ಸದ್ಯ ಬಹುಮತದೊಂದಿಗೆ ಸರ್ಕಾರ ರಚನೆ ಮಾಡುವುದಕ್ಕೆ ಕಾಂಗ್ರೆಸ್ ಪಕ್ಷ ಸಿದ್ಧವಾಗಿ ನಿಂತಿದೆ. ಆದರೆ ಸಿಎಂ ಯಾರಾಗ್ತಾರೆ ಎಂಬುದೇ ಕಗ್ಗಂಟಾಗಿದೆ. ಕಾಂಗ್ರೆಸ್ ಪಕ್ಷದೊಳಗೆ ಡಿಕೆ ಶಿವಕುಮಾರ್ ಮತ್ತು ಮಾಜಿ ಸಿಎಂ ಸಿದ್ದರಾಮಯ್ಯ ಅವರ ನಡುವೆಯೇ ಕಾಂಪಿಟೇಷನ್ ಇದೆ. ಹೀಗಾಗಿ ಸಿಎಂ ಸ್ಥಾನದ ಬಗ್ಗೆ ಹೈಕಮಾಂಡ್ ನಿರ್ಧಾರ ಮಾಡಲಿದೆ.
ಈ ಮಧ್ಯೆ ಮತ್ತೊಂದು ಪ್ರಶ್ನೆ ಸಂಪುಟಕ್ಕೆ ಯಾರೆಲ್ಲಾ ಸೇರ್ಪಡೆಯಾಗ್ತಾರೆ ಎಂಬುದು ಕೂಡ ಕುತೂಹಲವಾಗಿದೆ. ಆ ಸಂಭಾವ್ಯರ ಪಟ್ಟಿ ಇಲ್ಲಿದೆ. ಜಿ ಪರಮೇಶ್ವರ್, ಕೆ ಹೆಚ್ ಮುನಿಯಪ್ಪ, ಕೃಷ್ಣ ಭೈರೇಗೌಡ, ಎಂ ಬಿ ಪಾಟೀಲ್, ಸತೀಶ್ ಜಾರಕಿಹೊಳಿ, ರಾಮಲಿಂಗಾ ರೆಡ್ಡಿ, ಹೆಚ್ ಸಿ ಮಹದೇವಪ್ಪ, ಯು ಟಿ ಖಾದರ್, ಟಾರ್ ವಿ ದೇಶಪಾಂಡೆ, ಹೆಚ್ ಕೆ ಪಾಟೀಲ್.
ಲಕ್ಷ್ಮಣ ಸವದಿ, ದಿನೇಶ್ ಗುಂಡೂರಾವ್, ಪ್ರಿಯಾಂಕ್ ಖರ್ಗೆ, ರಾಘವೇಂದ್ರ ಹಿಟ್ನಾಳ್, ಡಾ. ಅಜಯ್ ಸಿಂಗ್, ಟಿ ಡಿ ರಾಜೇಗೌಡ, ಎಂ ಕೃಷ್ಣಪ್ಪ, ಟಿ ಬಿ ಜಯಚಂದ್ರ, ಜಮೀರ್ ಅಹ್ಮದ್ ಖಾನ್, ಚೆಲುವರಾಯಸ್ವಾಮಿ, ತನ್ವೀರ್ ಸೇಠ್, ಮಧು ಬಂಗಾರಪ್ಪ, ಸಂತೋಷ್ ಲಾಡ್, ಕೆ ಜೆ ಜಾರ್ಜ್, ಆರ್ ಬಿ ತಿಮ್ಮಾಪುರ, ಶರಣಬಸಪ್ಪ ದರ್ಶನಾಪುರ, ಎಸ್ ಎಸ್ ಮಲ್ಲಿಕಾರ್ಜುನ, ಡಿ.ಸುಧಾಕರ್,ಬಿ.ಜಿ.ಗೋವಿಂದಪ್ಪ, ಪುಟ್ಟರಂಗಶೆಟ್ಟಿ, ಲಕ್ಷ್ಮೀ ಹೆಬ್ಬಾಳ್ಕರ್, ಕೆ ಎನ್ ರಾಜಣ್ಣ, ಬಿ ಕೆ ಹರಿಪ್ರಸಾದ್, ಭೈರತಿ ಸುರೇಶ್, ಈಶ್ವರ್ ಖಂಡ್ರೆ ಇರಲಿದ್ದಾರೆ ಎನ್ನಲಾಗಿದೆ.