ಬೆಂಗಳೂರಿನಲ್ಲಿ ಕೊಲೆಯಾದ ರೇಣುಕಾಸ್ವಾಮಿ ಯಾರು..?

suddionenews
1 Min Read

ಸುದ್ದಿಒನ್, ಬೆಂಗಳೂರು, ಜೂ. 11 : ಪವಿತ್ರಾ ಗೌಡಗೆ ಕೆಟ್ಟದಾಗಿ‌ ಮೆಸೇಜ್ ಮಾಡಿದ ಆರೋಪದಲ್ಲಿ ಕೊಲೆಯಾಗಿರುವ ರೇಣುಕಾ ಸ್ವಾಮಿ, ಮೂಲತಃ ಚಿತ್ರದುರ್ಗದವರು. ತುರುವನೂರಿನ ಶ್ರೀ ಲಕ್ಷ್ಮೀ ವೆಂಕಟೇಶ್ವರ ಬಡಾವಣೆಯಲ್ಲಿ ವಾಸ ಮಾಡುತ್ತಿದ್ದ. ಕಾಶೀನಾಥ್ ಶಿವನಗೌಡ ಹಾಗೂ ರತ್ನಪ್ರಭಾ ದಂಪತಿಯ ಮಗ ಈ ರೇಣುಕಾ ಸ್ವಾಮಿ. ಅಪೋಲೋ ಮೆಡಿಕಲ್ ನಲ್ಲಿ ಕೆಲಸ ನಿರ್ವಹಿಸುತ್ತಿದ್ದ. ಇತ್ತಿಚೆಗೆ ಮದುವೆ ಕೂಡ ಆಗಿದ್ದ. ಸಹನಾ ರೇಣುಕಾಪ್ರಸಾದ್ ಎಂಬುವವರನ್ನು ಮದುವೆಯಾಗಿದ್ದರು. ಈಕೆ ಈಗ ಗರ್ಭಿಣಿಯಾಗಿದ್ದಾರೆ. ಈ ಪರಿಸ್ಥಿತಿಯಲ್ಲಿ ದುಃಖವನ್ನ ಅದೇಗೆ ತಡೆದುಕೊಳ್ಳುತ್ತಾರೋ ಏನೋ.

 

ನಿನ್ನೆ ಕಾಮಾಕ್ಷಿಪಾಳ್ಯ ಪೊಲೀಸರಿಂದ ಅವರ ಕುಟುಂಬಸ್ಥರಿಗೆ ವಿಷಯ ತಿಳಿಸಲಾಗಿದೆ. ಕುಟುಂಬಸ್ಥರು ಕೂಡ ಈಗಾಗಲೇ ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆಗೆ ಬಂದಿದ್ದಾರೆ. ಮಗನ ಶವವನ್ನು ಪೋಸ್ಟ್ ಮಾಟಮ್ ಬಳಿಕ ತೆಗೆದುಕೊಂಡು ಹೋಗಲಾಗುತ್ತದೆ. ರೇಣುಕಾಸ್ವಾಮಿಯನ್ನು ಚಿತ್ರದುರ್ಗದಿಂದ ಇಲ್ಲಿಗೆ ಕರೆಸಿದ್ದು ಯಾರು..? ಏನೆಲ್ಲಾ ಆಯ್ತು ಎಂಬ ಮಾಹಿತಿ ಇನ್ನಷ್ಟೇ ಬಹಿರಂಗವಾಗಬೇಕಿದೆ.

ರೇಣುಕಾಸ್ವಾಮಿಯನ್ನು ಚಿತ್ರದುರ್ಗದಿಂದ ಕಾಮಾಕ್ಷಿಪಾಳ್ಯದ ವಿನಯ್ ಅವರ ಶೆಡ್ ಗೆ ಕರೆತಂದು ಎಚ್ಚರಿಕೆ ಕೊಡಲಾಗಿದೆ. ಆ ವೇಳೆ ಆತನ ಡೆತ್ ಆಗಿದೆ. ಆರಂಭದಲ್ಲಿ ಕೊಲೆಯಾದ ವ್ಯಕ್ತಿ ಯಾರೆಂದು ತಿಳಿದಿರಲಿಲ್ಲ. ಆದರೆ ಎರಡು ದಿನಗಳ ಬಳಿಕ ಎಲ್ಲಾ ವಿಚಾರಗಳು ಬೆಳಕಿಗೆ ಬಂದಿವೆ. ಸೆಕ್ಯೂರಿಟಿ ಗಾರ್ಡ್ ಮೃತದೇಹವನ್ನು ನೋಡಿದ್ದರು. ತಕ್ಷಣ ಪೊಲೀಸರಿಗೆ ತಿಳಿಸಿದ್ದಾರೆ. ಸ್ಥಳಕ್ಕೆ ಬಂದ ಪೊಲೀಸರು ಆ ಮೃತದೇಹವನ್ನು ಪೋಸ್ಟ್ ಮಾಟಮ್ ಗೆ ಕಳುಹಿಸಲಾಗಿದೆ. ನಂತರ ಸತ್ಯ ಗೊತ್ತಾಗಿದೆ. ಸದ್ಯ ಈ ಪ್ರಕರಣದಲ್ಲಿ ದರ್ಶನ್ ಅವರನ್ನು ಬಂಧಿಸಲಾಗಿದೆ. ಈಗಾಗಲೇ ಪವಿತ್ರಾ ಗೌಡ ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ವಿಚಾರಣೆಯ ಬಳಿಕವಷ್ಟೇ ಎಲ್ಲಾ ಸತ್ಯಾಸತ್ಯತೆ ಹೊರ ಬರಲಿದೆ.

Share This Article
Leave a Comment

Leave a Reply

Your email address will not be published. Required fields are marked *