ಬೆಂಗಳೂರು: ಗುತ್ತುಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ವಿಚಾರದಲ್ಲಿ ಈಶ್ವರಪ್ಪ ರಾಜೀನಾಮೆಗೆ ಪಟ್ಟು ಹಿಡಿದಿರುವ ಕಾಂಗ್ರೆಸ್ ಪ್ರತಿಭಟನೆ ನಡೆಸುತ್ತಿದೆ. ಈ ಬಗ್ಗೆ ಮಾಜಿ ಸಿಎಂ ಸಿದ್ದರಾಮಯ್ಯ ಮಾತನಾಡಿ, ಬಸವರಾಜ್ ಬೊಮ್ಮಾಯಿ ಅವರು ಕೂಡ ಅವರಿಗೆ ಸಪೋರ್ಟ್ ಮಾಡುತ್ತಿದ್ದಾರೆ. 40% ಕಮೀಷನ್ ಅವರ ಇಡೀ ಸರ್ಕಾರದ ಮೇಲಿದೆ. ಕೆಂಪಣ್ಣ ಅವರು ನಿನ್ನೆ ಕೂಡ ಪ್ರೆಸ್ ಮೀಟ್ ಮಾಡಿ ಹೇಳಿದ್ದಾರೆ. ಈ ಭ್ರಷ್ಟಾಚಾರದಲ್ಲಿ ಅವರು ಕೂಡ ಭಾಗಿಯಾವಿದ್ದಾರೆ. ಅದಕ್ಕೆ ಇವರಿಗೆ ಪ್ರೊಟೆಕ್ಷನ್ ಕೊಡುತ್ತಾ ಇದ್ದಾರೆ. ನಮ್ಮ ಡಿಮ್ಯಾಂಡ್ ಇರುವುದು ಅವರ ಮೇಲೆ ಕೇಸ್ ದಾಖಲಾಗಬೇಕು, ಅರೆಸ್ಟ್ ಮಾಡಬೇಕು, ಅವರನ್ನು ವಜಾ ಮಾಡಬೇಕು.
ಅವರಿಗೆ ಮಾನ ಮರ್ಯಾದೆ ಇದ್ದಿದ್ದರೆ ಕೇಸ್ ರಿಜಿಸ್ಟರ್ ಆದ ಕೂಡಲೆ, ಈಶ್ವರಪ್ಪ ನಂಬರ್ ಇನ್ ಆರೋಪಿ. ಬಿಜೆಪಿಯವರಿದ್ದಾರಲ್ಲ ಅವರು ಲಜ್ಜೆಗೆಟ್ಟ ಜನ, ಭಂಡರು. ಈಶ್ವರಪ್ಪ ಅಧಿಕಾರದಲ್ಲಿಯೇ ಇದ್ದರೆ ವಿಚಾರಣೆ ಆಗುತ್ತಾ, ನ್ಯಾಯ ಸಿಗುತ್ತಾ..? ಬೇರೆಯವರಾಗಿದ್ದರೆ ಇಷ್ಟೊತ್ತಿಗೆ ಅರೆಸ್ಟ್ ಮಾಡುತ್ತಿರಲಿಲ್ವಾ. ಮರ್ಡರ್ ಕೇಸ್ ನಲ್ಲಿ ಹೆಸರು ಕೇಳಿ ಬಂದಿದೆ. ಬಸವರಾಜ್ ಬೊಮ್ಮಾಯಿ ಅವರು ಪ್ರೊಟೆಕ್ಟ್ ಮಾಡ್ತಿದ್ದಾರೆ. ಅವರನ್ನು ಅರೆಸ್ಟ್ ಮಾಡಿಸುತ್ತಿಲ್ಲ, ರಾಜೀನಾಮೆ ಕೊಡಬೇಕಿಲ್ಲ ಅಂತಾರೆ, ತನಿಖೆ ಆಗುತ್ತೆ ಅಂತ ಹೇಳ್ತಿದ್ದಾರೆ. ಅದಕ್ಕೆ ನಾವೂ ನಿಷ್ಪಕ್ಷಪಾತದ ತನಿಖೆಗೆ ಒತ್ತಾಯಿಸುತ್ತಿದ್ದೇವೆ.
ಈಶ್ವರಪ್ಪ ಏನು ಹೇಳ್ತಾನೆ ನಂಗೆ ಸಂತೋಷ್ ಗೊತ್ತೆ ಇಲ್ಲ ಅಂತ. ಆದ್ರೆ ಸಂತೋಷ್ ಈಶ್ವರಪ್ಪರನ್ನು ಭೇಟಿ ಮಾಡಿರುವ ಚಿತ್ರಗಳೆಲ್ಲಾ ಇದೆ. ಅಲ್ಲಿನ ಲೋಕೇಶ್ ಎಂಬಾತ ಚೇರ್ ಮೆನ್ ಹೇಳ್ತಾನೆ ನಾನು ಸಂತಿಒಷ್ ಒಟ್ಟಿಗೆ ಹೋಗಿದ್ದೀವಿ ಈಶ್ವರಪ್ಪರನ್ನು ನೋಡೋದಕ್ಕೆ ಅಂತ. ಕೆಲಸ ಮಾಡಿರುವುದು ನಿಜ. ಕೆಲಸ ಮಾಡಿ ಹಣ ಕೊಡ್ತೀವಿ ಅಂತ ಈಶ್ವರಪ್ಪ ಅವರೇ ಹೇಳಿದ್ದರು ಅಂತ ಲೋಕೇಶ್ ಹೇಳ್ತಾನೆ. ನನ್ನ ಎದುರುಗಡೆನೇ ಹೇಳೀದ್ದಾರೆ. ಎರಡ್ಮೂರು ಸಲ ಭೇಟಿ ಮಾಡಿದ್ದೀನಿ ಎಂದಿದ್ದಾರೆ. ಇದೇ ಹೈ ವಿಟ್ನೆಸ್. ಕೆಲಸ ಆಗಿದೆ. ಈಶ್ವರಪ್ಪ ಹೇಳದೆ ಯಾರಾದ್ರೂ ಕೆಲಸ ಮಾಡೋದಕ್ಕೆ ಆಗುತ್ತಾ..? ಕಾಂಟ್ಯಾಕ್ಟರ್ ಯಾರೇ ಇರಲಿ ಮಿನಿಸ್ಟರ್ ಹೇಳದೆ, ಸರ್ಕಾರದವರು ಹೇಳದೆ ಕೆಲಸವಾಗುತ್ತಾ..? ಅದು ನಾಲ್ಕು ಕೋಟಿ ಕೆಲಸನಾ..? ಎಂದು ಪ್ರಶ್ನಿಸಿದ್ದಾರೆ.