ಕಳೆದ ಒಂದು ದಶಕಕ್ಕೂ ಹೆಚ್ಚು ಕಾಲ ದೇಶವನ್ನು ಮುನ್ನಡೆಸುತ್ತಿರುವ ಮೋದಿಯವರು ಕಟ್ಟಿರುವ ಬಿಜೆಪಿ ಕೋಟೆಗೆ ಮುಂದಿನ ಅಧಿಪತಿ ಯಾರು? ನಮೋ ಸಾಮ್ರಾಜ್ಯದ ಉತ್ತರಾಧಿಕಾರಿ ಪಟ್ಟ ಯಾರಿಗೆ ಸಿಗಲಿದೆ? ಎಂಬ ಚರ್ಚೆ ಈಗ ರಾಜಕೀಯ ವಲಯದಲ್ಲಿ ಪ್ರಾರಂಭವಾಗಿದೆ.
ಉತ್ತರ ಪ್ರದೇಶವನ್ನು ಯಾರು ಗೆಲ್ಲುತ್ತಾರೋ ಅವರು ದೆಹಲಿಯನ್ನು ಆಳುತ್ತಾರೆ ಎಂಬ ಮಾತು ರಾಜಕಾರಣದಲ್ಲಿದೆ. ಹಾಗಾಗಿ ಮೋದಿ ಉತ್ತರಾಧಿಕಾರಿಯ ರೇಸ್‌ನಲ್ಲಿ ಅತಿ ಹೆಚ್ಚು ಕೇಳಿ ಬರುತ್ತಿರುವ ಹೆಸರು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರದ್ದು.

ಮೋದಿಯವರ ನಂತರ ಬಿಜೆಪಿಯ ಸಾರಥ್ಯ ವಹಿಸುವ ಸಾಮರ್ಥ್ಯವಿರುವ ಮತ್ತೊಬ್ಬ ಪ್ರಭಾವಿ ನಾಯಕ ಅಮಿತ್ ಶಾ. ಮೋದಿಯವರ ‘ಬಲಗೈ ಬಂಟ’ ಎಂದೇ ಕರೆಸಿಕೊಳ್ಳುವ ಅಮಿತ್ ಶಾ ಕೂಡ ರೇಸ್ ನಲ್ಲಿ ಇದ್ದಾರೆ. ಚಾಣಕ್ಯ’ ಎಂದೇ ಹೆಸರುವಾಸಿ. ಕಠಿಣ ನಿರ್ಧಾರಗಳನ್ನು ತೆಗೆದುಕೊಳ್ಳುವ ಸಾಮರ್ಥ್ಯ ಇವರಲ್ಲಿದೆ ಎನ್ನುತ್ತಿದ್ದಾರೆ ಜನ.
ಯೋಗಿ ಮತ್ತು ಅಮಿತ್ ಶಾ ಅವರ ಜೊತೆಗೆ ಕೇಳಿ ಬರುತ್ತಿರುವ ಮತ್ತೊಂದು ಹೆಸರು ಮಹಾರಾಷ್ಟ್ರದ ಪ್ರಬಲ ನಾಯಕ ದೇವೇಂದ್ರ ಫಡ್ನವೀಸ್. ಫಡ್ನವೀಸ್, ಬಿಜೆಪಿಯ ಭವಿಷ್ಯದ ನಾಯಕರಲ್ಲಿ ಪ್ರಮುಖರಾಗಿದ್ದಾರೆ. ರಾಷ್ಟ್ರೀಯ ಮಟ್ಟದಲ್ಲಿ ಜವಾಬ್ದಾರಿಯನ್ನು ನಿರ್ವಹಿಸಬಲ್ಲ ಸಾಮರ್ಥ್ಯ ಇವರಿಗಿದೆ ಎಂಬುದು ರಾಜಕೀಯ ವಿಶ್ಲೇಷಕರ ಅಭಿಪ್ರಾಯ.
ಇನ್ನೊಂದೇ ವರ್ಷದಲ್ಲಿ ದೇಶದ ರಾಜಕೀಯ ಚಿತ್ರಣ ಬದಲಾಗುವ ಸಾಧ್ಯತೆಯಿದ್ದು, ಯೋಗಿ ಆದಿತ್ಯನಾಥ್, ಅಮಿತ್ ಶಾ ಅಥವಾ ದೇವೇಂದ್ರ ಫಡ್ನವೀಸ್ – ಇವರಲ್ಲಿ ಯಾರು ಮೋದಿಯವರ ಪಟ್ಟದ ವಾರಸ್ದಾರರಾಗಲಿದ್ದಾರೆ ಎಂಬ ರಹಸ್ಯ ಸದ್ಯದಲ್ಲೇ ಬಯಲಾಗಲಿದೆ.
ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ
ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.
ವರದಿ ಮಾಡುವುದು ಹೇಗೆ?
- ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ನಾವು ಏನು ಮಾಡುತ್ತೇವೆ?
- ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
- ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
- ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.











