ಖಮೇನಿ 45 ವರ್ಷಗಳ ಕಾಲ ಒಂದು ಕೈಯನ್ನು ಬಟ್ಟೆಯೊಳಗೆ ಮರೆಮಾಡಿದ್ದೇಕೆ?

ಅಯತೊಲ್ಲಾ ಅಲಿ ಖಮೇನಿಯನ್ನು ಶನಿವಾರ ಅವರ ಕಚೇರಿಯಲ್ಲಿಯೇ ಹತ್ಯೆ ಮಾಡಲಾಗಿದೆ.ಎಂಟು ವರ್ಷಗಳ ಮೊದಲು, ಆಗಿನ ಇರಾನ್ ಅಧ್ಯಕ್ಷರಾಗಿದ್ದ ಖಮೇನಿ ಈ ಹಿಂದೆ ಒಮ್ಮೆ ಹತ್ಯೆಯ ಟಾರ್ಗೆಟ್ ನಿಂದ ಬದುಕುಳಿದಿದ್ದರು ಆದರೆ ಶಾಶ್ವತವಾದ ಗಾಯವನ್ನು ಅನುಭವಿಸಿದ್ದರು.

ಜೂನ್ 27, 1981 ರಂದು, ಇರಾನ್-ಇರಾಕ್ ಯುದ್ಧದಿಂದ  ಹಿಂದಿರುಗಿದ ನಂತರ ಅವರು ಪ್ರಾರ್ಥನೆ ಮಾಡಲು ಮಸೀದಿಗೆ ಹೋದರು. ಪ್ರಾರ್ಥನೆಯ ನಂತರ, ಅವರು ತಮ್ಮ ಅನುಯಾಯಿಗಳೊಂದಿಗೆ ಮಾತನಾಡಿದರು. ಆದರೆ ಬಲಗೈ, ಧ್ವನಿ ಪಟ್ಟಿ ಮತ್ತು ಶ್ವಾಸಕೋಶಗಳಿಗೆ ಗಾಯಗಳಾಗಿದ್ದ ಖಮೇನಿಗೆ ನಂತರ ಚೇತರಿಸಿಕೊಳ್ಳಲು ಹಲವಾರು ತಿಂಗಳುಗಳು ಬೇಕಾಯಿತು. ಕೆಲವು ಗಾಯಗಳು ಗುಣವಾದರೂ, ಅವರ ಬಲಗೈ ಶಾಶ್ವತವಾಗಿ ಪಾರ್ಶ್ವವಾಯುವಿಗೆ ಒಳಗಾಯಿತು.

ನನಗೆ ಕೈ ಅಗತ್ಯವಿಲ್ಲ. ನನ್ನ ಮೆದುಳು ಮತ್ತು ನಾಲಿಗೆ ಕೆಲಸ ಮಾಡಿದರೆ ಸಾಕು” ಎಂದು ಅವರು ಹೇಳಿದರು. ಅವರು ತಮ್ಮ ಎಡಗೈಯಿಂದ ಬರೆಯಲು ಕಲಿತರು ಮತ್ತು ನಂತರ ಧಾರ್ಮಿಕ ಸಂಸ್ಥೆಯ ಆಂತರಿಕ ನಾಯಕತ್ವದ ಸದಸ್ಯರಾದರು. 86 ವರ್ಷ ವಯಸ್ಸಿನ ಖಮೇನಿ ಇರಾನ್ ನ್ನು 35 ವರ್ಷಗಳ ಕಾಲ ಮುನ್ನಡೆಸಿದರು, ಇದು ಅವರನ್ನು ವಿಶ್ವದ ಅತಿ ಹೆಚ್ಚು ಕಾಲ ಆಡಳಿತ ನಡೆಸಿದ ಆಡಳಿತಗಾರರಲ್ಲಿ ಒಬ್ಬರನ್ನಾಗಿ ಮಾಡಿತು.

Share This Article
Enable Notifications OK No thanks