ಬೆಂಗಳೂರು: ರಾಜ್ಯದಲ್ಲಿ ಹಿಜಾಬ್ ಹಾಗೂ ಕೇಸರಿ ಶಾಲೂ ವಿಚಾರ ಸಿಕ್ಕಾಪಟ್ಟೆ ಚರ್ಚೆ ನಡೆಯುತ್ತಿದೆ. ಈ ವಿವಾದದಿಂದ ಮಕ್ಕಳ ಶಾಲಾ ಕಾಲೇಜಿಗೆ ರಜೆ ಘೋಷಣೆ ಮಾಡಲಾಗಿದೆ. ಈ ವಿವಾದದ ಬಗ್ಗೆ ಇದೀಗ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಒಂದಷ್ಟು ಪ್ರಶ್ನಿಸಿದ್ದಾರೆ.
ಹಿಜಾಬ್ ವಿರೋಧಿಸ ಕೇಸರಿ ಶಾಲೂ ಧರಿಸಿ ವಿದ್ಯಾರ್ಥಿಗಳು ಕಾಲೇಜಿಗೆ ಬರ್ತಿದ್ದಾರೆ. ಈ ಬಗ್ಗೆ ಮಾತನಾಡಿರುವ ಡಿ ಕೆ ಶಿವಕುಮಾರ್, 50 ಲಕ್ಷ ಶಾಲೂಗಳನ್ನ ಸೂರತ್ ನಲ್ಲಿ ಆರ್ಡರ್ ಮಾಡಿದ್ದಾರೆ. ಈ ಬಗ್ಗೆ ನನಗೆ ಮಾಹಿತಿ ಇದೆ. ಈ ಕೇಸರಿ ಶಾಲೂ, ಪೇಟಾ ಎಲ್ಲಾ ಎಲ್ಲಿಂದ ಬಮನತು..? ನಮಗೇನು ಮಾಹಿತಿ ಇಲ್ಲ ಅಂದ್ಕೊಂಡಿದ್ದೀರಾ..? ನನ್ನ ಬಳಿ ಎಲ್ಲಾ ದಾಖಲೆ ಇದೆ. ಸಮಯ ಬಂದಾಗ ಎಲ್ಲಾ ಮಾತಾಡ್ತೇನೆ.
ಬಿಜೆಪಿಯವರು ನಮ್ಮ ಮೇಲೆ ಸುಖಾ ಸುಮ್ಮನೆ ಆರೋಪ ಮಾಡ್ತಾರೆ. ಆದರೆ ಪಿತೂರಿ ಎಲ್ಲಿಂದ ಬಂದಿದೆ ಗೊತ್ತಾ..? ಶಿವಮೊಗ್ಗದಲ್ಲಿ ಮಂತ್ರಿ ಮಗನೇ ಕೇಸರಿ ಶಾಲುಹ ಹಂಚಿದ್ದಾನೆ. ಮಕ್ಕಳಿಗೆ ಪ್ರಚೋದನೆ ಮಾಡವೇಡಿ. ಅವರ ಮನಸ್ಸಲ್ಲಿ ವಿಷ ಬೀಜ ಬಿತ್ತೋದು ಬೇಡ. ಕಾಸು ಕೊಟ್ಟು ಹುಡುಗರಿಗೆ ಪ್ರಚೋದನೆ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.