ಬೆಂಗಳೂರು: ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಅಖಂಡ ಭಾರತ. ದಕ್ಷಿಣ ಭಾರತವನ್ನು ಬೇರೆ ರಾಷ್ಟ್ರವಾಗಿ ಮಾಡಬೇಕು ಎಂದು ಶಾಸಕ ವಿನಯ್ ಕುಲಕರ್ಣಿ ಮತ್ತು ಡಿಕೆ ಸುರೇಶ್ ಹೇಳಿದ್ದಾರೆ. ಈ ಇಬ್ಬರಯ ರಾಷ್ಟ್ರದ್ರೋಹಿಗಳನ್ನು ಪಕ್ಷದಿಂದ ಕಿತ್ತು ಬಿಸಾಕಿ. ಇದೇ ರೀತಿ ಮಾತನಾಡಿದರೆ ಇವರನ್ನು ಗುಂಡಿಕ್ಕಿ ಕೊಲ್ಲುವ ಕಾನೂನನ್ನು ಮೋದಿ ಜಾರಿಗೆ ತರಬೇಕು ಎಂದು ಮನವಿ ಮಾಡುತ್ತೇನೆ ಎಂದು ಕೆ ಎಸ್ ಈಶ್ವರಪ್ಪ ಅವರು ಹೇಳಿದ್ದರು. ಇದೀಗ ಈ ಹೇಳಿಕೆಗೆ ಡಿಸಿಎಂ ಡಿಕೆ ಶಿವಕುಮಾರ್ ಆಕ್ರೋಶ ಹೊರ ಹಾಕಿದ್ದಾರೆ.
ನಮ್ಮ ಸುದ್ದಿಗೆ ಬಂದವರದ್ದೆಲ್ಲಾ ಸೆಟಲ್ ಮೆಂಟ್ ಆಗಿದೆ. ಸಂಸದ ಡಿಕೆ ಸುರೇಶ್ ಅವರದ್ದು ಹೆದರುವ ಬ್ಲೆಡ್ ಅಲ್ಲ. ನಮ್ಮ ತಂಟೆಗೆ ಬಂದವರೆಲ್ಲಾ ಏನೇನಾಗಿದ್ದಾರೆ ಹೇಳಿ. ನಮ್ಮ ತಂದೆ ಬಗ್ಗೆ ಮಾತನಾಡಿದ ಈಶ್ವರಪ್ಪ ಈಗ ಎಲ್ಲಿದ್ದಾರೆ ಎಂದು ಪ್ರಶ್ನಿಸಿದ್ದಾರೆ.
ಈಶ್ವರಪ್ಪ ಬಳಿ ಕ್ಷಮೆ ಕೇಳಿ ಎಂದು ನಾವು ಹೇಳುತ್ತಿಲ್ಲ. ಅವನದ್ದು ಒಂದು ರೌಂಡ್ ಸೆಟಲ್ ಮೆಂಟ್ ಆಗಿದೆ. ಅಸೆಂಬ್ಲಿಯಲ್ಲೂ ಏನೋ ಮಾತನಾಡಿದ್ದರು. ನಮ್ಮ ತಂದೆಯವರನ್ನು ಅವರು ನೆನಪಿಸಿಕೊಂಡಿದ್ದರು. ಈಗ ಎಲ್ಲಿದ್ದಾರೆ ಈಶ್ವರಪ್ಪ..? ಯಾರೂ ನಮ್ಮ ಸುದ್ದಿಗೆ ಬಂದಿದ್ದಾರೋ ಅವರದ್ದೆಲ್ಲ ಸೆಟಲ್ ಮೆಂಟ್ ಆಗ್ತಿದೆ. ಗುಂಡಿಕ್ಕಿ ಕೊಲ್ತೀನಿ ಅಂದ್ರೆ ಕೊಲ್ಲಲಿ ಬಿಡಿ. ಡಿ ಕೆ ಸುರೇಶ್ ಆ ಗುಂಡಿಗೆ ಹೆದರುವ ಬ್ಲಡ್ ಅಲ್ಲ. ಕೆಂಪೇಗೌಡರ ಇತಿಹಾಸ ಗೊತ್ತಿದೆ ಅಲ್ವಾ..? ನಮಗೆ ನಮ್ಮದೆ ಆಗಿರುವ ಇತಿಹಾಸವಿದೆ. ನಮ್ಮ ಸುದ್ದಿಗೆ ಬಂದವರಿಗೆ ಸೆಟಲ್ ಮೆಂಟ್ ಆಗಿರುತ್ತದೆ ಎಂದು ಗೊತ್ತಿದೆ ಎಂದು ಈಶ್ವರಪ್ಪ ಅವರಿಗೆ ತಿರುಗೇಟು ನೀಡಿದ್ದಾರೆ.