ರಾಮನಗರ: ಬಿಜೆಪಿ ಜೊತೆಗೆ ಮೈತ್ರಿ ಮಾಡಿಕೊಂಡ ಮೇಲೆ ಹೆಚ್.ಡಿ.ಕುಮಾರಸ್ವಾಮಿ ಅವರು ಕೇಂದ್ರ ಸಚಿವರಾಗಿ ಸೇವೆ ಮಾಡ್ತಾ ಇದ್ದಾರೆ. ಇದರ ನಡುವೆಯೂ ಮತ್ತೆ ರಾಜ್ಯ ರಾಜಕಾರಣಕ್ಕೆ ಬರ್ತೀನಿ ಅಂತ ಹೇಳಿದ್ದಾರೆ. ರಾಜ್ಯ ರಾಜಕಾರಣಕ್ಕೆ ಕುಮಾರಣ್ಣ ಬಂದ್ರೆ ಯಾವ ಪಕ್ಷದಿಂದ ನಿಲ್ಲಬಹುದು ಎಂಬ ಕುತೂಹಲ ಸಾಮಾನ್ಯ ಜನರಿಗೆ ಇದೆ. ಈ ಬಗ್ಗೆ ನಿಖಿಲ್ ಕುಮಾರಸ್ವಾಮಿ ಅವರು ಪ್ರತಿಕ್ರಿಯೆ ನೀಡಿದ್ದಾರೆ. ರಾಜ್ಯ ರಾಜಕಾರಣಕ್ಕೆ ಹೆಚ್.ಡಿ.ಕುಮಾರಸ್ವಾಮಿ ಅವರು ಬರ್ತಾರಾ, ಕ್ಷೇತ್ರಕ್ಕೆ ಬರ್ತಾರಾ ಅಂತ ಚರ್ಚೆ. ಮೊದಲು ರಾಜ್ಯಕ್ಕೆ ಬರ್ತಾರಾ ಎನ್ನುವ ವಿಚಾರಕ್ಕೆ ಉತ್ತರ ಕಂಡುಕೊಳ್ಳೋಣಾ. ಬಳಿಕ ಯಾವ ಕ್ಷೇತ್ರಕ್ಕೆ ಬರ್ತಾರೆ ಅನ್ನೋದನ್ನ ತೀರ್ಮಾನ ಆಗುತ್ತೆ.
ಕುಮಾರಣ್ಣ 4 ಬಾರಿ ಕ್ಷೇತ್ರ ಪ್ರತಿನಿಧಿಸಿದ್ದು ಅವರು ಮುಖ್ಯಮಂತ್ರಿಯಾಗಿ ಮಾಡಿದ ಹಲವಾರು ಕೆಲಸಗಳ ಬಗ್ಗೆ ಜನರಿಗೆ ಅರಿವಿದೆ. ಅಭಿವೃದ್ಧಿ ವಿಚಾರದಲ್ಲಿ ಅವರಿಗಿರುವ ದೂರದೃಷ್ಟಿ ಜನತೆಗೆ ಗೊತ್ತಿದೆ. ಇವತ್ತುಗೆ ಕಾಂಗ್ರೆಸ್ ಪಕ್ಷ ಬಂದು ಏನು ಮಾಡಿದೆ. ರಸ್ತೆಗಳು ಏನಾಗಿದೆ. ಪೆನ್ನು, ಪೇಪರ್ ಕೇಳುವ ಉಪ ಮುಖ್ಯಮಂತ್ರಿಗಳು ಏನು ಅಭಿವೃದ್ಧಿ ಮಾಡಿದ್ದಾರೆ ಎಂದು ಡಿಕೆ ಶಿವಕುಮಾರ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಇದೆ ವೇಳೆ ರಾಜ್ಯಪಾಲರನ್ನು ಕಾಂಗ್ರೆಸ್ ನಡೆಸಿಕೊಂಡ ರೀತಿಗೆ ಪ್ರತಿಕ್ರಿಯೆ ನೀಡಿದ್ದು, ರಾಜ್ಯಪಾಲರ ಘನತೆಗೆ ಕಾಂಗ್ರೆಸ್ ಅಗೌರವ ತೋರಿದೆ. ರಾಜ್ಯಪಾಲರ ಸ್ಥಾನಕ್ಕೆ ಒಂದು ಗೌರವ ಇದೆ. ಅವರು ಏನನ್ನು ಓದಬೇಕು ಎನ್ನುವುದು ಅವರಿಗೆ ಬಿಟ್ಟ ವಿಚಾರ. ಅವರ ಘನತೆಯನ್ನು ಕಾಂಗ್ರೆಸ್ ನವರು ಹಾಳು ಮಾಡಲು ಹೊರಟಿದ್ದಾರೆ. ರಾಜ್ಯಪಾಲರನ್ನ ಕಾಂಗ್ರೆಸ್ ಶಾಸಕರು ಅಡ್ಡಗಟ್ಟಿ ಧಿಕ್ಕಾರ ಕೂಗಿದ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು,ರಾಜ್ಯ ಸರ್ಕಾರ ಸದಾಕಾಲ ಕೇಂದ್ರದ ಜೊತೆ ಸಂಘರ್ಷ ಸರಿಯಲ್ಲಇದರಿಂದ ಹೋದ್ರೆ ರಾಜ್ಯದ ಜನತೆಯೇ ಬಡವಾಗುತ್ತಾರೆ ಎಂದು ನಿಖಿಲ್ ಅವರು ಕಿಡಿಕಾರಿದರು.






