಡತಿ ಕೂಡ ರಾಜ್ಯಕ್ಕೆ ಬಂದು ಪ್ರಚಾರ ನಡೆಸಿ ಹೋಗಿದ್ದರು. ಜೂನ್ 12ಕ್ಕೆ ವಾಪಾಸ್ ಬರಲಿದ್ದಾರೆ ಎನ್ನಲಾಗಿದೆ. ದರ್ಶನ್ ಪುಟ್ಟಣ್ಣಯ್ಯ ಅವರ ತಾಯಿಯೇ ಈ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment

🏫 ಅಡ್ಮಿಷನ್ ಓಪನ್
🔒

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್

ಸ್ವಾಗತ...