ಬೆಂಗಳೂರು: ರೋಜರ್ ಬಿನ್ನಿ ಇದೀಗ ಬಿಸಿಸಿಐ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ್ದಾರೆ. ಆದರೆ ಅವರಿದ್ದ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ ಅಧ್ಯಕ್ಷ ಸ್ಥಾನದ ತೆರವಾಗಿದ್ದು, ಅದರ ಮುಂದಿನ ಅಧ್ಯಕ್ಷರಾಗುವವರು ಯಾರು ಎಂಬ ಪ್ರಶ್ನೆ ಎದುರಾಗಿದೆ. ಇಂದು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ರೋಜರ್ ಬಿನ್ನಿಗೆ ಸನ್ಮಾನ ಕಾರ್ಯಕ್ರಮ ನಡೆಯಲಿದೆ.
ಕಾರ್ಯಕ್ರಮ ಮುಗಿದ ಬಳಿಕ ಸಭೆ ನಡೆಸಲಿದ್ದು, ಸಬೆಯಲ್ಲಿ ಹಂಗಾಮಿ ಅಧ್ಯಕ್ಷರನ್ನು ನೇಮಕ ಮಾಡಲಾಗುತ್ತದೆ. ಒಂದು ವಾರದ ಬಳಿಕ ಅಧ್ಯಕ್ಷೀಯ ಸ್ಥಾನಕ್ಕೆ ಚುನಾವಣೆ ನಡೆಯಲಿದೆ. ಸದ್ಯ ಕೆ ಎಸ್ ಸಿ ಎ ಖಜಾಂಚಿಯಾಗಿರುವ ವಿನಯ್ ಮೃತ್ಯುಂಜಯ ಅವರನ್ನೇ ಹೆಸರು ಮುಂಚೂಣಿಯಲ್ಲಿದ್ದಾರೆ. ಯಾಕಂದ್ರೆ ವಿನಯ್ ಕಳೆದ ಕೆಲವು ವರ್ಷಗಳಿಂದ ಕೆಎಸ್ಸಿಎ ಆಡಳಿತ ಮಂಡಳಿಯಲ್ಲಿ ಸಕ್ರೀಯವಾಗಿದ್ದಾರೆ.
ರೋಜರ್ ಬಿನ್ನಿ 2019ರಲ್ಲಿ ಬಹುಮತ ಪಡೆದು ಕೆಎಸ್ಸಿಎನ ಅಧ್ಯಕ್ಷ ಸ್ಥಾನ ಅಲಂಕರಿಸಿದ್ದರು. ಈಗ ಅವರು ಬಿಸಿಸಿಐ ಅಧ್ಯಕ್ಷರಾದ ಬಳಿಕ ಕೆಎಸ್ಸಿಎ ಅಧ್ಯಕ್ಷ ಸ್ಥಾನಕ್ಕೆ ಪೈಪೋಟಿ ಶುರುವಾಗಿದೆ. ಹೀಗಾಗಿ ಅಧ್ಯಕ್ಷ ಸ್ಥಾನವನ್ನು ಎಲೆಕ್ಷನ್ ಮೂಲಕವೇ ನಿರ್ಧಾರ ಮಾಡಲಾಗುತ್ತದೆ.